ಶುಕ್ರವಾರ, ಸೆಪ್ಟೆಂಬರ್ 24, 2021
21 °C

ದಾವಣಗೆರೆ: ಕೆ–ಸೆಟ್ ಪರೀಕ್ಷೆ; 809 ಮಂದಿ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ 9 ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ (ಕೆ-ಸೆಟ್) ಪರೀಕ್ಷೆ ನಡೆಯಿತು. ಕೆಲವರು ಕಳೆದ ವರ್ಷದ ಪ್ರವೇಶ ಪತ್ರ ತಂದಿದ್ದರಿಂದ ಗೊಂದಲ ಉಂಟಾಯಿತು. 

ಪರೀಕ್ಷೆಗೆ ನೋಂದಾಯಿಸಿದ್ದ 5,602 ಆಕಾಂಕ್ಷಿಗಳಲ್ಲಿ 4,793 ಮಂದಿ ಪರೀಕ್ಷೆ ಬರೆದಿದ್ದು, 809 ಮಂದಿ ಗೈರು ಹಾಜರಾಗಿದ್ದರು. ಶೇ 85.55ರಷ್ಟು ಆಕಾಂಕ್ಷಿಗಳು ಪರೀಕ್ಷೆ ಬರೆದರು.

‘ಕೆಲವರು ಕಳೆದ ವರ್ಷದ ಪ್ರವೇಶ ಪತ್ರವನ್ನೇ ತಂದಿದ್ದರು. ಪರೀಕ್ಷಾ ಕೇಂದ್ರಗಳ ಗೊಂದಲ ಉಂಟಾಯಿತು. ಕೆಲವರಿಗೆ ಭಾನುವಾರ ಬೆಳಿಗ್ಗೆ ಪ್ರವೇಶ ಪತ್ರ ನೀಡಲಾಯಿತು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕೆ–ಸೆಟ್ ನೋಡಲ್ ಅಧಿಕಾರಿ ಪ್ರೊ.ಜೆ.ಕೆ. ರಾಜು ತಿಳಿಸಿದರು.

ಕೊರೊನಾ ಕಾರಣದಿಂದಾಗಿ ಎಲ್ಲರಿಗೂ ಮಾಸ್ಕ್ ಅನ್ನು ಕಡ್ಡಾಯ ಮಾಡಲಾಗಿತ್ತು. ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್‌ ಮಾಡಲಾಯಿತು. ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಕೇಂದ್ರಕ್ಕೆ ಬಂದಿದ್ದರು. ಸಾಮಾನ್ಯ ಜ್ಞಾನ ಹಾಗೂ ಆದ್ಯತಾ ವಿಷಯ ಸೇರಿ ಎರಡು ಪರೀಕ್ಷೆಗಳು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದವು.

ಅಥಣಿ ಕಾಲೇಜು, ಬಿ.ಎಸ್. ಚನ್ನಬಸಪ್ಪ ಫಸ್ಟ್ ಗ್ರೇಡ್ ಕಾಲೇಜ್, ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು, ಎ.ವಿ.ಕಮಲಮ್ಮ ಮಹಿಳಾ ಕಾಲೇಜು, ಜಿಎಂಐಟಿ, ಜಿ.ಎಂ.ಎಸ್. ಅಕಾಡೆಮಿ ಪ್ರಥಮ ದರ್ಜೆ ಕಾಲೇಜು, ದವನ್-ನೂತನ್ ಅಲೆಯನ್ಸ್ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.