ಮಂಗಳವಾರ, ಮೇ 24, 2022
25 °C

ಪಲ್ಟಿಯಾಗಿ ನೀವು ಸತ್ತರೆ ಅರಿವಾಗುತ್ತೆ: ಅಧಿಕಾರಿಗಳಿಗೆ ಸಂಸದ ಸಿದ್ದೇಶ್ವರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ದಾವಣಗೆರೆ: ‘ನಿಮ್ಮ ವಾಹನ ಪಲ್ಟಿ ಹೊಡೆಯಬೇಕು. ನಿಮ್ಮಲ್ಲಿ ಯಾರಾದರೂ ಸಾಯಬೇಕು. ಆಗ ನಿಮಗೆ ಅರಿವಾಗುತ್ತದೆ. ಬೇರೆಯವರನ್ನು ಸಾಯಿಸಲು ನೀವಿದ್ದೀರಿ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮಾಡಿರುವ ಕಾಮಗಾರಿಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿರುವ ಸಂಸದರು ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ರೀತಿ ಮಾತನಾಡಿದ್ದಾರೆ.

ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ಬಳಿ ಫಸ್ಟ್‌ಕ್ಲಾಸ್‌ ಸರ್ವಿಸ್‌ ರಸ್ತೆ ಇದೆ. ಅಲ್ಲಿ ಎರಡು ಅಂತರ ಇಟ್ಟಿರುವುದರಿಂದ ವಾಹನಗಳು ವೇಗವಾಗಿ ಬಂದರೆ ಪಲ್ಟಿ ಹೊಡೆಯುತ್ತವೆ ಎಂದು ಸಂಸದರು ತಿಳಿಸಿದರು.

ಅದನ್ನು ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು