ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ, ಪದಕ ಗಳಿಕೆ ಸುಲಭವಲ್ಲ: ಜಾವೇದ್

Last Updated 23 ಜೂನ್ 2022, 2:47 IST
ಅಕ್ಷರ ಗಾತ್ರ

ಮಂಗಳೂರು: ಡಾಕ್ಟರೇಟ್ ಪದವಿ, ಚಿನ್ನದ ಪದಕ ಪಡೆಯುವುದು ಸುಲಭವೇನೂ ಅಲ್ಲ. ಆದ್ದರಿಂದ ಸಾಧಕರನ್ನು ಗೌರವಿಸಲು ಸಮಾಜ ಮುಂದಾಗಬೇಕು ಎಂದು ಯೆನೆಪೋಯ ವಿವಿ ಇಸ್ಲಾಮಿಕ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಾವೇದ್ ಜಮೀಲ್ ಹೇಳಿದರು.

ಅಖಿಲ ಭಾರತ ಬ್ಯಾರಿ ಪರಿಷತ್ ಆಶ್ರಯದಲ್ಲಿ ನಗರದ ಶ್ರೀನಿವಾಸ ಹಾಲ್‌ನಲ್ಲಿ ನಡೆದ ಸಾಧಕರನ್ನು ಗೌರವಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಧರ್ಮದಲ್ಲಿ ಕೆಲವು ನಿಬಂಧನೆಗಳು ಇರುತ್ತವೆ. ಅದನ್ನು ಪಾಲಿಸಬೇಕು. ಮುಸ್ಲಿಮರಿಗೆ ಅಮಲು ಪದಾರ್ಥ ನಿಷಿದ್ಧ. ಅದನ್ನು ಬಳಸಲು ಅವಕಾಶವಿಲ್ಲ. ಇದೇ ರೀತಿ ಬೇರೆ ಧರ್ಮಗಳಲ್ಲೂ ಬೇರೆ ಬೇರೆ ನಿಯಮಗಳು ಇವೆ. ಈ ಕಾರಣದಿಂದ ಧರ್ಮಗಳ ನಡುವೆ ಸಮನ್ವಯ, ಐಕ್ಯತೆಗೆ ಒತ್ತು ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ ಬೋಳೂರು ಮಾತನಾಡಿ ‘ಬಹಳ ವರ್ಷಗಳ ಹಿಂದೆಯೇ ಇಲ್ಲಿ ಅಹಿಂದ ಸಂಘಟನೆ ಸ್ಥಾಪನೆಯಾಗಿದೆ. ದೇಶದಲ್ಲಿ ಈ ಮೂರು ವರ್ಗದವರು ಅಧಿಕಾರದಲ್ಲಿರುವುದು ಶೇಕಡಾ 3ರಷ್ಟು ಮಂದಿ ಮಾತ್ರ’ ಎಂದರು.

ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋಅಧ್ಯಕ್ಷತೆ ವಹಿಸಿದ್ದರು. ಹಿಂದಿನ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹರಿಕೃಷ್ಣ ಪುನರೂರು, ರಾಜೀವಗಾಂಧಿ ಆರೋಗ್ಯ ವಿವಿಯಿಂದ ಚಿನ್ನದ ಪದಕ ಗಳಿಸಿದ ಲಿಫಾಮ್ ರೋಶನಾರ ಮತ್ತು ಸುಮತಿ ಹೆಗ್ಡೆ ಅವರನ್ನು ಗೌರವಿಸಲಾಯಿತು.

ಅಖಿಲ ಭಾರತ ಬ್ಯಾರಿ ಪರಿಷತ್ ಗೌರವ ಅಧ್ಯಕ್ಷ ಯೂಸುಫ್ ವಕ್ತಾರ್, ಕಾರ್ಯದರ್ಶಿ ಹನೀಫ್ ಬಜಾಲ್, ಉಪಾಧ್ಯಕ್ಷ ಇಬ್ರಾಹಿಂ ನಡುಪದವು, ನಗರಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕ್, ಸುಮತಿ ಹೆಗ್ಡೆ ಇದ್ದರು. ನಿಸಾರ್ ಫಕೀರ್ ಮಹಮ್ಮದ್ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಹಕ್ ನಿರೂಪಿಸಿದರು. ಮುಹಮ್ಮದ್ ಕುಂಜತ್ತಬೈಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT