ಮಂಗಳವಾರ, ಸೆಪ್ಟೆಂಬರ್ 21, 2021
26 °C
ದಾವಣಗೆರೆ ಚೆಸ್‌ ಸ್ಕೂಲ್‌ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

ಚದುರಂಗ ಆಡಿದರೆ ಏಕಾಗ್ರತೆ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದಾವಣಗೆರೆ ಚೆಸ್‌ ಸ್ಕೂಲ್‌’ ಅನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಭಾನುವಾರ ಚೆಸ್‌ ಆಡುವ ಮೂಲಕ ಉದ್ಘಾಟಿಸಿದರು

ದಾವಣಗೆರೆ: ಚದುರಂಗ ಆಟದಿಂದ ಏಕಾಗ್ರತೆ ಹೆಚ್ಚಾಗಲಿದ್ದು, ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಜಿಲ್ಲಾ ಚೆಸ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಎಂ.ಸಿ.ಸಿ ‘ಎ’ ಬ್ಲಾಕ್‌ನ ಲಿಟಲ್‌ ವರ್ಡ್‌ ಸ್ಕೂಲ್‌ನಲ್ಲಿ ಆರಂಭಿಸಿದ ‘ದಾವಣಗೆರೆ ಚೆಸ್‌ ಸ್ಕೂಲ್‌’ ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚದುರಂಗ ಸೂಕ್ಷ್ಮ ಆಟವಾಗಿದೆ. ಇದು ಬುದ್ಧವಂತರ ಆಟವಾಗಿದೆ. ಮೆದುಳು ಕೇಂದ್ರಿತ ಆಟವಾಗಿದ್ದು, ಮಕ್ಕಳು ಈ ಆಟವನ್ನು ಹೆಚ್ಚು ಹೆಚ್ಚು ಆಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಚೆಸ್‌ ಅಸೋಸಿಯೇಷನ್‌ನ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ಮಾತನಾಡಿ, ‘ದಾವಣಗೆರೆಯ ಮಕ್ಕಳಿಗೆ ಚೆಸ್‌ ಆಟವನ್ನು ಕಲಿಸುವ ಶಾಲೆ ಇಲ್ಲ ಎಂಬ ಕೊರಗನ್ನು ನಿವಾರಿಸಿದ್ದೇವೆ. ಮಕ್ಕಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಚದುರಂಗ ಆಟದಲ್ಲಿರುವಂತೆ ಮನುಷ್ಯರಲ್ಲೂ ಆನೆ, ಒಂಟೆ, ಕುದುರೆಯ ಸ್ವಭಾವದವರಿರುತ್ತಾರೆ. ಅಂಥವರನ್ನು ಸಮರ್ಥವಾಗಿ ಎದುರಿಸಬೇಕು’ ಎಂದು ಹೇಳಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ಸಾಬ್‌, ಪಾಲಿಕೆ ಸದಸ್ಯರಾದ ಸುರೇಂದ್ರ ಮೊಯ್ಲಿ, ಮುಖಂಡ ಎಂ. ನಾಗರಾಜ್‌, ಚೆಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಟಿ. ಯುವರಾಜ್‌, ಕರಿಬಸಪ್ಪ, ಬಸವರಾಜ್‌ ಹಾಜರಿದ್ದರು.

ಅಂತರ್‌ ಜಿಲ್ಲಾ ಮಟ್ಟದ ಚೆಸ್‌ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. 130ಕ್ಕೂ ಹೆಚ್ಚು ಆಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು