ನ್ಯಾಮತಿ: ತಹಶೀಲ್ದಾರ್  ರವಿರಾಜ್ ದೀಕ್ಷಿತ್ ಅಧಿಕಾರ ಸ್ವೀಕಾರ

7

ನ್ಯಾಮತಿ: ತಹಶೀಲ್ದಾರ್  ರವಿರಾಜ್ ದೀಕ್ಷಿತ್ ಅಧಿಕಾರ ಸ್ವೀಕಾರ

Published:
Updated:

ನ್ಯಾಮತಿ: ನ್ಯಾಮತಿ ನೂತನ ತಾಲ್ಲೂಕಿಗೆ ತಹಶೀಲ್ದಾರ್ ರವಿರಾಜ್ ದೀಕ್ಷಿತ್ ಗುರುವಾರ ಅಧಿಕಾರ ಸ್ವೀಕರಿಸಿದರು.

ಶೃಂಗೇರಿ ತಾಲ್ಲೂಕಿನಿಂದ ನ್ಯಾಮತಿಗೆ ವರ್ಗಾವಣೆಗೊಂಡಿರುವ ರವಿರಾಜ್‌, ಈ ಹಿಂದೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

‘ನೂತನ ತಾಲ್ಲೂಕಿನ ಅಧಿಕಾರ ವಹಿಸಿಕೊಂಡಿದ್ದು, ತಾಲ್ಲೂಕು ವ್ಯಾಪ್ತಿಯಲ್ಲಿ 75 ಗ್ರಾಮಗಳು ಹಾಗೂ 20 ಗ್ರಾಮ ಪಂಚಾಯಿತಿಗಳು ಇವೆ. ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರದೊಂದಿಗೆ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಗಮನಹರಿಸುತ್ತೇನೆ’ ಎಂದು ರವಿರಾಜ್‌ ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದಿನ ಪ್ರಭಾರ ತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಕಂದಾಯ ಇಲಾಖೆಯ ಜಿ. ನಟರಾಜ ಮತ್ತು ಸಿಬ್ಬಂದಿ ಇದ್ದರು.

ನೂತನ ತಾಲ್ಲೂಕು ಘೋಷಣೆಯಾಗಿ ಐದು ತಿಂಗಳ ನಂತರ ಕಾಯಂ ತಹಶೀಲ್ದಾರ್ ನೇಮಕಗೊಂಡಿರುವುದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !