ಶುಕ್ರವಾರ, ನವೆಂಬರ್ 22, 2019
19 °C

ಯುವತಿಗೆ ಕಿರುಕುಳ: ನಕಲಿ ಪೊಲೀಸರ ಬಂಧನ

Published:
Updated:

ದಾವಣಗೆರೆ: ಪೊಲೀಸರು ಎಂದು ಹೆದರಿಸಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹದಡಿ ಗ್ರಾಮದ ಕೆ.ಎನ್‌. ಸುರೇಶ್‌ (30), ನಿಟುವಳ್ಳಿಯ ಮಲ್ಲಿಕಾರ್ಜುನ (40) ಬಂಧಿತ ಆರೋಪಿಗಳು.

ಆ.13ರಂದು ಹರಪನಹಳ್ಳಿಯ ಯುವತಿ ಮತ್ತು ಆಕೆಯ ಸ್ನೇಹಿತ ಇಲ್ಲಿನ ತುಂಗಭದ್ರಾ ಬಡಾವಣೆ ಬಳಿ ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದಾಗ ಆರೋಪಿಗಳು ಅಲ್ಲಿಗೆ ಬಂದಿದ್ದರು. ತಾವು ಪೊಲೀಸರು ಎಂದು ಹೇಳಿ ಇಬ್ಬರನ್ನು ವಾಹನಕ್ಕೆ ಹತ್ತಿಸಿಕೊಂಡು ಹೋಗಿದ್ದರು. ಬಳಿಕ ಇಬ್ಬರನ್ನು ಬೇರೆ ಬೇರೆ ಮಾಡಿ ಯುವತಿಯನ್ನು ನಾಗನೂರಿಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡಿದ್ದರು. ಯುವತಿಯನ್ನು ಬಿಡಲು ₹ 20 ಸಾವಿರ ನೀಡುವಂತೆ ಆಕೆಯ ಗೆಳೆಯನಿಗೆ ಒತ್ತಾಯಿಸಿದ್ದರು. ಅವರ ಕೈಯಿಂದ ತಪ್ಪಿಸಿಕೊಂಡು ಬಂದ ಇಬ್ಬರು ಮಹಿಳಾ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರತಿಕ್ರಿಯಿಸಿ (+)