ಶುಕ್ರವಾರ, ನವೆಂಬರ್ 15, 2019
27 °C

ಹೊನ್ನಾಳಿ: ದೇವರ ಕೋಣದ ಮೆರವಣಿಗೆ

Published:
Updated:
Prajavani

ಹೊನ್ನಾಳಿ: ಒಂದು ವಾರದಿಂದ ಎರಡು ಗ್ರಾಮಗಳ ಮಧ್ಯ ವಿವಾದ ಹುಟ್ಟಿಸಿದ್ದ ದೇವರ ಕೋಣವನ್ನು ಶನಿವಾರ ಬೇಲಿಮಲ್ಲೂರು ಗ್ರಾಮಸ್ಥರು ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಕೊಂಡೊಯ್ದರು.

ಪ್ರಕರಣ ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ಸುಖಾಂತ್ಯಗೊಂಡಿತ್ತು.
ಶಿವಮೊಗ್ಗದ ಗೋಶಾಲೆಯಲ್ಲಿದ್ದ ಕೋಣವನ್ನು ಹೊನ್ನಾಳಿಯ ಹಿರೇಕಲ್ಮಠಕ್ಕೆ ತಂದ ಗ್ರಾಮಸ್ಥರು ಕೋಣಕ್ಕೆ ಪೂಜೆ ನೆರವೇರಿಸಿ ಹಿರೇಕಲ್ಮಠದಿಂದ ಬೇಲಿಮಲ್ಲೂರು ಗ್ರಾಮದವರೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋದರು. ಗ್ರಾಮಸ್ಥರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಕೋಣ ಹೊತ್ತ ವಾಹನವನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಚಾಲನೆ ಮಾಡಿದರು.

ಪ್ರತಿಕ್ರಿಯಿಸಿ (+)