ಮಂಗಳವಾರ, ಅಕ್ಟೋಬರ್ 27, 2020
22 °C
ಸಿಐಡಿ ಡಿವೈಎಸ್ಪಿ ಎ. ಗಿರೀಶ್ ಭರವಸೆ

ಕಸ್ಟೋಡಿಯಲ್‌ ಡೆತ್: ನಿಷ್ಪಕ್ಷಪಾತ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಯಕೊಂಡ: ಮಾಯಕೊಂಡದಲ್ಲಿ‌ ನಡೆದ ‘ಕಸ್ಟೋಡಿಯಲ್‌ ಡೆತ್’ ಪ್ರಕರಣ ಸಂಬಂಧ ಪ್ರಾಮಾಣಿಕ, ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತದೆ. ಘಟನೆ ಸಮಯದ ಎಲ್ಲಾ‌ ಸಾಕ್ಷ್ಯ, ಬೆಳವಣಿಗೆ ಪರಿಶೀಲಿಸಲಾಗಿದೆ ಎಂದು ಸಿಐಡಿ ಡಿವೈಎಸ್ಪಿ ಎ. ಗಿರೀಶ್ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕುರಿತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ. ರಾಮಪ್ಪ ಹಾಗೂ ಮುಖಂಡರು ಮಾಹಿತಿ ಪಡೆಯಲು ಬಂದ ವೇಳೆ ಅವರು ಮಾತನಾಡಿದರು.

‘ಒತ್ತಡದಿಂದ ಯಾರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ. ಕೆಲ ಪೊಲೀಸರ ನಿರ್ಲಕ್ಷ್ಯದಿಂದ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಸಿಐಡಿ ವಿಭಾಗದ ಡಿಜಿ ದರ್ಜೆಯ ಹಿರಿಯ ಅಧಿಕಾರಿಗಳು ವರದಿ ಪರಿಶೀಲಿಸುತ್ತಾರೆ’ ಎಂದು ಭರವಸೆ ನೀಡಿದರು.

‘ಪೊಲೀಸ್ ಠಾಣೆಗಳು ರಾಜಿ ಪಂಚಾಯತಿ ಕೇಂದ್ರಗಳಾಗಿದ್ದು, ಜನರು ಠಾಣೆಗೆ ಹೋಗುವುದೇ ಕಷ್ಟವಾಗಿದೆ. ಮರುಳುಸಿದ್ದಪ್ಪ ಸಾವಿನ  ತನಿಖೆ‌ ನಿಷ್ಪಕ್ಷಪಾತವಾಗಿ ನಡೆಸಬೇಕು. ಜಿಲ್ಲೆಯಲ್ಲಿ ದಲಿತರ ಹತ್ಯೆ ನಡೆದರೂ ಪ್ರಕರಣಗಳನ್ನು ಮುಚ್ಚಿ ಹಾಕಿ, ಪಂಚಾಯಿತಿ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ. ರಾಮಪ್ಪ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗಿರೀಶ್‌, ‘ಪ್ರಾಮಾಣಿಕವಾಗಿ ತನಿಖೆ ನಡೆಸಲು ಬದ್ಧ. ಯಾರಿಗೂ ಅನ್ಯಾಯವಾಗದು’ ಎಂದರು.

ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಟಿ. ಹನುಮಂತಪ್ಪ, ಹೂವಿನ ಮಡು ಚನ್ನಬಸಪ್ಪ, ವಿಠಲಾಪುರ ಮಹಾರುದ್ರಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.