ನಿನ್ನ ನೋವು ನಿನಗಷ್ಟೇ ಅರಿವಾದಾರೆ ನೀನು ಮನುಷ್ಯ, ಇತರರ ನೋವು ಕೂಡ ಅರಿವಾದಾರೆ ನೀನು ಮಾನವ
-ಲಿಯೋ ಟಾಲ್ಸ್ಟಾಯ್

ಮನುಷ್ಯ ಮತ್ತು ಮಾನವ– ಈ ಪದಗಳ ವ್ಯತ್ಯಾಸ ತಿಳಿಯುವ ಪ್ರಯತ್ನ ಮಾಡುವುದಾದರೆ ‘ಸಾಕ್ಷಾತ್ ಎರಡನೇ ದೇವರು’ ಎಂದೇ ಹೆಸರಾದ ವೈದ್ಯರನ್ನು ನೆನೆಯಲೇಬೆಕಾಗುತ್ತದೆ. ಅಂತಃಕರಣ ಇರುವ ಶೇಕಡ 99ರಷ್ಟು ವೈದ್ಯರು ಮಾನವೀಯತೆ ಮೈಗೂಡಿಸಿಕೊಂಡಿದ್ದಾರೆ ಎಂದೇ ಹೇಳಬಹುದು. ಇದಕ್ಕೆ ಕೆಲವೊಂದು ಅಪವಾದಗಳೂ ಇರಬಹುದು. ಆದರೆ, ‘ಹಿಪೊಕ್ರೆಟಿಕ್ ಪ್ರಮಾಣ’ವನ್ನು ಸ್ವೀಕರಿಸಿದ ಎಲ್ಲಾ ವೈದ್ಯರು ನಿಸ್ವಾರ್ಥಿಗಳಾಗಿ, ಸೂಕ್ಷ್ಮ ಸಂವೇದಿಗಳಾಗಿ ವೈದ್ಯಕೀಯ ಸೇವೆಯಲ್ಲಿ ತೊಡಗಬೇಕು. ಏಕೆಂದರೆ, ವೈದ್ಯರು ಸಾಮಾನ್ಯ ಜನರ ಜೀವಗಳೊಂದಿಗೆ ಪ್ರತಿ ದಿನ, ಪ್ರತಿ ಕ್ಷಣ ಬೆರೆಯುತ್ತ, ಅವರ ಚಿಕಿತ್ಸೆಯಲ್ಲಿ ನಿರತರಾಗಿರುವವರು. ಈ ಸಂದೇಶವನ್ನು ತಮ್ಮ ಜೀವನದ ಮುಖಾಂತರವೇ ವೈದ್ಯ ಸಮೂಹಕ್ಕೆ ತಿಳಿಯಪಡಿಸಿದ ಮಹಾನುಭಾವರು ಡಾ.ಬಿಧನ್ ಚಂದ್ರ ರಾಯ್. ಅವರ ಸ್ಮರಣಾರ್ಥ ದೇಶದಾದ್ಯಂತ 1991ರಿಂದ ಜುಲೈ 1ರಂದು ‘ವೈದ್ಯರ ದಿನ’ ಆಚರಿಸಲಾಗುತ್ತಿದೆ.

ಡಾ. ಬಿ.ಸಿ.ರಾಯ್ ಅವರು ದೇಶ ಕಂಡ ಅತ್ಯುತ್ತಮ ವೈದ್ಯರಷ್ಟೇ ಅಲ್ಲದೆ ಒಬ್ಬ ನುರಿತ ಆಡಳಿತಗಾರರಾಗಿದ್ದರು. ಸ್ವಾತಂತ್ರ್ಯ ಹೊರಾಟಗಾರರಾಗಿದ್ದ ಅವರು, ಸುದೀರ್ಘ ಅವಧಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ನಿಷ್ಠೆಯ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸಿದರು. ಜೊತೆಗೆ, ಪ್ರತಿದಿನ ಎರಡು ಗಂಟೆ ರೋಗಿಗಳ ತಪಾಸಣೆಯ ಮೂಲಕ ತಮ್ಮ ಮೂಲ ವೃತ್ತಿಯನ್ನೂ ಕಾಪಿಟ್ಟುಕೊಂಡು ಬಂದಿದ್ದರು. ಅವರ ಈ ಅನನ್ಯ ಸೇವೆ ಮನಗಂಡು 1961ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಲಾಗಿದೆ. ಡಾ.ಬಿ.ಸಿ.ರಾಯ್ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸುಮಾರು 5 ವರ್ಷಗಳ ವೈದ್ಯಕೀಯ ವ್ಯಾಸಂಗದಲ್ಲಿ ಮನುಷ್ಯನ ದೇಹದ ಪ್ರತಿ ಕಣಕಣ, ಅಂಗಾಂಗ, ಅವುಗಳ ಚಟುವಟಿಕೆ, ಕಾರ್ಯವಿಧಾನಗಳ ಬಗ್ಗೆ ವೈದ್ಯರು ಸಂಪೂರ್ಣವಾಗಿ ಓದಿರುತ್ತಾರೆ. ವ್ಯಾಸಂಗದ ಅವಧಿಯಲ್ಲಿ ಗಳಿಸಿದ ಜ್ಞಾನವನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುತ್ತಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು ಗಂಭೀರ ಕಾಯಿಲೆಗಳ ಪೀಡಿತರ ಜೀವ ಉಳಿಸುವವರೆಗೆ ವೈದ್ಯರ ಸೇವೆ ಮತ್ತು ತೊಡಗಿಸಿಕೊಳ್ಳುವಿಕೆ ಅತ್ಯಂತ ಪವಿತ್ರವಾದದ್ದು, ಅನನ್ಯವಾದದ್ದು. ಇತರೆ ಯಾವುದೇ ಸೇವೆಗಳಿಗಿಂತಲೂ ವೈದ್ಯಕೀಯ ಸೇವೆಯನ್ನು ಬಹು ಎತ್ತರದ ಸೇವೆಯನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ವೈದ್ಯವೃತ್ತಿಯನ್ನು ಕೇವಲ ವೃತ್ತಿಯನ್ನಾಗಿ ಮಾತ್ರವಲ್ಲದೆ ಸೇವಾ ಕ್ಷೇತ್ರವನ್ನಾಗಿಯೂ ಪರಿಗಣಿಸಲಾಗುತ್ತಿದೆ.

ಕೆಲವೊಂದು ಮಹಾನಗರಗಳಲ್ಲಿ ಮತ್ತು ದೊಡ್ಡ ಪಟ್ಟಣಗಳಲ್ಲಿ ಆರೋಗ್ಯ ಸೇವೆಯ ಹೆಸರಿನಲ್ಲಿ ಒಂದು ಕಾರ್ಪೋರೇಟ್ ವ್ಯವಸ್ಥೆ ಕಾಲಿಟ್ಟಿರುವುದು ಇತ್ತೀಚಿನ, ವಿಷಾದದ ಬೆಳವಣಿಗೆ. ಕೆಲವೊಂದು ಬಹುರಾಷ್ಟ್ರೀಯ ಕಂಪನಿಗಳು ಕೂಡ ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟು ಈ ಕ್ಷೇತ್ರವನ್ನು ಉದ್ಯಮವನ್ನಾಗಿ ಪರಿವರ್ತಿಸಿರುವುದು ನಿಜಕ್ಕೂ ದುಃಖದ ಮತ್ತು ಬೇಸರದ ವಿಷಯ. ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಹಾಗೆ ‘ನಿಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಇಷ್ಟೊಂದು ವಿಪರೀತ ದರ ಪಟ್ಟಿ ಇದೆ, ಬಡವರು ಹೇಗೆ ಚಿಕಿತ್ಸೆ ಪಡಯಬೇಕು? ಎಂಬ ಒಬ್ಬ ಪತ್ರಕರ್ತರೊಬ್ಬರ ಪ್ರಶ್ನೆಗೆ ‘ನಾವು ಈ ಆಸ್ಪತ್ರೆಯನ್ನು ಬಡವರಿಗಾಗಿ ನಡೆಸುತ್ತಿಲ್ಲ, ಹಣಕೊಟ್ಟು ಚಿಕಿತ್ಸೆ ಪಡೆಯುವವರು ಮಾತ್ರ ಬರಬಹುದು. ನಾವು ಕೋಟಿಗಟ್ಟಲೆ ಬಂಡವಾಳ ಸುರಿದು ಆಸ್ಪತ್ರೆ ಕಟ್ಟಿದ್ದೇವೆ’ ಎಂದು ಆ ಆಸ್ಪತ್ರೆಯ ಮುಖ್ಯಸ್ಥ ಉತ್ತರಿಸುತ್ತಾನೆ. ಇದು, ಆತನ ದೃಷ್ಟಿಕೋನದಿಂದ ನೋಡಿದಾಗ ಸತ್ಯವೇ ಇರಬಹುದಾದರೂ, ವೈದ್ಯರೂ ಬಂಡವಾಳಶಾಹಿಯಾಗಿ ಬದಲಾಗಿರುವುದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಬೃಹತ್ ಆಗಿ ಬೆಳೆಯುವ ಸಂಭವ ಇರುವುದು ಕೂಡ ಕರಾಳ ಸತ್ಯವಾಗಿ ಕಾಣಿಸುತ್ತಿದೆ.

ರಾಷ್ಟ್ರೀಯ ವೈದ್ಯರ ದಿನವನ್ನು ಪ್ರತಿ ವರ್ಷ ಹೊಸ ಘೋಷಣೆಯೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಘೋಷಣೆ ‘ಗುಣಪಡಿಸುವ ಕೈಗಳನ್ನು ಗೌರವಿಸೋಣ’ ಎಂಬುದಾಗಿದೆ. ನಾವೆಲ್ಲ ನೋಡಿರುವ ಮತ್ತು ಕೇಳಿರುವ ಹಾಗೆ ವೈದ್ಯರ ಮೇಲೆ ಈಚಿನ ದಿನಗಳಲ್ಲಿ ಹಲ್ಲೆಗಳು ನಡೆಯುತ್ತಲೇ ಇವೆ. ಒಮ್ಮೊಮ್ಮೆ ಮಾರಣಾಂತಿಕ ಹಲ್ಲೆಗಳೂ ನಡೆದಿವೆ. ಕೋಲ್ಕತ್ತದಲ್ಲಿ ನಡೆದ ಸ್ನಾತಕ್ಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಘಟನೆಯು ನಾಗರಿಕ ಸಮಾಜವು ತಲೆ ತಗ್ಗಿಸುವಂಥದ್ದು. ಕೇರಳದಲ್ಲೂ ಹೀಗೆಯೇ ಉನ್ಮತ್ತ ವ್ಯಕ್ತಿಯೊಬ್ಬ ಕರ್ತವ್ಯನಿರತ ಕಿರಿಯ ವೈದ್ಯೆಯನ್ನು ಹತೆಗೈದಿದ್ದು, ದೇಶದಾದ್ಯಂತ ಸುದ್ದಿಯಾಗಿತ್ತು. ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು, ವೈದ್ಯರಿಗೆ ಕೆಲಸದ ಸ್ಥಳಗಳಲ್ಲಿ ಸೂಕ್ತ ಭದ್ರತೆ ಇಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಯುವಸಮೂಹ ಮತ್ತು ಮಧ್ಯ ವಯಸ್ಕರು ಅನೇಕ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗುವುದನ್ನು ನೋಡುತ್ತಿದ್ದೇವೆ. ಸ್ಪರ್ಧಾತ್ಮಕ ಜಗತ್ತು, ಬದಲಾದ ಆಹಾರದ ಮತ್ತು ಜೀವನಶೈಲಿ, ವಿಶ್ರಾಂತಿ ಪಡೆಯದೇ ಇರುವುದು. ಅನಗತ್ಯ ವ್ಯಾಯಾಮ (ಜಿಮ್)ದಲ್ಲಿ ತೊಡಗುವುದು, ಸುಧೀರ್ಘ ಅವಧಿಗೆ ಕಂಪ್ಯೂಟರ್, ಟಿ.ವಿ. ಎದುರು ಸಮಯ ಕಳೆಯವುದು, ಜಂಕ್ ಫುಡ್ ಹೆಚ್ಚಾಗಿ ಸೇವಿಸುವುದೇ ಪ್ರಮುಖ ಕಾರಣಗಳಾಗಿವೆ.

ಸಾಮಾನ್ಯವಾಗಿ ದೀರ್ಘಕಾಲೀನ ಕಾಯಿಲೆ ಬರುವುದು ಎರಡು ಪ್ರಮುಖ ಕಾರಣಗಳಿಗಾಗಿ. ಮೊದಲನೆಯದು ಅನುವಂಶೀಯತೆ , ಎರಡನೆಯದು ಬದಲಾದ ಜೀವನಶೈಲಿ. ಮನೆಯಲ್ಲಿ ದೀರ್ಘಕಾಲೀನ ರೋಗಿಗಳಿದ್ದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯ ಇರುತ್ತದೆ. ಶೀಘ್ರ ಪತ್ತೆಯಾದಲ್ಲಿ ಯಾವುದೇ ಅಸಾಂಕ್ರಾಮಿಕ ಕಾಯಿಲೆಯನ್ನು ಚಿಕಿತ್ಸೆಗೊಳಪಡಿಸಿ ವ್ಯಕ್ತಿಗೆ ಉಂಟಾಗುವ ದುಷ್ಪರಿಣಾಮ ತಡೆಯಬಹುದು. ಅಸಾಂಕ್ರಾಮಿಕ ರೋಗಗಳಿಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದು, ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಈ ಕುರಿತು ವೈದ್ಯರೇ ಸ್ಥಾಪಿಸಿಕೊಂಡಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮುಂತಾದ ಸ್ವಯಂ ಸೇವಾ ಸಂಸ್ಥೆಗಳಿಂದ ಸಾಕಷ್ಟು ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ.

ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆದಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ವೈದಯಕೀಯ ವ್ಯವಸ್ಥೆ ಮತ್ತು ಸೌಲಭ್ಯಗಳು ಅತ್ಯುತ್ತಮವಾಗಿವೆ. ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರ ಆರೈಕೆವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಒಟ್ಟಾರೆ, ವೈದ್ಯಕೀಯ ಸೇವಾ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಲೇ ನೋವಿನಲ್ಲಿರುವ ಎಂಥ ರೋಗಿಗೂ ಸೂಕ್ತ, ಸಮರ್ಪಕ, ಉಚಿತ, ಮತ್ತು ಸಮಗ್ರವಾದ ಚಿಕಿತ್ಸೆ ಸಿಗಬೇಕು, ಕಾರ್ಪೋರೇಟ್ ವ್ಯವಸ್ಥೆ ಯಾವುದೇ ಆಸ್ಪತ್ರೆಯಲ್ಲಿ ಕಾಣದೆ ಆದಷ್ಟೂ ಜನಸ್ನೇಹಿಯಾಗಿರುವಂತೆ ನೋಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

–ಲೇಖಕರು ಜಿಲ್ಲಾ ಸರ್ವೇಕ್ಷಣಾಧಿಕಾರಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.