ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ರಕ್ಷಣೆಗಿಂತ ದೊಡ್ಡ ಸಮಸ್ಯೆಗಳಿವೆ

ನಿವೇಶನ ರಹಿತರ ಸಮಾವೇಶದಲ್ಲಿ ಕೆ.ಯಾದವ ಶೆಟ್ಟಿ
Last Updated 17 ಜುಲೈ 2017, 7:37 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಧರ್ಮ ರಕ್ಷಣೆಗಿಂತಲೂ ಮಿಗಿ ಲಾಗಿ ವಸತಿ, ಆರೋಗ್ಯ, ಉದ್ಯೋಗ ದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಆಡಳಿತ ನಡೆ ಸುವವರು ಮತ್ತು ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದಿಸುವವರು ನೈಜ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹೇಳಿದರು.

ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗ ಳೂರು ನಗರದ ನಿವೇಶನ ರಹಿತರ ಮೂರನೇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ವಸತಿ ಇಲ್ಲದೇ ಬದುಕುತ್ತಿರುವ ಸಾವಿರಾರು ಮಂದಿ ಇದ್ದಾರೆ. ಉದ್ಯೋಗ, ಆರೋಗ್ಯದ ಸಮಸ್ಯೆಗಳಿಂದ ಬಾಧಿತ ರಾದವರೂ ಇದ್ದಾರೆ. ಆದರೆ, ಕೆಲವರು ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂಸಾ ಚಾರ ನಡೆಸಿ ಸಾಮಾನ್ಯ ಜನರ ಸಮಸ್ಯೆ ಗಳು ಗೋಚರಿಸದಂತೆ ಮಾಡುತ್ತಿದ್ದಾರೆ’ ಎಂದು ದೂರಿದರು.

ನಿವೇಶನ ರಹಿತರ ಹೋರಾಟ ಸಮಿತಿಯ ಪ್ರಯತ್ನದ ಫಲವಾಗಿ ನಗರದ ನಿವೇಶನ ರಹಿತರಿಗೆ 2000 ಮನೆಗಳುಳ್ಳ ಬಹುಮಹಡಿ ವಸತಿ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ರೂಪುಗೊಂ ಡಿದೆ. ಇಷ್ಟಕ್ಕೇ ಚಳವಳಿ ನಿಲ್ಲಬಾರದು. ಎಲ್ಲ ವಸತಿರಹಿತರಿಗೆ ಸೌಕರ್ಯ ದೊರಕಿ ಸುವವರೆಗೆ ಹೋರಾಟ ಮುಂದುವ ರಿಯಬೇಕು ಎಂದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯ ದರ್ಶಿ ಸುನೀಲ್‌ಕುಮಾರ್ ಬಜಾಲ್ ಮಾತನಾಡಿದರು. ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಪ್ರೇಮನಾಥ್‌ ಜಲ್ಲಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶಕ್ತಿನಗರ, ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್‌ಕುಮಾರ್ ಬಜಾಲ್‌ ಸೇರಿ ದಂತೆ ಹಲವು ಮುಖಂಡರು ವೇದಿಕೆ ಯಲ್ಲಿದ್ದರು.

ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಮಂಜುಳಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಾಗಿ ಪ್ರಭಾವತಿ ಬೋಳೂರು, ಖಜಾಂಚಿಯಾಗಿ ನೂತನ್‌ ಬಾಳೇಬೈಲು, ಕಾನೂನು ಸಲಹೆಗಾರರಾಗಿ ಕೃಷ್ಣಪ್ಪ ಕೊಂಚಾಡಿ, ಕಾನೂನು ಸಲಹೆಗಾರರಾಗಿ ಸಂತೋಷ್‌ ಶಕ್ತಿನಗರ ಸೇರಿದಂತೆ 70 ಸದಸ್ಯರ ಹೊಸ ಸಮಿತಿಯನ್ನು ರಚಿಸ ಲಾಯಿತು. ಈ ಹಿಂದೆ ಕೈಗೊಂಡಿದ್ದ ಮುಷ್ಕರದ ವೇಳೆ ಮಹಾನಗರ ಪಾಲಿಕೆ ಆಡಳಿತ ನೀಡಿದ್ದ ಲಿಖಿತ ಭರವಸೆಯಂತೆ ಜುಲೈ 27ರೊಳಗೆ ಬಹುಮಹಡಿ ವಸತಿ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡದಿದ್ದರೆ ಮತ್ತೊಂದು ಸುತ್ತಿನ ಹೋ ರಾಟ ಆರಂಭಿಸುವ ನಿರ್ಣಯ ವನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.

**

ಧರ್ಮದ ಹೆಸರಿನಲ್ಲಿ ನೆತ್ತರಿನ ರಾಜಕೀಯ ಮಾಡುವವರಿಗೆ ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಬದ್ಧತೆ ಇರುವುದಿಲ್ಲ
-ಕೆ.ಯಾದವ ಶೆಟ್ಟಿ, 
ಪ್ರಾಂತ ರೈತ ಸಂಘದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT