ಸೋಮವಾರ, ಡಿಸೆಂಬರ್ 9, 2019
24 °C

ಅಪಘಾತ: ಪ್ರಜಾವಾಣಿ ಹಾವೇರಿ ವರದಿಗಾರ ಮಂಜುನಾಥ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಾಲ್ಲೂಕಿನ ಕೊಡಗನೂರು ಕೆರೆಯ ಬಳಿ ಬುಧವಾರ ರಾತ್ರಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ‘ಪ್ರಜಾವಾಣಿ’ಯ ಹಾವೇರಿ ಜಿಲ್ಲಾ ಹಿರಿಯ ವರದಿಗಾರ ಎಂ.ಸಿ. ಮಂಜುನಾಥ್‌ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೊಳಲ್ಕೆರೆಯಲ್ಲಿರುವ ಅಕ್ಕನ ಮನೆಗೆ ಹಾವೇರಿಯಿಂದ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹುಲ್ಲಿನ ಹೊರೆ ಹೇರಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್‌ ಸಮೇತ ಚಾಲಕ ಪರಾರಿಯಾಗಿದ್ದಾನೆ.

ಶವವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಮಂಜುನಾಥ್‌ ಅವರಿಗೆ ತಂದೆ, ತಾಯಿ ಹಾಗೂ ಅಣ್ಣ, ಅಕ್ಕ ಇದ್ದಾರೆ. ಅಂತ್ಯ ಸಂಸ್ಕಾರ ಗುರುವಾರ ಶಿವಮೊಗ್ಗದಲ್ಲಿ ನಡೆಯಲಿದೆ.

–––

ಕನಕದಾಸರ ಜಯಂತಿ ಪ್ರಯುಕ್ತ ಮಂಜುನಾಥ್‌ ಬರೆದಿದ್ದ ವಿಶೇಷ ಲೇಖನಗಳು 

ದಾಸಶ್ರೇಷ್ಠನ ಚರಿತ್ರೆ ಸಾರುವ ಬಾಡ: ಕಾಗಿನೆಲೆ 

ಜಗತ್ತಿಗೆ ಕನಕದಾಸರ ತತ್ವ ಸಂದೇಶ

 

ಇತರ ಸ್ಟೋರಿಗಳು 

ಪಕ್ಷಿಗಳ ದಾಹ ನೀಗಿಸುತ್ತಲೇ ಬೇಸಿಗೆ ಕಳೆದ! 

ಆಳ ಅಗಲ | ಮಾದಕ ಜಾಲದ ಮಾಯಾಲೋಕ

ಪ್ರತಿಕ್ರಿಯಿಸಿ (+)