ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ಬರಿದಾದ ತುಂಗಭದ್ರೆ ಒಡಲು: ಇನ್ನೆರಡು ದಿನ ಮಾತ್ರ ನದಿ ನೀರು

ಹರಿಹರ: ಮತ್ತೆ ಶುರುವಾಗಲಿದೆ ಜಲ ಸಂಕಟ
Published 18 ಏಪ್ರಿಲ್ 2024, 6:30 IST
Last Updated 18 ಏಪ್ರಿಲ್ 2024, 6:30 IST
ಅಕ್ಷರ ಗಾತ್ರ

ಹರಿಹರ: ಜಿಲ್ಲೆಯ ಜೀವ ನದಿ ತುಂಗಭದ್ರೆಯ ಒಡಲು ಮತ್ತೊಮ್ಮೆ ಬರಿದಾಗಿದೆ. ನಗರದಲ್ಲಿ ಮತ್ತೆ ಜಲಸಂಕಟ ಆರಂಭವಾಗಿದೆ.

ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ನಗರಸಭೆಯಿಂದ ಕವಲತ್ತು ಗ್ರಾಮದ ಸಮೀಪದಲ್ಲಿ ಜಾಕ್‌ವೆಲ್‌ಗೆ ನೀರು ಹರಿಸುವ ಪ್ರಯತ್ನ ಮಾಡಲಾಗುತ್ತಿದೆ. 

ಜಲಾಶಯದಿಂದ ಹರಿಸುತ್ತಿದ್ದ ನೀರನ್ನಾಧರಿಸಿ ಏ.13ರವರೆಗೂ ಹರಿಹರದಲ್ಲಿ 24/7 ಯೋಜನೆಯಡಿ ನಿರಂತವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಏ.14ರಿಂದ ದಿನದಲ್ಲಿ ಒಂದೆರಡು ಗಂಟೆ ಮಾತ್ರ ನೀರು ಹರಿಸಲಾಗುತ್ತಿದ್ದು, ಏ.19ರ ನಂತರನೀರು ಸರಬರಾಜು ಸಂಪೂರ್ಣವಾಗಿ ನಿಲುಗಡೆಯಾಗುವ ಸಾದ್ಯತೆ ಇದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಏ.19ರ ನಂತರ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ. ನಗರಸಭೆ, ಗ್ರಾಮ ಪಂಚಾಯಿತಿ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ, ಕಂದಾಯ, ಪಂಚಾಯತ್ ರಾಜ್ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಲೋಕಸಭಾ ಚುನಾವಣಾ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ನೀರಿನ ಸಮಸ್ಯೆಗೆ ಸ್ಪಂದಿಸುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರದ್ದು.

‘ಕವಲತ್ತು ಗ್ರಾಮ ಸಮೀಪದ ಜಾಕ್‌ವೆಲ್ ಬಳಿ ನೀರು ಹರಿಸುವ ಪ್ರಯತ್ನ ಮಾಡುತ್ತಿದ್ದು, ಸಮೀಪದ ಬ್ಯಾರೇಜ್‌ನಲ್ಲಿ ಶೇಖರವಾಗಿರುವ ಅಲ್ಪ, ಸ್ವಲ್ಪ ನೀರನ್ನು ಜೆಸಿಬಿ ಮೂಲಕ ಹಳ್ಳ ತೋಡಿ ನೀರನ್ನು ಸೆಳೆಯಲಾಗುತ್ತಿದೆ. ಇದು ಇನ್ನೆರಡು ದಿನ ನೀರು ಸರಬರಾಜಿಗೆ ಸಹಾಯಕವಾಗಬಹುದು’ ಎಂದು ಜಲಸಿರಿ ಯೋಜನೆ ಎಇಇ ನವೀನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT