ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಹೆಲ್ತ್ ಕಪ್‌: ಬಿಬಿಎಂಪಿ ತಂಡ ಪ್ರಥಮ

Published 19 ಫೆಬ್ರುವರಿ 2024, 5:49 IST
Last Updated 19 ಫೆಬ್ರುವರಿ 2024, 5:49 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹೆಲ್ತ್ 11 ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರಿನ ಬಿಬಿಎಂಪಿ ತಂಡ ಪ್ರಥಮ ಬಹುಮಾನ ಪಡೆಯಿತು.

ಮೈಸೂರಿನ ಎನ್‌ಟಿಇಪಿ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ ಹಾಸನ ಹೋಯ್ಸಳ ಹಾಗೂ ಹೆಲ್ತ್ ಇಲವೆನ್ ದಾವಣಗೆರೆ ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದವು.

‘ಹೆಲ್ತ್ ಕಪ್–2024’ರಲ್ಲಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ಬಿಬಿಎಂಪಿ ತಂಡಕ್ಕೆ ₹30,000 ಹಾಗೂ ರನ್ನರ್ ಅಪ್ ಸ್ಥಾನ ಪಡೆದ ಮೈಸೂರಿನ ಇನ್‌ಟಿಇಪಿ ತಂಡಕ್ಕೆ ₹15,000 ನಗದು ಬಹುಮಾನ ವಿತರಿಸಲಾಯಿತು.

ಎರಡು ದಿನಗಳ ಕಾಲ ನಡೆದ ಲೀಗ್ ಕಂ ನಾಟೌಟ್ ಪಂದ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 19 ತಂಡಗಳು ಪಾಲ್ಗೊಂಡಿದ್ದವು. 43 ಪಂದ್ಯಗಳು ನಡೆದವು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಬಹುಮಾನ ವಿತರಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಎನ್‌ವಿಬಿಡಿಸಿಪಿ ಅಧಿಕಾರಿ ಡಾ.ಗಂಗಾಧರ್, ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ. ಮಂಜುನಾಥ್ ಎಸ್.ಪಾಟೀಲ್, ಆರ್‌ಸಿಎಚ್ ಅಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರುದ್ರಸ್ವಾಮಿ, ಜಿಲ್ಲಾ ಐಇಸಿ ಅಧಿಕಾರಿ ಡಾ.ಸುರೇಶ್ ಬಾರ್ಕಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ ಪಿ.ಪಟಗೆ ಇದ್ದರು.

ನಾಲ್ಕನೇ ಬಹುಮಾನ ಪಡೆದ ಹೆಲ್ತ್ ಇಲೆವೆನ್ ದಾವಣಗೆರೆ ತಂಡ –ಪ್ರಜಾವಾಣಿ ಚಿತ್ರ
ನಾಲ್ಕನೇ ಬಹುಮಾನ ಪಡೆದ ಹೆಲ್ತ್ ಇಲೆವೆನ್ ದಾವಣಗೆರೆ ತಂಡ –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT