ಬುಧವಾರ, ಮಾರ್ಚ್ 29, 2023
32 °C

ಚಿಕ್ಕಬಿದಿರೆ: ಚಿರತೆ ಸೆರೆ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಿದಿರೆ (ಹರಿಹರ): ಹರಿಹರ  ತಾಲ್ಲೂಕಿನ ಚಿಕ್ಕಬಿದಿರೆ ಗ್ರಾಮದ ಅಡಿಕೆ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿಗಾಹಿಗಳ ಹಿಂಡಿನ ಮೇಲೆ ಸೋಮವಾರ ಚಿರತೆ ದಾಳಿ ನಡೆಸಿ ಕುರಿಯೊಂದನ್ನು ಕೊಂದುಹಾಕಿದೆ. ಚಿರತೆ ದಾಳಿಯಿಂದ ಗ್ರಾಮದಲ್ಲಿ ಭೀತಿ ವಾತಾವರಣ ಸೃಷ್ಟಿಯಾಗಿದ್ದು, ಚಿರತೆ ಸೆರೆಗೆ ಪೊಲೀಸ್‍ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ.

ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಬೋನು ಇಟ್ಟು ಕಾರ್ಯಾಚರಣೆ ನಡೆಸಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಚಂದ್ರಶೇಖರ್‌, ‘ಕುರಿಗಳ ಮೇಲೆ ದಾಳಿ ನಡೆಸಿರುವುದು ಚಿರತೆ ಎಂದು ಕಳೇಬರಹದ ಮೇಲಿನ ಹಲ್ಲಿನ ಗುರುತು ಹಾಗೂ ಪಾದಗಳ ಗುರುತಿನಿಂದ ಧೃಡಪಟ್ಟಿದೆ. ಸುರಕ್ಷತಾ ಕ್ರಮವಾಗಿ ಚಿರತೆ ಬಂಧನಕ್ಕೆ ಬೋನು ಇಡಲಾಗಿದೆ’ ಎಂದು ಮಾಹಿತಿ ನೀಡಿದರು.

ಗ್ರಾಮಾಂತರ ಠಾಣೆ ಪಿಎಸ್‍ಐ ಡಿ. ರವಿಕುಮಾರ್‌, ‘ಚಿಕ್ಕಬಿದರೆ ಗ್ರಾಮದಲ್ಲಿ ಸೋಮವಾರ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿರುವ ಕಾರಣ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮೂಡಿಸಲಾಗಿದೆ. ಸುರಕ್ಷತೆಗಾಗಿ ಹಗಲು ಮತ್ತು ರಾತ್ರಿ ಬಂದೋಬಸ್ತ್‌ಗಾಗಿ ಸಿಬ್ಬಂದಿ ನೇಮಿಸಲಾಗಿದೆ’ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಪೊಲೀಸ್‍ ಸಿಬ್ಬಂದಿ ಕರಿಯಪ್ಪ, ಕೃಷ್ಣ, ಅರಣ್ಯ ರಕ್ಷಕ ವೆಂಕಟೇಶ್‍, ಅರಣ್ಯ ವೀಕ್ಷಕರಾದ ಸುರೇಶ್‍, ಬಸವರಾಜ್‍ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.