ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಡಿಕಲ್‍ ಕಾಲೇಜಿಗಾಗಿ ಸಹಿ ಸಂಗ್ರಹ

Last Updated 7 ಜುಲೈ 2021, 10:04 IST
ಅಕ್ಷರ ಗಾತ್ರ

ಹರಿಹರ: ನಗರದಲ್ಲಿ ಸರ್ಕಾರಿ ಮೆಡಿಕಲ್‍ ಕಾಲೇಜು ಸ್ಥಾಪನೆಗಾಗಿ ಹೋರಾಟದ ಮೊದಲ ಹಂತವಾಗಿ ಸಾರ್ವಜನಿಕರಿಂದ ಸಹಿ ಅಭಿಯಾನ ಆರಂಭಿಸಲಾಗಿದೆ ಎಂದು ಮುಖಂಡ ನಂದಿಗಾವಿ ಎನ್‍.ಎಚ್‍. ಶ್ರೀನಿವಾಸ ತಿಳಿಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮಂಗಳವಾರ ಸಂಜೆ ‘ನಮ್ಮ ನಗರ, ನಮ್ಮ ಧ್ವನಿ’ ಎಂಬ ಘೋಷವಾಕ್ಯದಡಿಯಲ್ಲಿ ಸಾರ್ವಜನಿಕ ಸಹಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ಈಗಾಗಲೇ ಅನೇಕ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಆದಕಾರಣ ಸರ್ಕಾರ ದಾವಣಗೆರೆಗೆ ಸ್ಥಾಪಿಸಲು ಯೋಜಿಸಿರುವ ಮೆಡಿಕಲ್‍ ಕಾಲೇಜು ಯೋಜನೆಯನ್ನು ಹರಿಹರಕ್ಕೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಎಸ್‍. ರಾಮಪ್ಪ ಮಾತನಾಡಿ, ‘ನಗರದಲ್ಲಿ ಕಾಲೇಜು ಸ್ಥಾಪನೆಗೆ ಅಗತ್ಯವಾದ ಮೂಲ ಸೌಲಭ್ಯಗಳಿವೆ. ಹೆಚ್ಚುವರಿ ಸೌಲಭ್ಯಗಳ ಅಗತ್ಯವಿದ್ದಲ್ಲಿ ಬೇಡಿಕೆಗಳನ್ನು ಪೂರೈಸಲಾಗುವುದು. ಮೆಡಿಕಲ್‍ ಕಾಲೇಜು ಹೋರಾಟಕ್ಕೆ ನಮ್ಮ ಹಾಗೂ ಪಕ್ಷದ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತೇವೆ’ ಎಂದರು.

ಸಂಚಾಲಕ ಎಚ್‍. ನಿಜಗುಣ ಮಾತನಾಡಿ, ‘ಹೋರಾಟ ಮೊದಲ ಹಂತವಾಗಿ ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಅಭಿಯಾನದ ಮೂಲಕ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀಕ್ಷ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ಹೋರಾಟದ ಸಂಚಾಲಕರಾದ ಎಚ್‍.ಕೆ. ಕೊಟ್ರಪ್ಪ, ಜೆ. ಕಲೀಂಬಾಷಾ, ಜಿ.ಎಚ್‍. ಮರಿಯೋಜಿರಾವ್‍, ಸಿ.ಎಚ್‍. ಹುಲಿಗೇಶ್‍, ಹಂಚಿನ ನಾಗಪ್ಪ, ಎಚ್‍.ಬಿ. ರುದ್ರೇಗೌಡ, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT