ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಉತ್ತಮ ಮಳೆ

Last Updated 9 ಆಗಸ್ಟ್ 2020, 16:46 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಸೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ತಾಲ್ಲೂಕಿನ ಅಣಜಿ, ಮಾಯಕೊಂಡ, ಹದಡಿ, ಕುಕ್ಕವಾಡ ಹಾಗೂ ಕಾಡಜ್ಜಿಯಲ್ಲಿ ಮಳೆಯಾಗಿದೆ.ಭಾನುವಾರ ಬೆಳಿಗ್ಗೆವರೆಗೆ ಜಗಳೂರಿನ ಕೆಲವೆಡೆ 13 ಮಿ.ಮೀ ವರೆಗೂ ಉತ್ತಮ ಮಳೆ ಸುರಿದಿದೆ. ಹೊನ್ನಾಳಿ 8, ಚನ್ನಗಿರಿ 8 , ದಾವಣಗೆರೆ 7, ಹರಿಹರ 5 ಮಿ.ಮೀ. ಮಳೆಯಾಗಿದೆ.

‘ದಾವಣಗೆರೆಯ ಅಣಜಿಯಲ್ಲಿ 2, ಕಾಡಜ್ಜಿಯಲ್ಲಿ 3 ಮಾಯಕೊಂಡದಲ್ಲಿ 0.2 ಮಿ.ಮೀ ಸೇರಿ ತಾಲ್ಲೂಕಿನಲ್ಲಿ ಒಟ್ಟು 7.7 ಮಿ.ಮೀ. ಮಳೆಯಾಗಿದೆ’ ಎಂದು ತಹಶೀಲ್ದಾರ್ ಗಿರೀಶ್ ತಿಳಿಸಿದ್ದಾರೆ.

‘ಆಗಸ್ಟ್ 1ರಿಂದ 8ರವರೆಗೆ ಜಿಲ್ಲೆಯಲ್ಲಿ 38.4 ಸೆಂ.ಮೀ. ಮಳೆಯಾಗಿದೆ ಮಳೆಯಾಗಿದೆ’ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಿಳಿಸಿದ್ದಾರೆ.

ಮಾಯಕೊಂಡ ವರದಿ:ಕಳೆದೆರಡು‌ ದಿನ ಜಿಟಿಜಿಟಿ ಹಿಡಿದುಕೊಂಡಿದ್ಡ ಆಶ್ಲೇಷ ಮಳೆ‌ ಭಾನುವಾರ ಸತತ ಎರಡು ಗಂಟೆ ಸುರಿದಿದೆ. ಬಿರುಸಿನ ಮಳೆಯಿಂದ ಹೊಲಗದ್ದೆಗಳಿಂದ ನೀರು ಹರಿದು ಹಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ಕೆರೆಗಳಿಗೂ ನೀರು ಬರುತ್ತಿದೆ.

ಹೋಬಳಿಯ ಹುಚ್ಚವನಹಳ್ಳಿ, ಅಣ್ಣಾಪುರ, ಅಣಬೇರು, ಬಾಡಾ, ಕೊಡಗನೂರು ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಆನಗೋಡು ಹೋಬಳಿಯ ನೆರ್ಲಿ‌ಗೆ, ನರಗನಹಳ್ಳಿ, ಭಾವಿ ಹಾಳು, ಚಿನ್ನಸಮುದ್ರ, ಸುಲ್ತಾನಿಪುರ, ಶಿವಪುರ, ಪವಾಡ ರಂಗವ್ವನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಬಿರುಸಿನ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT