ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕುಸ್ತಿಗೆ 29 ಜನರ ಆಯ್ಕೆ

ಕನಕ ಗುರುಪೀಠದಲ್ಲಿ ಪೈಲ್ವಾನರ ಕಲರವ: ವಿಶಾಖಪಟ್ಟಣದಲ್ಲಿ ಟೂರ್ನಿ
Last Updated 11 ಡಿಸೆಂಬರ್ 2022, 7:05 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ಬೆಳ್ಳೂಡಿಯ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕುಸ್ತಿ ತಂಡದ ಆಯ್ಕೆ ಟ್ರಯಲ್ಸ್ ಯಶಸ್ವಿಯಾಗಿ ನಡೆದು ಧಾರ್ಮಿಕ ಕ್ಷೇತ್ರದಲ್ಲಿ ಪೈಲ್ವಾನರ ಕಲರವ ಮೂಡಿಸಿತು.

ವಿಶಾಖಪಟ್ಟಣದಲ್ಲಿ ಡಿ.21ರಿಂದ ನಡೆಯುವ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್ ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ತಂಡಕ್ಕೆ 30 ಕುಸ್ತಿ ಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು. ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಗಳಿಲ್ಲದ್ದರಿಂದ ಒಟ್ಟು 29 ಕುಸ್ತಿಪಟುಗಳ ಆಯ್ಕೆ ನಡೆಯಿತು. 50 ಕೆ.ಜಿ.ಯಿಂದ ಆರಂಭಗೊಂಡು 76 ಕೆ.ಜಿ.ವರೆಗಿನ ವಿವಿಧ ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಆಶ್ರಯದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಸೇನೆ ಹಾಗೂ ರೈಲ್ವೇಸ್‌ನ ಕುಸ್ತಿಪಟುಗಳಿಗೂ ಅವಕಾಶ ಕಲ್ಪಿಸಲಾಗಿತ್ತು.

ಸ್ಥಳಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ ಆಯ್ಕೆ ಪ್ರಕ್ರಿಯೆಯ ವ್ಯವಸ್ಥೆ ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಕುಸ್ತಿ ಸಂಘದ ತಾಂತ್ರಿಕ ವಿಭಾಗದ ಅಧ್ಯಕ್ಷ ವಿನೋದ್ ಮೈಸೂರು, ರಾಜ್ಯ ಉಪಾಧ್ಯಕ್ಷ ಕೆ.ಎಂ. ವೀರೇಶ್, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ಸಂಘದ ಗೌರವಾಧ್ಯಕ್ಷ ಎನ್.ಎಚ್. ಶ್ರೀನಿವಾಸ್, ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದ್ಯಾವನವರ್ ರೇವಣಪ್ಪ, ಪದಾಧಿಕಾರಿಗಳಾದ ಚೂರಿ ಜಗದೀಶ್, ಪಾಲಾಕ್ಷಿ, ಶಿವಾನಂದ ಎರೆಸೀಮೆ, ಮಾರುತಿ ಪೂಜಾರ್ ಇದ್ದರು.

ಆಯ್ಕೆಯಾದವರ ವಿವರ
ಪುರುಷರ ಫ್ರೀ ಸ್ಟೈಲ್ ವಿಭಾಗ:
ಪ್ರಶಾಂತ್ ಗೌಡ ಬೇಲೇರಿ, ರಮೇಶ್ ಹೊಸಕೋಟೆ, ರೋಹನ್ ನಾರಾಯಣ್ ಘ್ವಾಡಿ, ಮಹೇಶ್ ಕುಮಾರ್ ಮುರಾರಿ ಲಂಗೋಟಿ, ಮಲ್ಲೇಶ್ ಎಸ್. ಮೇತ್ರಿ, ಶಿವಾನಂದ ಅಮ್ಮಣಗಿ, ಗೋಪಾಲ್ ಕೋಳಿ, ಸುನೀಲ್ ಪದತರೆ, ಪಾಂಡುರಂಗ ಶಿಂಧೆ ಮತ್ತು ಗಿರೀಶ್ ಬಿ.

ಗ್ರಿಕೊ ರೋಮನ್ ಪುರುಷರ ವಿಭಾಗ:ಸುಲೇಮಾನ್ ಸಾಬ್, ಅಜಿತ್ ಚೌಗಳೆ, ಬಾಹುಬಲಿ, ಸಂದೀಪ್, ಭೀಮಾ, ಶಿವಾನಂದ, ಆದಿತ್, ಧರೆಪ್ಪ ಆರ್., ಮಲ್ಲಪ್ಪ ಪಾಟೀಲ್, ಬಸವರಾಜ್ ಮುದಲಿ.

ಮಹಿಳಾ ವಿಭಾಗ:ಗೋಪವ್ವ ಮಂಜುನಾಥ ಖಡ್ಕಿ, ಬಸೀರಾ ವಖರಡ್, ಶಾಹೀದಾ ಬೇಗಮ್ ಬಳಿಗಾರ್, ರಕ್ಷಿತಾ ನಾರಾಯಣ್ ಸೂರ್ಯವಂಶಿ, ಶ್ವೇತಾ ಶಿವರಾಯಪ್ಪ ಬೆಳಗಟ್ಟಿ, ಪೂಜಿತಾ ಬಾಯಿ ಸಿ., ಲೀನಾ ಅಂತೋನ್ ಲಿಧಿ, ಸುಜಾತಾ ತುಕಾರಾಮ್ ಪಾಟೀಲ್, ಮೇಘನಾ ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT