ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಫೋನ್ ಮಾಡಿ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಹಿಳೆಯರು ಆಪತ್ಕಾಲದಲ್ಲಿ ತಮ್ಮ ರಕ್ಷಣೆಗಾಗಿ ನೆರವು ಪಡೆಯಲು ಅನುಕೂಲವಾಗುವಂತೆ ಸರ್ಕಾರ ಕೆಲ ಘಟಕಗಳನ್ನು ಸ್ಥಾಪಿಸಿದೆ. ಕೆಲವು ಪ್ರಮುಖವಾದ ಘಟಕಗಳ ಸಂಪರ್ಕ ವಿವರವನ್ನು ಇಲ್ಲಿ ನೀಡಲಾಗಿದೆ.

ಹೆಣ್ಣು ಮಕ್ಕಳು ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯ, ಕಿರುಕುಳ, ಶೋಷಣೆ, ದಾಳಿ ನಡೆದ ಸಂದರ್ಭದಲ್ಲಿ ಈ ಯಾವುದೇ ದೂರವಾಣಿ ಸಂಖ್ಯೆ ಇಲ್ಲವೇ ಆ್ಯಪ್‌ ಮೂಲಕ ಸಂಪರ್ಕಿಸಿದರೆ ಶೀಘ್ರವೇ ಪೊಲೀಸರು ರಕ್ಷಣೆಗಾಗಿ ಧಾವಿಸುತ್ತಾರೆ. ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ, ಅಸಹಾಯಕ ಸ್ಥಿತಿಯಲ್ಲಿ ನೆರವು, ಪ್ರಯಾಣದ ವೇಳೆ ಕಿರುಕುಳ/ದೌರ್ಜನ್ಯ, ಕೆಲಸದ ಸ್ಥಳಗಳಲ್ಲಿ ದೌರ್ಜನ್ಯ ನಡೆದಾಗ ಪೊಲೀಸ್‌ ರಕ್ಷಣೆ ಪಡೆಯಲು ಹಿಂದೇಟು ಹಾಕಬಾರದು.

ಮುಂದಿನ ಹಂತ ದೂರು ದಾಖಲಿಸುವುದು. ದೂರು ದಾಖಲಿಸಿದ ತಕ್ಷಣ ಪೊಲೀಸ್ ಠಾಣೆಯಲ್ಲಿ ಕೊಡುವ ದೃಢೀಕರಣ ಚೀಟಿ (ಅಕ್‌ನಾಲೆಜ್‌ಮೆಂಟ್‌) ಮುಂದಿನ ಯಾವುದೇ ಕಾನೂನು ಕ್ರಮಕ್ಕೆ ಬಹಳ ಪ್ರಮುಖ ದಾಖಲೆಯಾಗುತ್ತದೆ. ಎಫ್‌.ಐ.ಆರ್‌. ಆಗಿದ್ದಲ್ಲಿ ಅದರ ಪ್ರತಿ ನೀವು ಕೊಟ್ಟಿರುವ ದೂರವಾಣಿ ಸಂಖ್ಯೆಗೂ ಬರುತ್ತದೆ. ಆದರೆ ಅದರ ಮುದ್ರಿತ ಪ್ರತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಎಫ್‌.ಐ.ಆರ್. ಸಂಖ್ಯೆ ಮತ್ತು ವಿವರ ನ್ಯಾಯಾಲಯಕ್ಕೆ ಪ್ರಮುಖ ದಾಖಲೆಯಾಗುತ್ತದೆ.

100
ಬೇರಾವುದೇ ಸಂಖ್ಯೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ನೆಟ್‌ವರ್ಕ್‌ ಸಮಸ್ಯೆಯಿಂಧ ಆ್ಯಪ್‌ ಆ್ಯಕ್ಟಿವೇಟ್‌ ಆಗದಿದ್ದರೆ, ಪರಿಸ್ಥಿತಿಯ ಒತ್ತಡದಿಂದಾಗಿ ಆ್ಯಕ್ಟಿವೇಟ್‌ ಮಾಡಲು ಸಾಧ್ಯವಾಗದೇ ಇದ್ದರೆ ಪೊಲೀಸ್‌ ಕಂಟ್ರೋಲ್‌ ರೂಂ ಸಂಖ್ಯೆ 100 ಯಾವುದೇ ಮೊಬೈಲ್‌ನಿಂದಲೂ ಸಂಪರ್ಕಿಸಬಹುದು. ಸರಿಯಾದ ವಿಳಾಸ, ಲ್ಯಾಂಡ್‌ಮಾರ್ಕ್‌ ಹೇಳಿದರೆ ಕೆಲವೇ ಸಮಯದೊಳಗೆ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಾರೆ. ಆದರೆ ಶನಿವಾರ ಮತ್ತು ಭಾನುವಾರ ಸಿಬ್ಬಂದಿ ಕೊರತೆಯ ಕಾರಣ ಈ ಸೌಲಭ್ಯದಲ್ಲಿ ವ್ಯತ್ಯಯವಾಗುವುದುಂಟು. ಗಂಭೀರ ಪ್ರಕರಣಗಳಾದ ಸಂದರ್ಭಗಳಲ್ಲೂ ವಾರಾಂತ್ಯದಲ್ಲಿ ಪೊಲೀಸ್‌ ರಕ್ಷಣೆ ಸಿಗದೇ ಇರುವ ಪ್ರಸಂಗಗಳು ಇವೆ ಎಂಬುದು ಸಾರ್ವಜನಿಕರ ಆರೋಪ.

2294 3225/ 1091
ವನಿತಾ ಸಹಾಯವಾಣಿ
ಪೊಲೀಸ್‌ ಆಯುಕ್ತರ ಕಚೇರಿ
ಇನ್ಫೆಂಟ್ರಿ ರಸ್ತೆ

***
1098
ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕರೆ ಮಾಡಬೇಕಾದ ಮಕ್ಕಳ ಸಹಾಯವಾಣಿ ಸಂಪರ್ಕ ಸಂಖ್ಯೆ ಇದು. ನಾಪತ್ತೆ, ಅಪಹರಣ, ಅಪರಿಚಿತ ಮಕ್ಕಳ ಪತ್ತೆ, ಕಳವು ಪ್ರಕರಣ, ದೌರ್ಜನ್ಯ ಪ್ರಕರಣಗಳು ಕಂಡುಬಂದಾಗ ಯಾರು ಬೇಕಾದರೂ ಈ ಸಂಖ್ಯೆಯನ್ನು ಸಂಪರ್ಕಿಸಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿ ಮಕ್ಕಳ ನೆರವಿಗೆ ಕೈಜೋಡಿಸಬಹುದು.

1089
ಇದೂ ಚಿಲ್ಡ್ರನ್‌ ಹೆಲ್ಪ್‌ಲೈನ್‌ ಸಂಖ್ಯೆ.

1090
ಹಿರಿಯ ನಾಗರಿಕರ ಸಹಾಯವಾಣಿ

***
ಪಿಂಕ್‌ ಹೊಯ್ಸಳ
ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಗಾಘಿ ಸರ್ಕಾರ ಕಳೆದ ವರ್ಷ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ ‘ಪಿಂಕ್‌ ಹೊಯ್ಸಳ’. ನೀಲಿ ಬಣ್ಣದ ಪಟ್ಟಿಗಳಿರುವ ವಾಹನ ಪುರುಷರು ಮತ್ತು ಮಹಿಳೆಯರ ಸುರಕ್ಷೆಗಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕಡು ಗುಲಾಬಿ ಬಣ್ಣದ ಪಟ್ಟಿಗಳಿರುವ ‘ಪಿಂಕ್‌ ಹೊಯ್ಸಳ’ ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಗಾಗಿ ಮೀಸಲು.

‘ಸುರಕ್ಷಾ ಆ್ಯಪ್‌’ ಮೂಲಕ ಅಥವಾ 100 ಕ್ಕೆ ಮಾಡಿದ ದೂರವಾಣಿ ಕರೆ ಮಾಡಿ ಈ ತಂಡದ ನೆರವು ಪಡೆಯಬಹುದು. ಸುರಕ್ಷಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಅದರಲ್ಲಿ ಕಾಣುವ ಪವರ್‌ ಬಟನ್‌ನ್ನು ಐದು ಬಾರಿ ಒತ್ತಿದರೆ ಕರೆ ದಾಖಲಾಗುತ್ತದೆ. ಅದು ಹತ್ತಿರ ಪಿಂಕ್‌ ಹೊಯ್ಸಳಕ್ಕೆ ರವಾನೆಯಾಗುತ್ತದೆ. ಪ್ರತಿ ಪಿಂಕ್‌ ಹೊಯ್ಸಳದಲ್ಲಿ ಮೂವರು ಮಹಿಳಾ ಪೊಲೀಸ್‌ ಸಿಬ್ಬಂದಿ ಇರುತ್ತಾರೆ.
***
2221 6485/ 2221 6486
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮೂಲಕವೂ ಮಹಿಳೆಯರು ನೆರವು ಪಡೆಯಬಹುದು. ಕೆಲವು ಗಂಭೀರ ಪ್ರಕರಣಗಳಲ್ಲಿ ಆಯೋಗವು ಸ್ವಯಂಪ್ರೇರಿತವಾಗಿಯೂ ದೂರು ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಕೆಂಪೇಗೌಡ ರಸ್ತೆಯಲ್ಲಿರುವ ಕಾವೇರಿ ಭವನದಲ್ಲಿ ಆಯೋಗದ ಕಚೇರಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT