ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನರಾಂ ನಿರ್ದೇಶನದ ‘ಬರ್ಬರೀಕ’ ರಾಷ್ಟ್ರಮಟ್ಟಕ್ಕೆ ಆಯ್ಕೆ

Last Updated 19 ಡಿಸೆಂಬರ್ 2014, 9:22 IST
ಅಕ್ಷರ ಗಾತ್ರ

ಸುಳ್ಯ: ನವದೆಹಲಿಯ ಭಾರತೀಯ ವಿ.ವಿ.ಗಳ ಒಕ್ಕೂಟದವರು ತುಮಕೂರು ವಿ.ವಿ.ಯಲ್ಲಿ ಏರ್ಪಡಿಸಿದ ದಕ್ಷಿಣ ಭಾರತ ಅಂತರ್ ವಿ.ವಿ.ಗಳ ಯುವಜನೋತ್ಸವದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ, ರಂಗನಿರ್ದೇಶಕ ಜೀವನರಾಂ ಸುಳ್ಯ ನಿರ್ದೇಶನದ `ಬರ್ಬರೀಕ' ನಾಟಕ ಪ್ರಥಮ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಜೀವನರಾಂ ಅವರ ಸಮರ್ಥ ನಿರ್ದೇಶನ, ಕಲಾವಿದರ ಪರಿಪಕ್ವ ಅಭಿನಯ, ಮನಕಲಕುವ ನಾಟಕದ ವಸ್ತು, ರಂಗತಂತ್ರ, ಬೆಳಕು, ಪ್ರಸಾಧನ, ವಸ್ತ್ರಾಲಂಕಾರ ಎಲ್ಲದರಲ್ಲೂ ವಿಶೇಷತೆಯನ್ನು ಕಾಣುವ, ಶಶಿರಾಜ್‌ ರಾವ್ ಕಾವೂರು ರಚಿಸಿದ ಬರ್ಬರೀಕ ಆಧುನಿಕ ರಂಗಭೂಮಿಯಲ್ಲಿ ತೀರಾ ಅಪರೂಪದ ಪ್ರಯೋಗವಾಗಿದ್ದು, 2015 ಫೆಬ್ರುವರಿಯಲ್ಲಿ ಮಧ್ಯಪ್ರದೇಶದ ಭೋಪಾಲ್ ವಿ.ವಿ.ಯಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.

ಈ ಹಿಂದೆ ಜೀವನರಾಂ ನಿರ್ದೇಶನದ ಏಕಾದಶಾನನ, ಮಧ್ಯಮವ್ಯಾಯೋಗ, ಧೂತವಾಕ್ಯ, ಊರುಭಂಗ, ಅಗ್ನಿ ಮತ್ತು ಮಳೆ ನಾಟಕಗಳು ಸತತ 6 ಬಾರಿ ರಾಷ್ಟ್ರೀಯ ರಂಗಪ್ರಶಸ್ತಿ ಪಡೆದಿರುವುದು ಒಂದು ದಾಖಲೆಯಾಗಿದೆ. ಇದೀಗ ಭಾರತದ 5 ರಾಜ್ಯಗಳ 22 ವಿ.ವಿ.ಗಳ ನಾಟಕಗಳೊಂದಿಗೆ ಸ್ಪರ್ಧಿಸಿ ಪ್ರಥಮ ಪ್ರಶಸ್ತಿ ಪಡೆದ 'ಬರ್ಬರೀಕ' ನಾಟಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT