ಸೋಮವಾರ, ಆಗಸ್ಟ್ 10, 2020
20 °C
121 ಮಂದಿಗೆ ಸೋಂಕು* ಇಬ್ಬರು ವೃದ್ಧೆಯರು ಮೃತ

2 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌–19ನಿಂದಾಗಿ ಇಬ್ಬರು ವೃದ್ಧೆಯರು ಮೃತಪಟ್ಟಿದ್ದಾರೆ. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ನಾಲ್ವರು ಸಿಬ್ಬಂದಿ, ರೈಲ್ವೆ ಇಲಾಖೆ, ಒಬ್ಬ ವೈದ್ಯ ಸೇರಿ 121 ಮಂದಿಗೆ ಶುಕ್ರವಾರ ಕೋವಿಡ್–19 ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2098ಕ್ಕೆ ಏರಿದೆ.

ದಾವಣಗೆರೆ ತಾಲ್ಲೂಕಿನ ದೊಡ್ಡಓಬಜ್ಜಿಹಳ್ಳಿಯ 63 ವರ್ಷದ ವೃದ್ಧೆ ಜುಲೈ 30ರಂದು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಆವರಗೆರೆಯ 60 ವರ್ಷದ ಮಹಿಳೆ 29ರಂದು ಮೃತಪಟ್ಟಿದ್ದಾರೆ. ಇವರಿಗೆ ತೀವ್ರ ಉಸಿರಾಟದ ಸಮಸ್ಯೆ ಇತ್ತು. ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 48ಕ್ಕೆ ಏರಿದೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ 28 ವರ್ಷದ ಮಹಿಳೆ ಸೇರಿ 43, 32 ಹಾಗೂ 30 ವರ್ಷದ ಸಿಬ್ಬಂದಿಗೆ ಸೋಂಕು ತಗುಲಿದೆ. 48 ವರ್ಷದ ಒಬ್ಬರು ರೈಲ್ವೆ ಇಲಾಖೆಯ ಸಿಬ್ಬಂದಿ, ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲ್ಲೂಕಿನ ನಾಗವಂದ ಹಾಗೂ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ದಾವಣಗೆರೆಯ ವಿನೋಬ ನಗರದ 58 ವರ್ಷದ ಮಹಿಳೆ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ 47 ವರ್ಷದ ಮಹಿಳೆ, ಜಿಲ್ಲಾ ಕ್ರೀಡಾಂಗಣ ರಸ್ತೆ ನಿವಾಸಿ 45 ವರ್ಷದ ಪುರುಷ, ಹರಿಹರದ ಗಾಂಧಿನಗರದ 13 ವರ್ಷದ ಬಾಲಕನಿಗೆ ಸೋಂಕು ಕಾಣಿಸಿಕೊಂಡಿದ್ದು, ಇವರ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.

ದಾವಣಗೆರೆಯ ಜಾಲಿನಗರ, ಲೆನಿನ್ ನಗರದ ಹೊಸ ಬಡಾವಣೆ, ಸರಸ್ವತಿ ಬಡಾವಣೆ, ಬಾಷಾನಗರ, ಭಗತ್‌ಸಿಂಗ್ ನಗರ, ವಿನೋಬನಗರ 3ನೇ ಮುಖ್ಯ ರಸ್ತೆ 12ನೇ ಕ್ರಾಸ್, ಸಿದ್ಧವೀರಪ್ಪ ಬಡಾವಣೆ, ಎಸ್.ಎಸ್ ಬಡಾವಣೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹರಿಹರ ತಾಲ್ಲೂಕಿನ ಗುಳ್ಗಿ ಡಾಕ್ಟರ್ ಕಾಂಪೌಂಡ್, ವಿದ್ಯಾನಗರ, ಗುತ್ತೂರು ಕಾಲೊನಿ, ಜೀಜಾಮಾತಾ ಕಾಲೊನಿ, ವಿದ್ಯಾನಗರ ಸಿ ಬ್ಲಾಕ್, ಇಂದಿರಾನಗರ 4ನೇ ಕ್ರಾಸ್‌ಗಳಲ್ಲಿ ಕಾಣಿಸಿಕೊಂಡಿದೆ. ಹೊನ್ನಾಳಿಯ ಕುಂಬಾರಗುಂಡಿ ಕೇರಿ, ದುರ್ಗಿಗುಡಿ, ಹೊಸಕೇರಿ, ಎಸ್‌ಬಿಐನ 30 ವರ್ಷದ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ.

ಚನ್ನಗಿರಿಯ ನವೀಲೇಹಾಳ್, ಸಂತೇಬೆನ್ನೂರು, ನುಗ್ಗಿಹಳ್ಳಿ, ರಂಗನಾಥ ಬಡಾವಣೆ, ಕತಗೂರು ರಸ್ತೆ, ಎನ್‌.ಎಸ್.ರೋಡ್, ಎಸ್‌.ಕೆ. ಬಡಾವಣೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.   

ದಾವಣಗೆರೆ ನಗರ ಮತ್ತು ತಾಲ್ಲೂಕಿನಲ್ಲಿ 69, ಹರಿಹರದ 14, ಜಗಳೂರಿನ 1, ಚನ್ನಗಿರಿಯ 18 ಹೊನ್ನಾಳಿಯ 15 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 849 ಸಕ್ರಿಯ ‍ಪ್ರಕರಣಗಳು ಇವೆ.

ಸೋಂಕಿತರ ಸಂಖ್ಯೆಗಿಂತಲೂ ಬಿಡುಗಡೆಯಾದವರ ಸಂಖ್ಯೆಯೇ ಹೆಚ್ಚಾಗಿದೆ. ಕೊರೊನಾದಿಂದ ಗುಣಮುಖರಾದ ದಾವಣಗೆರೆಯ ದೇವರಾಜ ಅರಸು ಬಡಾವಣೆಯ 5ನೇ ಕ್ರಾಸ್‌ನ 1 ವರ್ಷದ ಬಾಲಕಿ, 6 ವರ್ಷದ ಬಾಲಕ, 11 ವರ್ಷದ ಬಾಲಕಿ ಒಳಗೊಂಡಂತೆ 137 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 1203 ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.