ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

Last Updated 1 ಜುಲೈ 2021, 5:07 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್-19 ಸೋಂಕು ರಾಜ್ಯದಲ್ಲಿ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಜೂನ್‌ 28ರಂದು ವಿಶೇಷ ಕಣ್ಗಾವಲು ಕ್ರಮಗಳನ್ನು ಕೈಗೊಂಡಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ರೈಲಿನಲ್ಲಿ ಬರುವ ಪ್ರಯಾಣಿಕರು 72 ಗಂಟೆಗಳ ಒಳಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿದ ನೆಗೆಟಿವ್‌ ವರದಿ ಹೊಂದಿರಬೇಕು. ಇಲ್ಲದೇ ಇದ್ದರೆ ಕನಿಷ್ಠ ಒಂದು ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆದಿರುವ ಕುರಿತು ಪ್ರಮಾಣ ಪತ್ರ ಹೊಂದಿರಬೇಕು ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ ತಿಳಿಸಿದೆ.

ಕೊರೊನಾದಿಂದ 12 ಮಂದಿ ಸಾವು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 12 ಮಂದಿ ಮೃತಪಟ್ಟಿರುವುದು ಬುಧವಾರ ಒಂದೇ ದಿನ ದೃಢಪಟ್ಟಿದೆ. 73 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.

ಹರಿಹರ ತಾಲ್ಲೂಕಿನ ಹರಗನಹಳ್ಳಿಯ 65 ವರ್ಷದ
ವೃದ್ಧ, ಎಲ್‌ಐಸಿ ಕಚೇರಿ ಬಳಿಯ 56 ವರ್ಷದ ಪುರುಷ, ಪಾಮೇನಹಳ್ಳಿಯ 45 ವರ್ಷದ ಪುರುಷ, ಕಾಳಿದಾಸನಗರದ 60 ವರ್ಷದ ವೃದ್ಧೆ, ಹೊನ್ನಾಳಿ ತಾಲ್ಲೂಕಿನ ಕೋಟೆ ಮಲ್ಲೂರಿನ 50 ವರ್ಷದ ಮಹಿಳೆ, ಹೊಸಹಳ್ಳಿ ಕ್ಯಾಂಪ್‌ನ 65 ವರ್ಷದ ವೃದ್ಧೆ, ತಿಮ್ಮೇನಹಳ್ಳಿಯ 80 ವರ್ಷದ ವೃದ್ಧ, ದಾವಣಗೆರೆ ತಾಲ್ಲೂಕಿನ ಕನಗೊಂಡನಹಳ್ಳಿಯ 62 ವರ್ಷದ ವೃದ್ಧೆ, ಎಸ್‌.ಎಸ್‌. ಬಡಾವಣೆಯ 68 ವರ್ಷದ ವೃದ್ಧೆ, ಕೆ.ಬಿ. ಬಡಾವಣೆಯ 73 ವರ್ಷದ ವೃದ್ಧೆ,
ಚನ್ನಗಿರಿ ತಾಲ್ಲೂಕು ನಲ್ಲೂರಿನ 71 ವರ್ಷದ ವೃದ್ಧ, ಕಗತೂರಿನ 55 ವರ್ಷದ ಮಹಿಳೆ
ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 42, ಹರಿಹರ ತಾಲ್ಲೂಕಿನಲ್ಲಿ 7, ಚನ್ನಗಿರಿ ತಾಲ್ಲೂಕಿನಲ್ಲಿ 12, ಹೊನ್ನಾಳಿ ತಾಲ್ಲೂಕಿನ 10, ಜಗಳೂರು ತಾಲ್ಲೂಕಿನಲ್ಲಿ 2 ಮಂದಿಗೆ ಕೊರೊನಾ ಬಂದಿದೆ.

‘ಲಾಕ್‌ಡೌನ್‌ ಸಡಿಲ ಎಂದು ಹೊರಬರಬೇಡಿ’: ಲಾಕ್‌ಡೌನ್‌
ಸಡಿಲಿಕೆ ಇದೆ ಎಂದು
ಸುಮ್ಮನೆ ಯಾರೂ ಹೊರಗೆ ಬರಬೇಡಿ. ಕೊರೊನಾ ಹೋಗಿಯೇ ಬಿಟ್ಟಿದೆ ಎಂದು ಜನರು ಅಡ್ಡಾಡುತ್ತಿರುವುದು ಕಂಡು ಬಂದಿದೆ. ದಯವಿಟ್ಟು ಎಚ್ಚರದಿಂದ ಇರಿ. ಅಂತರ ಕಾಪಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

ಎರಡನೇ ಅಲೆಯಲ್ಲಿ 26 ಸಾವಿರಕ್ಕಿಂತ ಅಧಿಕ ಮಂದಿಗೆ ಸೋಂಕು ತಗುಲಿತ್ತು. ಅದರಲ್ಲಿ 16 ಸಾವಿರದಷ್ಟು ಸೋಂಕಿತರು 20ರಿಂದ 40 ವರ್ಷದ ನಡುವಿನವರು. ಯುವಕರೇ ಹೆಚ್ಚು ಸೋಂಕಿಗೆ ಒಳಗಾಗಿದ್ದಾರೆ. ಅನವಶ್ಯವಾಗಿ ಓಡಾಡಬೇಡಿ.
ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

ಮೂರನೇ ಅಲೆ ಬಂದರೆ ಅದು ಮಕ್ಕಳಿಗೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.
ಮೂರನೇ ಅಲೆ ಎದುರಿಸಲು
ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ
ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT