ಮಂಗಳವಾರ, ಮಾರ್ಚ್ 28, 2023
23 °C
ಆರ್ಯವೈಶ್ಯ ಸಮಾಜದ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

ದೇವಾಲಯ ನಿರ್ಮಾಣ ಧರ್ಮಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ಪಟ್ಟಣದ ಹೊರವಲಯದ ವೀರಭದ್ರೇಶ್ವರ ದೇವಾಲಯ ಶಿಲ್ಪಶಾಸ್ತ್ರ ವಿಜಯನಗರ ಸಾಮ್ರಾಜ್ಯ, ಹೊಯ್ಸಳ, ಚಾಲುಕ್ಯರ ಕಾಲದ ಶಿಲಾ ಸಂಸ್ಕೃತಿ ನೆನಪಿಸುತ್ತಿದೆ ಎಂದು ಬೆಂಗಳೂರಿನ ಆರ್ಯವೈಶ್ಯ ಸಮಾಜದ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದ ವೀರಭದ್ರೇಶ್ವರ, ಭದ್ರಕಾಳಿ, ಮಹಾಗಣಪತಿ, ನಾಗಪರಿವಾರ, ಕಾಲಭೈರವ ದೇಗುಲ ವೀಕ್ಷಿಸಿದ ಬಳಿಕ ಮಾತನಾಡಿದರು.

ದೊಡ್ಡ ದೊಡ್ಡ ಮಾಲ್‌ಗಳು, ಬೃಹತ್ ಕಟ್ಟಡಗಳಿಗೆ ಭವಿಷ್ಯವಿಲ್ಲ. ಆದರೆ, ಸನಾತನ ಪರಂಪರೆ ಸಾರುವ ಕಲ್ಲಿನ ದೇವಾಲಯ ಶಾಶ್ವತ. ದೇವಾಲಯ ಸಂಕೀರ್ಣದಲ್ಲಿನ ಸಭಾಂಗಣವು ಉತ್ಸವ, ಸಾಹಿತ್ಯ ಗೋಷ್ಠಿ, ಸಂಗೀತ, ಭರತನಾಟ್ಯ ಆಯೋಜಿಸಲು ಸೂಕ್ತ ಸ್ಥಳವಾಗಿದೆ ಎಂದು ಹೇಳಿದರು.

ಆರ್ಯವೈಶ್ಯ ಸಮಾಜದ ನೂತನ ಸ್ವಾಮೀಜಿ ರಾಜ್ಯದ 21 ಜಿಲ್ಲೆಗಳಲ್ಲಿ ಸಮಾಜದ ಸಂಘಟನೆಗೆ ಪ್ರವಾಸ ಕೈಗೊಂಡಿದ್ದಾರೆ. ಪೀಠಕ್ಕೆ ಭಕ್ತರು ಶಕ್ತಿ ತುಂಬಬೇಕು ಎಂದು ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಆರುಣ್ ಕೋರಿದರು.

ವೀರಭದ್ರೇಶ್ವರ ದೇವಾಲಯ ಟ್ರಸ್ಟ್‌ನ ಬಿ. ಚಿದಾನಂದಪ್ಪ, ಆರ್ಯವೈಶ್ಯ ಸಮಾಜದ ಮುಖಂಡರಾದ ಭೂಪಾಳಂ ಶಶಿಧರ್, ಮುರುಳಿ, ಅಮರ್, ಜಿಗಳಿ, ಆರ್ಯವೈಶ್ಯ ಸಮಾಜದ ಮುಖಂಡರಾದ ಹನುಮಂತಶ್ರೇಷ್ಠಿ, ಶ್ರೀಪಾದ ಶ್ರೇಷ್ಠಿ, ಎಂ.ಕೆ. ರಾಮಶ್ರೇಷ್ಠಿ, ಮಹಾಬಲ ಶ್ರೇಷ್ಠಿ, ಟ್ರಸ್ಟ್‌ ಪದಾಧಿಕಾರಿಗಳಾದ ಬಿ. ನಾಗೇಶಣ್ಣ, ಉಮಾಶಂಕರ್, ಮಲ್ಲೇಶ್, ಹರ್ಷ, ಶಂಭು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.