ಮಂಗಳೂರು: ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್‌ನ ಉದ್ಘಾಟನಾ ಸಮಾರಂಭ ಮತ್ತು ‘ಸಮರ್ಪಣಂ’ ವಿಶ್ವಕರ್ಮ ಕಲೋತ್ಸವ ಸಮಾರಂಭವು ಮಾ.26ರಂದು ಬೆಳಿಗ್ಗೆ 10 ಗಂಟೆಗೆ ನಗರದ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನ ಆವರಣದಲ್ಲಿ ನಡೆಯಲಿದೆ ಎಂದು ಎಂದು ವಿಶ್ವಕರ್ಮ ಕಲಾಪರಿಷತ್ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆನೆಗುಂದಿ ಸರಸ್ವತಿ ಪೀಠಾಧೀಶ್ವರ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿಶ್ವಕರ್ಮ ಕಲಾ ಪರಿಷತ್ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ವಿಶ್ವಕರ್ಮ ಕಲೋತ್ಸವವನ್ನು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ ಉದ್ಘಾಟಿಸುವರು. ದೇವಸ್ಥಾನದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಶುಭಾಶಂಸನೆ ಗೈಯ್ಯುವರು ಎಂದರು.

ಕ್ಷೇತ್ರದಲ್ಲಿ ಕಲಾಪೋಷಕರಾಗಿ ಸೇವೆ ಸಲ್ಲಿಸಿದ ಸ್ವರ್ಣಶಿಲ್ಪಿಗಳಾದ ಪಿ. ಶಿವರಾಮ ಆಚಾರ್ಯ ಕಂಕನಾಡಿ, ಮುನಿಯಾಲ್ ದಾಮೋದರ ಆಚಾರ್ಯ, ಪೈಯಾಲ್ ಭಾಸ್ಕರ ಆಚಾರ್ಯ, ಕಲಾ ಪೋಷಕಿ ಶಕುಂತಳಾ ಬಿ. ರಾವ್, ಚಲನಚಿತ್ರ ಕಲಾವಿದ ಯೋಗೀಶ್ ಬೋಳೂರು ಅವರನ್ನು ಗೌರವಿಸಲಾಗುವುದು. ಪ್ರಮುಖರಾದ ಎ. ಲೋಕೇಶ್ ಆಚಾರ್ಯ, ಪಿ.ಎನ್. ಆಚಾರ್ಯ, ಅಲೆವೂರು ಯೋಗೀಶ ಆಚಾರ್ಯ, ಕೆ. ಸತೀಶ ಆಚಾರ್ಯ ಕಾರ್ಕಳ, ದಿನೇಶ್ ಟಿ. ಶಕ್ತಿನಗರ, ಪ್ರೊ. ಜಿ. ಯಶವಂತ ಆಚಾರ್ಯ ಉಪಸ್ಥಿತರಿರುವರು ಎಂದು ಹೇಳಿದರು.

ಬೆಳಿಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ವಿವಿಧ ಪ್ರಕಾರಗಳ ಕಲಾಕೃತಿ ಪ್ರದರ್ಶನ, ಒಂದೇ ಹಾಡಿಗೆ ಐವರು ಕಲಾವಿದರಿಂದ ಕಲಾಕೃತಿಗಳ ರಚನೆ, ಕಾವ್ಯಕುಂಚ, ನೃತ್ಯಕುಂಚ ಸೇರಿದಂತೆ ವಿಭಿನ್ನ ರಂಗಪ್ರದರ್ಶನಗಳ ಮೂಲಕ ವಿಶ್ವಬ್ರಾಹ್ಮಣ ಕಲಾ ಪ್ರತಿಭೆಗಳು ಅನಾವರಣಗೊಳ್ಳಲಿವೆ ಎಂದರು.

ವಿಶ್ವಕರ್ಮ ಕಲಾ ಪರಿಷತ್ ಗೌರವಾಧ್ಯಕ್ಷ ಪಿ.ಎನ್. ಆಚಾರ್ಯ, ಪ್ರಮುಖರಾದ ಎ.ಜಿ. ಸದಾಶಿವ, ರತ್ನಾವತಿ ಜೆ.ಬೈಕಾಡಿ, ರಮ್ಯಾ ಲಕ್ಷ್ಮೀಶ ಆಚಾರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.