ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ‘ಹಬ್ಬ’ಕ್ಕೆ ದಾವಣಗೆರೆ ಜಿಲ್ಲೆ ಸಜ್ಜು

1946 ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ವರೆಗೆ ಮತದಾನ
Published 6 ಮೇ 2024, 13:48 IST
Last Updated 6 ಮೇ 2024, 13:48 IST
ಅಕ್ಷರ ಗಾತ್ರ

ದಾವಣಗೆರೆ: 13ನೇ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಂಗಳವಾರ (ಮೇ 7) ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಕಾಂಗ್ರೆಸ್ ನಿಂದ ಡಾ.ಪ್ರಭಾ ಮಲ್ಲಿಕಾರ್ಜುನ್ ಮೊದಲ ಬಾರಿಗೆ ಚುನಾವಣಾ ಕಣದಲ್ಲಿ ಇದ್ದಾರೆ. ತಿಪ್ಪೇಸ್ವಾಮಿ ಎ.ಕೆ, (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ), ಈಶ್ವರ (ಉತ್ತಮ ಪ್ರಜಾಕೀಯ ಪಕ್ಷ), ಹನುಮಂತಪ್ಪ (ಬಿಎಸ್‌ಪಿ), ರುದ್ರೇಶ್ ಕೆ.ಎಚ್ (ಸಮಾಜ ವಿಕಾಸ ಕ್ರಾಂತಿ), ವೀರೇಶ್ ಎಸ್. (ರಾಣಿ ಚೆನ್ನಮ್ಮ ಪಾರ್ಟಿ), ಎ.ಟಿ.ದಾದಾಖಲಂದರ್ (ಕಂಟ್ರಿ ಸಿಟಿಜನ್ ಪಾರ್ಟಿ). ಎಂ.ಜಿ.ಶ್ರೀಕಾಂತ್ (ನವಭಾರತ ಸೇನಾ), ದೊಡ್ಡೇಶ್ ಎಚ್.ಎಸ್ (ಜನಹಿತ ಪಕ್ಷ) ,ಶ್ರೀನಿವಾಸ ಎಂ.ಸಿ, (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ ), ಕೆ.ಎಸ್. ವೀರಭದ್ರಪ್ಪ (ಕೆ.ಆರ್‌.ಎಸ್) ಹಾಗೂ ಜಿ.ಬಿ. ವಿನಯ್‌ಕುಮಾರ್ ಸೇರಿದಂತೆ 18 ಜನ ಪಕ್ಷೇತರರು ಸೇರಿ ಒಟ್ಟು 30 ಹುರಿಯಾಳುಗಳು ಚುನಾವಣಾ ಕಣದಲ್ಲಿದ್ದಾರೆ.  

ಜಿಲ್ಲೆಯ 1,946 ಮತಗಟ್ಟೆಗಳಲ್ಲಿ ‘ಮತದಾರ ಪ್ರಭು’ಗಳು ವಿದ್ಯುನ್ಮಾನ ಯಂತ್ರಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ ಅಭ್ಯರ್ಥಿಗಳ ಚುನಾವಣಾ ‘ಹಣೆಬರಹ’ವನ್ನು ಬರೆಯಲಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರುವುದರಿಂದ ಈ ಬಾರಿ ಡಬಲ್ ಬ್ಯಾಲೆಟ್ ಯುನಿಟ್‍ ಬಳಕೆಯಾಗಲಿದೆ.

 ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತಗಟ್ಟೆ ಸಿಬ್ಬಂದಿ 2 ಸೇರಿ ಪ್ರತಿ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ ನಾಲ್ವರು ಮತದಾನ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚುವರಿ ಸೇರಿದಂತೆ ಒಟ್ಟು 8,996 ಮತದಾನ ಸಿಬ್ಬಂದಿಯನ್ನು ನಿಯೋಜಿಸಿದ್ದು, ಅವರು ಎಲ್ಲಾ ತಾಲ್ಲೂಕುಗಳ ಮಸ್ಟರಿಂಗ್ ಕೇಂದ್ರದಿಂದ ಇವಿಎಂ ನೊಂದಿಗೆ, ವಿವಿಪ್ಯಾಟ್, ಬ್ಯಾಲೆಟ್ ಯುನಿಟ್ ಸೇರಿದಂತೆ ಶಾಸನಬದ್ದ ಲಕೋಟೆಗಳು, ಶಾಸನಬದ್ದವಲ್ಲದ ಲಕೋಟೆಗಳೊಂದಿಗೆ ಮತಗಟ್ಟೆ ತಲುಪಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 72.96ರಷ್ಟು ಮತದಾನವಾಗಿತ್ತು. ಈ ಬಾರಿ ‘ಸ್ವೀಪ್‌’ ಕಾರ್ಯಕ್ರಮದಡಿ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಜನಜಾಗೃತಿ ಮೂಡಿಸಲಾಗಿದೆ. ಮತದಾನ ಪ್ರಮಾಣ ಎಷ್ಟು ಹೆಚ್ಚಲಿದೆ ಎಂಬುದು ಮಂಗಳವಾರ ರಾತ್ರಿ ವೇಳೆಗೆ ತಿಳಿಯಲಿದೆ.

ಮತದಾರರು, ಮತಗಟ್ಟೆ ವಿವರ:

ಕ್ಷೇತ್ರ;ಮತಗಟ್ಟೆ;ಪುರುಷರು;ಮಹಿಳೆಯರು;ಇತರರು;ಒಟ್ಟು

ಜಗಳೂರು;263;1,00,046;98,759;10;1,98,815

ಹರಪನಹಳ್ಳಿ;253;1,12,969;1,10,985;19;2,23,973

ಹರಿಹರ; 228;1,05,510;1,06,870;17;2,12,397

ದಾವಣಗೆರೆ ಉತ್ತರ;245;1,24,485;1,28,635;36;2,53,156

ದಾವಣಗೆರೆ ದಕ್ಷಿಣ; 217;1,09,184;1,11,774;39; 2,20,997

ಮಾಯಕೊಂಡ;240;97,759;97,326; 4;1,95,089

ಚನ್ನಗಿರಿ; 255;1,01,653;1,02,208;9;2,03,870

ಹೊನ್ನಾಳಿ;245;1,00,384;1,00,560;3;2,00,947

ಒಟ್ಟು;1946;8,51,990;8,57,117;137; 17,09,244

ಜಿಲ್ಲೆಯ ಮತಗಟ್ಟೆ– ಸಿಬ್ಬಂದಿ ವಿವರ‌ (ಕ್ಷೇತ್ರ;ಪಿಆರ್‌ಒ;ಎಪಿಆರ್‌ಒ;ಪಿಒ;ಒಟ್ಟು)

ಜಗಳೂರು;303;303;606;1212

ಹರಪನಹಳ್ಳಿ;303;303;303;1212

ಹರಿಹರ;262;262;524;1048

ದಾವಣಗೆರೆ ಉತ್ತರ;282;282;564;1128

ದಾವಣಗೆರೆ ದಕ್ಷಿಣ;249;249;498;996

ಮಾಯಕೊಂಡ;276;276;552;1104

ಚನ್ನಗಿರಿ;293;293;586;1172

ಹೊನ್ನಾಳಿ;281;281;562;1124

ಒಟ್ಟು - 2249;2249;4195;8,996

188 ನೇಮಕ ಮಾಡಿರುವ ಮೈಕ್ರೋ ಅಬ್ಸರ್‌ವರ್‌ಗಳು

1141 ವೆಬ್ ಕ್ಯಾಸ್ಟಿಂಗ್ ಮತಗಟ್ಟೆಗಳ ಸಂಖ್ಯೆ

1373 85 ವರ್ಷ ಮೇಲ್ಪಟ್ಟವರು ಮತದಾನ ಮಾಡಿದವರು

787 ಅಂಗವಿಕಲ ಮತದಾರರು ಮತದಾನ ಮಾಡಿದ್ದಾರೆ

ಇವುಗಳಿದ್ದರೂ ಮತದಾನ ಮಾಡಬಹುದು: ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಚುನಾವಣಾ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಇದಲ್ಲದೇ ಆಧಾರ್ ಕಾರ್ಡ್ ನರೇಗಾ ಜಾಬ್ ಕಾರ್ಡ್ ಬ್ಯಾಂಕ್ ಅಂಚೆ ಕಚೇರಿಯಿಂದ ಪಡೆಯಲಾದ ಖಾತೆ ಪುಸ್ತಕದಲ್ಲಿ ಭಾವಚಿತ್ರ ಇದ್ದಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ ಪಾನ್ ಕಾರ್ಡ್ ಆರ್‌ಜಿಐನಿಂದ ನೀಡಲಾದ ಸ್ಮಾರ್ಟ್ ಕಾರ್ಡ್ ಇಂಡಿಯನ್ ಪಾಸ್‍ಪೋರ್ಟ್ ಭಾವಚಿತ್ರವಿರುವ ಪೆನ್ಷನ್ ದಾಖಲೆ ಸರ್ಕಾರಿ ಅರೆ ಸರ್ಕಾರಿ ಸಾರ್ವಜನಿಕ ಉದ್ದಿಮೆಗಳಲ್ಲಿನ ಭಾವಚಿತ್ರವಿರುವ ಗುರುತಿನ ಚೀಟಿ ಅಧಿಕೃತವಾಗಿ ವಿತರಿಸಲಾದ ಲೋಕಸಭಾ ವಿಧಾನಸಭಾ ಪರಿಷತ್ ಸದಸ್ಯರ ಐಡಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾದ ದಿವ್ಯಾಂಗರ ಗುರುತಿನ ಚೀಟಿಗಳನ್ನು ನೀಡಿ ಮತದಾನ ಮಾಡಬಹುದಾಗಿದೆ.

74 ಸಾವಿರ ಮತದಾರರ ಹೆಚ್ಚಳ : ಕಳೆದ ಬಾರಿ 824331 ಪುರುಷರು 810400 ಮಹಿಳೆಯರು ಹಾಗೂ 129 ಇತರೆ ಸೇರಿ ಒಟ್ಟು 1634860 ಮತದಾರರು ಇದ್ದರು. ಐದು ವರ್ಷಗಳ ಅವಧಿಯಲ್ಲಿ ಮತದಾರರ ಸಂಖ್ಯೆ 74384 ಮತದಾರರು ಹೆಚ್ಚಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT