ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೆಳೆದ ಶ್ವಾನಗಳ ಪ್ರದರ್ಶನ

Last Updated 7 ಫೆಬ್ರುವರಿ 2023, 4:33 IST
ಅಕ್ಷರ ಗಾತ್ರ

ದಾವಣಗೆರೆ: ಎಸಿ ಕಾರಿನೊಳಗೆ ಕುಳಿತು ನೆಚ್ಚಿನ ಒಡೆಯನಿಂದ ಮೈಯನ್ನು ನೇವರಿಸಿಕೊಳ್ಳುತ್ತಿದ್ದ ಶ್ವಾನ. ಪುಟ್ಟ ಟೇಬಲ್‌ ಮೇಲೆ ನಿಂತು ಕೂದಲನ್ನು ಬಾಚಿಸಿಕೊಳ್ಳುತ್ತಿದ್ದ ಶ್ವಾನ, ದೇಶಿ ತಳಿ ಮುಧೋಳ ಮೇಲೆಯೇ ಎಲ್ಲರ ಕಣ್ಣು.

ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್‌ನಿಂದ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 6ನೇ ವರ್ಷದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಯಲ್ಲಿ ಕಂಡುಬಂದ ದೃಶ್ಯಗಳು ಇವು.

ಫ್ರೆಂಚ್ ಬುಲ್‌ ಡಾಗ್, ಬೀಗಲ್, ಸಿಡ್ಜ್, ಪಗ್, ಐರಿಷ್. ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್ ಸೇರಿದಂತೆ 18 ತಳಿಗಳ 200ಕ್ಕೂ ಹೆಚ್ಚು ಶ್ವಾನಗಳು ಇದ್ದವು. ಶಿವಮೊಗ್ಗ, ಚಿತ್ರದುರ್ಗ, ಗೋವಾ, ಶಿರಸಿ, ಬೆಂಗಳೂರು ಸೇರಿ ವಿವಿಧ ಭಾಗಗಳಿಂದ ಶ್ವಾನಗಳನ್ನು ಕರೆತರಲಾಗಿತ್ತು. ಅವುಗಳನ್ನು ನೋಡಲು, ಮೈಸವರಲು, ಸೆಲ್ಫಿ ತೆಗೆದುಕೊಳ್ಳಲು ಮಕ್ಕಳು, ಯುವಕ, ಯುವತಿಯರು, ದೊಡ್ಡವರು ಹೀಗೆ ಎಲ್ಲ ವಯೋಮಾನದವರು ಮುಗಿಬಿದ್ದರು.

ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಬೆಳಗಾವಿಯ ನೀಲ್‌ಕಮಲ್ ಅವರ ಜರ್ಮನ್ ಶೆಫರ್ಡ್‌ ತಳಿಯ ಶ್ವಾನಕ್ಕೆ ಪ್ರಥಮ ಸ್ಥಾನ ಲಭಿಸಿದ್ದು, ₹25,000 ಬಹುಮಾನ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಡಾಬರ್‌ಮನ್ ಶ್ವಾನದ ಮಾಲೀಕ ಚಿತ್ರದುರ್ಗದ ರವಿ ಅವರಿಗೆ 15,000 ಹಾಗೂ ರೋಟ್‌ವೀಲರ್ ಶ್ವಾನ 3ನೇ ಸ್ಥಾನ ಪಡೆದಿದ್ದು, ಅದರ ಮಾಲೀಕ ಸುಬ್ರಹ್ಮಣ್ಯ ಅವರಿಗೆ ₹10,000 ಬಹುಮಾನ ನೀಡಲಾಯಿತು.

ದೇಶಿಯ ತಳಿಯಲ್ಲಿ ಬೆಸ್ಟ್ ಅಡಲ್ಟ್ ಪ್ರಶಸ್ತಿಯನ್ನು ಮುಧೋಳದ ಶ್ವಾನ ಪಡೆದುಕೊಂಡಿದ್ದು, ಅದರ ಮಾಲೀಕ ನವೀನ್ ಬಾಡ ಅವರು ₹3000 ಬಹುಮಾನ ಪಡೆದುಕೊಂಡರು.

ಪಾಲಿಕೆ ಸದಸ್ಯ ಎ. ನಾಗರಾಜ್, ದಿನೇಶ್‌ ಶೆಟ್ಟಿ, ಆಯೋಜಕರಾದ ಗುರುರಾಜ್, ಪವನ್, ಅರವಿಂದ್, ಸಿರೀಶ್, ಚಿರು, ಮನೋಜ್, ಸುನಿಲ್, ಶಿವಕುಮಾರ್, ಅಭಿನಂದನ್, ವಿನಯ್, ರವಿವರ್ಮ ಇದ್ದರು. ಗೋವಾದ ಸ್ಟೀವ್ ಆಲ್ಮೆಡಾ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT