ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ಹೆಚ್ಷುತ್ತಿದೆ ಬಿಸಿಲು: ಒಣಗುತ್ತಿವೆ ಹೆದ್ದಾರಿ ಗಿಡ

ಹರಿಹರ: ಸಸಿ ನೆಟ್ಟು, ಪೋಷಣೆ ಮರೆತರು; ನೀರುಣಿಸಿದರೆ ಲಕ್ಷ ಪ್ರಯಾಣಿಕರಿಗೆ ಸಿಗಲಿದೆ ನೆರಳು
Published 31 ಜನವರಿ 2024, 5:34 IST
Last Updated 31 ಜನವರಿ 2024, 5:34 IST
ಅಕ್ಷರ ಗಾತ್ರ

ಹರಿಹರ: ಹರಿಹರ-ದಾವಣಗೆರೆ ಮಧ್ಯದ ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿ ರೈಲ್ವೆ ಲೈನ್‌ಗೆ ಸಮಾನಾಂತರವಾಗಿ 3 ಕಿ.ಮೀ. ಉದ್ದದ ಡಾಂಬರಿನ ಜೋಡಿ ರಸ್ತೆಯನ್ನು 8 ವರ್ಷಗಳ ಹಿಂದೆ ನಿರ್ಮಿಸಲಾಯಿತು.

ಈ ರಸ್ತೆಯ ರೈಲ್ವೆ ಲೈನ್ ಪಕ್ಕದಲ್ಲಿ ಆಗಿನ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಉಷಾರಾಣಿಯವರ ಅವಧಿಯಲ್ಲಿ ಗಿಡಗಳನ್ನು ನೆಟ್ಟು ನಿರಂತರ ಪೋಷಣೆ ಮಾಡಿದ್ದಕ್ಕೆ ನೂರಕ್ಕೂ ಹೆಚ್ಚು ಸಾಲು ಮರಗಳು ಈಗ ನೆರಳು, ಗಾಳಿ ನೀಡುತ್ತಿವೆ.

ಜೋಡಿ ರಸ್ತೆ ಮಧ್ಯದ ಖಾಲಿ ಜಾಗದಲ್ಲಿ ಕಳೆದೆರಡು ವರ್ಷಗಳಿಂದ ದೊಡ್ಡಬಾತಿಯ ತಪೋವನ ಸಂಸ್ಥೆ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ನೆಟ್ಟಿರುವ ಸಸಿಗಳಲ್ಲಿ ಕೆಲವು ಬೆಳೆದು ನಿಂತಿದ್ದರೆ, ಉಳಿದವು ಪೋಷಣೆ ಇಲ್ಲದೆ ನಶಿಸುವ ಹಂತದಲ್ಲಿವೆ.

3 ಕಿ.ಮೀ. ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು ಆ ಪೈಕಿ 100 ಸಸಿಗಳು ಏಳೆಂಟು ಅಡಿ ಎತ್ತರಕ್ಕೆ ಬೆಳೆದಿವೆ, 40 ಸಸಿಗಳು ಒಣಗಿದ್ದು, ಇನ್ನು ಅಂದಾಜು 50 ಸಸಿಗಳು ನೀರಿಲ್ಲದೆ ಕೊನೆ ಉಸಿರು ಎಳೆಯುವ ಹಂತಕ್ಕೆ ಬಂದಿವೆ. ಇನ್ನೂ 4 ತಿಂಗಳು ಬಿರು ಬಿಸಿಲಿರಲಿದ್ದು, ಆ ಸಸಿಗಳು ನೀರು ಸಿಗದಿದ್ದರೆ ಸತ್ತು ಹೋಗುವ ಅಪಾಯವಿದೆ.

ರಾಜ್ಯ ಹೆದ್ದಾರಿ, ಹರಿಹರ-ದಾವಣಗೆರೆ ಅವಳಿ ನಗರದ ರಸ್ತೆಯಾಗಿರುವ ಇಲ್ಲಿ ನಿತ್ಯ 1,200 ಬಸ್ಸು, 12,000 ದ್ವಿಚಕ್ರ ವಾಹನ, 2,200 ಕಾರು, 800 ಆಟೊ, 1,000 ಲಾರಿ ಹೀಗೆ ಒಟ್ಟು 17,000 ವಾಹನಗಳು, ಅಂದಾಜು 1 ಲಕ್ಷ ಜನ ಪ್ರಯಾಣಿಕರು ಸಂಚರಿಸುತ್ತಾರೆ. ಪಕ್ಕದಲ್ಲೇ ಹುಬ್ಬಳ್ಳಿ-ಬೆಂಗಳೂರು ನಡುವೆ 50 ರೈಲುಗಳು ಸಂಚರಿಸುತ್ತವೆ.

ಇಷ್ಟೊಂದು ವ್ಯಸ್ತವಾಗಿರುವ ಹಾಗೂ ನಗರದ ಅಂಚಿನಿಂದ ಆರಂಭವಾಗುವ ಈ ರಸ್ತೆಯು ಮರ, ಗಿಡಗಳಿಂದ ಆವೃತ್ತವಾದರೆ, ಹೆದ್ದಾರಿಯು ಪ್ರಾಕೃತಿಕವಾಗಿ ಸುಂದರವಾಗಿ ಕಾಣುವ ಜೊತೆಗೆ ಸಂಚರಿಸುವ ಒಂದು ಲಕ್ಷ ಪ್ರಯಾಣಿಕರಿಗೆ ನೆರಳು, ಶುದ್ಧ ಗಾಳಿ ಒದಗುತ್ತದೆ.

ಹರಿಹರ ಹೊರವಲಯದ ಬೀರೂರು-ಸಮ್ಮಸಗಿ ಹೆದ್ದಾರಿ ಮಧ್ಯದಲ್ಲಿ ನೆಟ್ಟಿರುವ ಸಸಿಗಳು ಬೆಳೆದು ನಿಂತಿರುವುದು
ಹರಿಹರ ಹೊರವಲಯದ ಬೀರೂರು-ಸಮ್ಮಸಗಿ ಹೆದ್ದಾರಿ ಮಧ್ಯದಲ್ಲಿ ನೆಟ್ಟಿರುವ ಸಸಿಗಳು ಬೆಳೆದು ನಿಂತಿರುವುದು

ಸಸಿ ನೆಟ್ಟು ಪೋಷಣೆ ಮರೆಯುವ ಮಳೆಗಾಲದ ಪರಿಸರವಾದಿಗಳು ಹೆಚ್ಚಾಗಿದ್ದಾರೆ. ಸಸಿ ನೆಟ್ಟವರು ಪೋಷಣೆಯ ಜವಾಬ್ದಾರಿಯನ್ನೂ ಹೊರಬೇಕು ಜಬಿಉಲ್ಲಾ ಚುಟ್ಗಿ ಜಿಲ್ಲಾ ಸಂಚಾಲಕ ‘ಪರಿಸರಕ್ಕಾಗಿ ನಾವು ಸಂಸ್ಥೆ’

ಹೆದ್ದಾರಿ ಮಧ್ಯದಲ್ಲಿ ಇಲಾಖೆಯಿಂದ ಗಿಡಗಳನ್ನು ಬೆಳೆಸಿಲ್ಲ. ಸಸಿಗಳಿಗೆ ನೀರುಣಿಸಲು ನಗರಸಭೆ ಮುಂದೆ ಬಂದರೆ ನಾವೂ ಕೂಡ ಕೈಜೋಡಿಸುತ್ತೇವೆ

-ಅಮೃತ ಟಿ.ಆರ್. ಆರ್‌ಎಫ್‌ಒ ಸಾಮಾಜಿಕ ಅರಣ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT