ಮಂಗಳವಾರ, ಸೆಪ್ಟೆಂಬರ್ 21, 2021
22 °C
ಮಾಜಿ ಸೈನಿಕರ ಸಂಘದ ರಾಜ್ಯ ಸಂಚಾಲಕ ಎಂ. ವಾಸಪ್ಪ ಬೇಸರ

ಹುತಾತ್ಮ ಸೈನಿಕರ ಕುಟುಂಬಗಳ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ‘ದೇಶದ ಸೈನಿಕ ಯುದ್ಧದ ಸಂದರ್ಭದಲ್ಲಿ ಮಡಿದಾಗ ಹುಟ್ಟುವ ಪ್ರೀತಿ, ಅಭಿಮಾನ ನಂತರ ಕಾಣಿಸುವುದಿಲ್ಲ. ಆತನ ಕುಟುಂಬಗಳನ್ನು ಮರೆಯಲಾಗುತ್ತಿದೆ. ಇಂತಹ ದೇಶಪ್ರೇಮ ನಮಗೆ ಬೇಕಿಲ್ಲ’ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಸಂಚಾಲಕ, ನಿವೃತ್ತ ಸೇನಾಧಿಕಾರಿ ಎಂ. ವಾಸಪ್ಪ ಹೇಳಿದರು.

ಕಾರ್ಗಿಲ್ ವಿಜಯ್ ದಿವಸದ 22ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್‌ ರ‍್ಯಾಲಿ ಹಾಗೂ ಸೈನಿಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಹುಟ್ಟಿನಿಂದ ಸಾಯುವತನಕ ಪ್ರತಿಯೊಬ್ಬರಲ್ಲೂ ದೇಶಾಭಿಮಾನ, ದೇಶಕ್ಕಾಗಿ ಮಡಿದ ಸೈನಿಕರ ಬಗ್ಗೆ ಅಭಿಮಾನ ಬೆಳೆಯಬೇಕು. ಅಂತಹ ವಾತಾವರಣ ನಿರ್ಮಾಣವಾಗಬೇಕು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಜಿ ಸೈನಿಕರ ಕುಟುಂಬಕ್ಕೆ ನಿವೇಶನ, ಉಳಲು ಒಂದಿಷ್ಟು ಭೂಮಿ ನೀಡುತ್ತಿಲ್ಲ. ಕೆಲವು ಕಡೆಗಳಲ್ಲಿ ಕನಿಷ್ಠ ಸೌಲಭ್ಯಗಳು ಸಿಗುತ್ತಿಲ್ಲ ಎಂದು ನೋಂದು ನುಡಿದರು.

ಬೈಕ್‌ ರ‍್ಯಾಲಿಗೆ ಚಾಲನೆ ನೀಡಿದ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮಾಜಿ ಸೈನಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಸರ್ಕಾರಗಳು ಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಿಎಸ್‍ಐ ಬಸವನಗೌಡ ಬಿರಾದರ್, ಮಾಜಿ ಸೈನಿಕರಾದ ಎಂ. ಮಂಜಪ್ಪ, ಕೇಶವಮೂರ್ತಿ, ಅರಕೆರೆ ಪರಮೇಶ್ವರಪ್ಪ, ಚಂದ್ರಪ್ಪ ನರಸನಹಳ್ಳಿ, ಬಸವರಾಜಪ್ಪ ತಕ್ಕನಹಳ್ಳಿ, ಸಿದ್ದೇಶಪ್ಪ ಬೆನಕನಹಳ್ಳಿ, ಹನುಮಂತಪ್ಪ ದಿಡಗೂರು, ಹನುಮಂತಪ್ಪ ಸೊರಟೂರು, ಹಿರೇಕಲ್ಮಠದ ರಮೇಶಪ್ಪ, ಮಂಜುನಾಥ್, ಆರುಂಡಿ ಪೊಲೀಸ್ ರಾಮಪ್ಪ, ಜನಪ್ರತಿನಿಧಿ ಹೊಸಕೇರಿ ಸುರೇಶ್ ಭಾಗಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.