ವಿದ್ಯುತ್‌ ಶಾರ್ಟ್‌ ಸರ್ಕೀಟ್‌: ಮನೆಗೆ ಬೆಂಕಿ

7

ವಿದ್ಯುತ್‌ ಶಾರ್ಟ್‌ ಸರ್ಕೀಟ್‌: ಮನೆಗೆ ಬೆಂಕಿ

Published:
Updated:
Deccan Herald

ದಾವಣಗೆರೆ: ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಶನಿವಾರ ಮನೆಯ ಸಾಮಗ್ರಿ ಪೂರ್ತಿ ಸುಟ್ಟು ಕರಕಲಾಗಿದೆ.

ಎಂ.ಬಿ. ವಸಂತರೋಡ್‌ನ ಹದಡಿ ಸಿದ್ದಪ್ಪ ಕಾಂಪೌಂಡ್‌ನ ಜಿ. ಅನಂತರಾವ್‌ ಮತ್ತು ಅವರ ಮಗ ಜಿ.ಎ. ಬಸವರಾಜ್‌ ಹೆಸರಲ್ಲಿದ್ದ ಮನೆಯಲ್ಲಿ ಈ ಅವಘಡ ನಡೆದಿದೆ. ಟಿ.ವಿ. ಫ್ರಿಜ್‌, ಇತರ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಅಕ್ಕಿ, ಬೇಳೆಕಾಳು, ಪಾತ್ರೆಗಳು, ಆಭರಣ, ಮನೆಯ ಎಲ್ಲ ಪರಿಕರಗಳು ಸುಟ್ಟು ಹೋಗಿವೆ.

ಸುಮಾರು ₹ 3. 5 ಲಕ್ಷ ನಷ್ಟ ಉಂಟಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ ಎಂದು ಬಸವರಾಜ್‌ ಅವರ ಸಹೋದರ ಸುಧಾಕರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !