ಮೃದು ಉಣ್ಣೆ ತಯಾರಿಕಾ ಘಟಕ ಸ್ಥಾಪನೆಗೆ ಚಿಂತನೆ

7
ಸಹಕಾರ ಸಚಿವ ಕಾಂಶೆಂಪುರ ಭರವಸೆ

ಮೃದು ಉಣ್ಣೆ ತಯಾರಿಕಾ ಘಟಕ ಸ್ಥಾಪನೆಗೆ ಚಿಂತನೆ

Published:
Updated:

ದಾವಣಗೆರೆ: ಉಣ್ಣೆ ಉತ್ಪಾದಕ ಸಂಘಗಳಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಮೃದು ಉಣ್ಣೆ ತಯಾರಿಕಾ ಘಟಕವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಶ್ರೀಹಾಲುಮತ ಸೌಹಾರ್ದ ಪತ್ತಿನ ಸಹಕಾರ ನಿಯಮಿತದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಉಣ್ಣೆ ಉತ್ಪಾದಕ ಸಂಘಗಳ ಕಂಬಳಿಗೆ ಕೇವಲ ₹ 3000 ಬೆಲೆ ಸಿಗುತ್ತಿದೆ. ಅದೇ ಕುರಿಯ ಉಣ್ಣೆಯಿಂದ ರೇಮಂಡ್‌ನಂತಹ ಕಂಪನಿಯವರು ತಯಾರಿಸುವ ಉಣ್ಣೆಯ ಬಟ್ಟೆಗಳು ₹ 15,000ದಿಂದ ₹ 20,000ವರೆಗೆ ಬೆಲೆಗೆ ಮಾರಾಟವಾಗುತ್ತಿವೆ. ಹೀಗಾಗಿ ಮೆದು ಉಣ್ಣೆ ತಯಾರಿಸಿ ರೇಮಂಡ್‌ನಂತಹ ಕಂಪನಿಗಳಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಮೃದು ಉಣ್ಣೆ ತಯಾರಿಕಾ ಘಟಕ ತೆರೆಯುವ ಬಗ್ಗೆ 15 ದಿನಗಳ ಒಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕಾಗಿ ₹ 15 ಕೋಟಿವರೆಗೆ ಅನುದಾನ ನೀಡಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !