7

ಮಂಗಳೂರು: ಕನಕ ಭವನ ಉದ್ಘಾಟಿಸಿದ ಸಿದ್ದರಾಮಯ್ಯ

Published:
Updated:

ಮಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ಗುರುವಾರ ಮಧ್ಯಾಹ್ನ ಹಿಂದಿರುಗಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಕಾವೂರು ಶಾಂತಿನಗರದಲ್ಲಿ ಕುರುಬರ ಸಂಘದ ವತಿಯಿಂದ ನಿರ್ಮಿಸಿರುವ ಕನಕ ಭವನವನ್ನು ಉದ್ಘಾಟಿಸಿದರು.

ಬಳಿಕ ಕಟ್ಟಡ ವೀಕ್ಷಿಸಿದ ಅವರು ಕುರುಬ ಸಮುದಾಯದ ಜನರ ಯೋಗಕ್ಷೇಮ ವಿಚಾರಿಸಿದರು. ಸಂಘದ ಚಟುವಟಿಕೆ, ಕರಾವಳಿಯಲ್ಲಿ ನೆಲೆಸಿರುವ ಕುರುಬರ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಲು ನಿರಾಕರಿಸಿದ ಅವರು, ‘ನಾನು ಚಿಕಿತ್ಸೆ ಪಡೆಯಲು ಬಂದಿದ್ದೆ. ಮುಗಿಸಿ ಹೊರಟಿದ್ದೇನೆ. ಯಾವುದೇ ವಿಷಯ ಇಲ್ಲ. ಮಾಧ್ಯಮದ ಜೊತೆ ಮಾತನಾಡಬೇಕು ಎನಿಸಿದರೆ ನಾನೇ ಕರೆಯುವೆ’ ಎಂದರು.

‘ನೀವು ಗಟ್ಟಿಯಾಗಿ ನಿಲ್ಲಬೇಕು. ನೀವು ಮೃದುವಾದರೆ ರಾಜಕೀಯದಲ್ಲಿ ನಮಗೆ ನಾಯಕತ್ವವೇ ಇಲ್ಲದಂತಾಗುತ್ತದೆ. ಇನ್ನಷ್ಟು ಗಡುಸಾಗಿ ಮುನ್ನಡೆಯಿರಿ' ಎಂದು ಕುರುಬ ಸಮುದಾಯದ ಕೆಲವರು ಆಗ್ರಹಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 5

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !