ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

450 ಮಂದಿಗೆ ಕೊರೊನಾ; ನಾಲ್ಕು ಸಾವು

Last Updated 9 ಅಕ್ಟೋಬರ್ 2020, 16:38 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 450 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. 107 ಮಂದಿ ಗುಣಮುಖರಾಗಿದ್ದಾರೆ.

ಆರೋಗ್ಯ ಇಲಾಖೆ ನೌಕರರ ಮುಷ್ಕರ ಹಾಗೂ ತಾಂತ್ರಿಕ ದೋಷದಿಂದ ಒಂದು ವಾರದಿಂದ ಬಾಕಿ ಇದ್ದ ಪ್ರಕರಣಗಳು ಶುಕ್ರವಾರ ಸೇರ್ಪಡೆಯಾಗಿವೆ.

ಜಗಳೂರು ತಾಲ್ಲೂಕಿನ ಬಸವನಕೋಟೆಯ 56 ವರ್ಷದ ಮಹಿಳೆ ಅಕ್ಟೋಬರ್ 4 ಹಾಗೂ ಜಗಳೂರು ಪಟ್ಟಣದ 57 ವರ್ಷದ ಪುರುಷ ಅಕ್ಟೋಬರ್ 8ರಂದು ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಸಾಲೆಕಟ್ಟೆ 60 ವರ್ಷದ ‍ಪುರುಷ ಹಾಗೂ ದಿಟೂರಿನ 55 ವರ್ಷದ ಪುರುಷ ಅಕ್ಟೋಬರ್ 8ರಂದು ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 247 ಮಂದಿ ಮೃತಪಟ್ಟಿದ್ದಾರೆ.

ದಾವಣಗೆರೆ ನಗರ ಹಾಗೂ ತಾಲ್ಲೂಕಿನಲ್ಲಿ 178, ಹರಿಹರ ತಾಲ್ಲೂಕಿನ 72, ಜಗಳೂರು ತಾಲ್ಲೂಕಿನ 56, ಚನ್ನಗಿರಿ ತಾಲ್ಲೂಕಿನ 65, ಹೊನ್ನಾಳಿ ತಾಲ್ಲೂಕಿನ 76 ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೋವಿಡ್–19 ದೃಢಪಟ್ಟಿದೆ.

ಬಿಡುಗಡೆಗೊಂಡವರಲ್ಲಿ ದಾವಣಗೆರೆ ನಗರ ಹಾಗೂ ತಾಲ್ಲೂಕಿನ 37, ಹರಿಹರ ತಾಲ್ಲೂಕಿನ 21, ಜಗಳೂರು ತಾಲ್ಲೂಕಿನ 11, ಚನ್ನಗಿರಿ ತಾಲ್ಲೂಕಿನ 18, ಹೊನ್ನಾಳಿ ತಾಲ್ಲೂಕಿನ 20 ಮಂದಿ ಇದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 17,987 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 15,583 ಮಂದಿ ಗುಣಮುಖರಾಗಿದ್ದಾರೆ. 2157 ಸಕ್ರಿಯ ಪ್ರಕರಣಗಳು ಇವೆ.

ನಾಲ್ಕು ಮಂದಿಗೆ ಪಾಸಿಟಿವ್

ಸಾಸ್ವೆಹಳ್ಳಿಹೋಬಳಿ ವ್ಯಾಪ್ತಿಯ ಬೆನಕನಹಳ್ಳಿ 2, ಹೊಸಹಳ್ಳಿ, ಬೀರಗೊಂಡನಹಳ್ಳಿಯಲ್ಲಿ ತಲಾ ಒಂದು ಸೇರಿ 4 ಕೊರೊನಾ ಪ್ರಕರಣ ಪತ್ತೆಯಾಗಿದೆ ಎಂದು ಉಪತಹಶಿಲ್ದಾರ್ ಎಸ್. ಪರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT