ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿನರ್ಜಿಯಾ’ದಲ್ಲಿ ಮುದ ನೀಡಿದ ಏರ್‌ ಶೋ

Published 9 ಡಿಸೆಂಬರ್ 2023, 4:54 IST
Last Updated 9 ಡಿಸೆಂಬರ್ 2023, 4:54 IST
ಅಕ್ಷರ ಗಾತ್ರ

ಮಂಗಳೂರು: ವಿದ್ಯಾರ್ಥಿಗಳ ಬಹು ನಿರೀಕ್ಷಿತ ಏರ್‌ ಶೋ, ಏರೋ ಮಾಡೆಲಿಂಗ್, 20 ಗಂಟೆಗಳ ಹ್ಯಾಕಥಾನ್‌ನಂತಹ ವೈವಿಧ್ಯ ಚಟುವಟಿಕೆಗಳೊಂದಿಗೆ ‘ಸಿನರ್ಜಿಯಾ’ ತಂತ್ರಜ್ಞಾನ ಹಬ್ಬದ ಎರಡನೇ ದಿನ ಕೊನೆಗೊಂಡಿತು.

ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರ ಮಟ್ಟದ ‘ತಾಂತ್ರಿಕ ಮತ್ತು ನವೋದ್ಯಮ’ ಫೆಸ್ಟ್ ಅನ್ನು ಇಸ್ರೊ ಪ್ರಧಾನ ಕಚೇರಿಯ ಸಹಯೋಗಿ ನಿರ್ದೇಶಕ ಬಿ.ಎಚ್‌.ಎಂ. ದಾರುಕೇಶ್, ಕಸುರಾ ಟೆಕ್ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕ ವೆಮುರಿ ರಮಣ, ಅಮಡಾಕ್ಸ್‌ ಇಂಡಿಯಾ ಇನ್ನೊವೇಷನ್‌ ಮುಖ್ಯಸ್ಥ ಅಂಜನ್ ಬಿಸ್ವಾಸ್ ಜಂಟಿಯಾಗಿ ಉದ್ಘಾಟಿಸಿದರು. 

ಸಂಸ್ಥೆಯ ಟ್ರಸ್ಟಿ ಮತ್ತು ಸಿಇಒ ಜಾನ್ಸನ್ ಟೆಲ್ಲಿಸ್, ನಿರ್ದೇಶಕ ಮಂಜಪ್ಪ ಎಸ್, ಪ್ರಾಂಶುಪಾಲ ಎಸ್.ಎಸ್. ಇಂಜಗನೇರಿ, ಪ್ಲೇಸ್‌ಮೆಂಟ್ ಮುಖ್ಯಸ್ಥೆ ರಶ್ಮಿ ಭಂಡಾರಿ, ಕಮ್ಯುನಿಟಿ ವ್ಯವಸ್ಥಾಪಕ ವಿಷ್ಣು ಪ್ರದೀಪ್, ಟ್ರಸ್ಟಿ ದೇವದಾಸ್ ಹೆಗ್ಡೆ, ಶ್ರೀನಾಥ್, ರಮೇಶ್ ಹೆಗ್ಡೆ ಇದ್ದರು.

ಪ್ರಶಾಂತ್ ರಾವ್ ಸ್ವಾಗತಿಸಿದರು. ಪ್ರೊ. ಸೌಮ್ಯಶ್ರೀ ವಂದಿಸಿದರು.

ವಿಮಾನ ಚಾಲನಾ ಪ್ರಾವೀಣ್ಯದ ಪ್ರದರ್ಶನ, ನವೀನ ವಿಮಾನ ಪ್ರದರ್ಶನಗಳು ನಡೆದವು. ಶನಿವಾರ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್‌ನ ಸಮಾರೋಪ ಸಮಾರಂಭ ನಡೆಯಲಿದೆ.

ಮಂಗಳೂರಿನ  ಅಡ್ಯಾರ್‌ದಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ಏರ್‌ ಶೋ ವೀಕ್ಷಿಸಿದರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ  ಅಡ್ಯಾರ್‌ದಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ಏರ್‌ ಶೋ ವೀಕ್ಷಿಸಿದರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT