ಸೋಮವಾರ, ಜನವರಿ 17, 2022
21 °C

ಹರಿಹರ: ಇಂದಿನಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಕನಕದಾಸರ 534ನೇ ಜಯಂತಿ ಅಂಗವಾಗಿ ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿ ಮತ್ತು ಕರ್ನಾಟಕ ರಾಜ್ಯ ಕುಸ್ತಿ ಸಂಘದಿಂದ ಜ.10ರಿಂದ 12ರ ವರೆಗೆ ನಗರದ ತಾಲ್ಲೂಕು ಕ್ರೀಡಾಂಗಣ (ಗಾಂಧಿ ಮೈದಾನ)ದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ಬಾಲಕ, ಬಾಲಕಿಯರು, ಮಹಿಳೆ ಮತ್ತು ಪುರುಷ ವಿಭಾಗದಲ್ಲಿ ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ. ರಾಜ್ಯದ ಪ್ರತಿಷ್ಠಿತ ಪೈಲ್ವಾನರು ಸೇರಿ 150 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ರಾಷ್ಟ್ರ ಮಟ್ಟದ ಪಂದ್ಯಾವಳಿ ನಿಯಮಾವಳಿಯಂತೆ ಕುಸ್ತಿ ಅಖಾಡವನ್ನು 4 ಅಡಿ ಎತ್ತರದವರೆಗೆ ಆಕರ್ಷಕವಾಗಿ ನಿರ್ಮಿಸಲಾಗಿದೆ. ಪ್ರೇಕ್ಷಕರು ಅಖಾಡಕ್ಕೆ ನುಗ್ಗದಂತೆ ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿದೆ.

ಮುಂದಿನ ಐದು ವರ್ಷಗಳ ಕಾಲ ಸತತವಾಗಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸುವ, ಸೂಕ್ತ ಜಾಗದಲ್ಲಿ ಆಧುನಿಕ ಕುಸ್ತಿ ತರಬೇತಿ ಸಂಸ್ಥೆ ನಿರ್ಮಿಸುವ ಯೋಚನೆ ಇದೆ. ಪಂದ್ಯಾವಳಿಯನ್ನು ಕೋವಿಡ್ ನಿಯಮಾನುಸಾರ ನಡೆಸಲಾಗುವುದು ಎಂದು ಕುಸ್ತಿ ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.