ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ವಾಲ್ಮೀಕಿ ಜಯಂತಿ ಸರಳ ಆಚರಣೆ

Last Updated 31 ಅಕ್ಟೋಬರ್ 2020, 16:23 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪೂಜೆ ನೆರವೇರಿಸಿದರು.

‘ದೇಶದ ರಕ್ಷಣೆಗೆ ಅತ್ಯಂತ ಮಹತ್ವದ ಕೊಡುಗೆಯನ್ನು ಸಮಾಜ ನೀಡಿದೆ. ಪ್ರಸನ್ನಾನಂದಪುರಿ ಸ್ವಾಮೀಜಿಗೆ ಶುಭಾಶಯ ತಿಳಿಸಿದ್ದು, ಶೇ 7.5ರಷ್ಟು ಹೆಚ್ಚಳಕ್ಕೆ ನಿಮ್ಮ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ಮಾಡುತ್ತಿರುವ ಹೋರಾಟ ಅದಕ್ಕೆ ಜಯ ಸಿಗಲಿ ಎಂದು ಹಾರೈಸಿದ್ದೇನೆ. ನಿಮ್ಮ ಸಮಾಜಕ್ಕೆ ಸೂಕ್ತ ನ್ಯಾಯ ಸಿಗುತ್ತದೆ. ನಮಗೂ ನಿಮ್ಮ ಆಶೀರ್ವಾದ ಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಸಮಾಜದ ಮುಖಂಡ ಆಂಜನೇಯ ಗುರೂಜಿ ಮಾತನಾಡಿ, ಜಿಲ್ಲಾಡಳಿತಕ್ಕೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ.ವೀರಣ್ಣ, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲಪ್ಪ, ಮುಖಂಡರಾದ ಗುಮ್ಮನೂರು ಮಲ್ಲಿಕಾರ್ಜುನ, ಶ್ರೀನಿವಾಸ ದಾಸಕರಿಯಪ್ಪ ಇದ್ದರು.

ನಾಯಕ ವಿದ್ಯಾರ್ಥಿನಿಲಯ: ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಪ್ರತಿ ವರ್ಷ ಮೆರವಣಿಗೆ ನಡೆಯುತ್ತಿತ್ತು. ಕೊರೊನಾ ಕಾರಣದಿಂದ ಮೆರವಣಿಗೆ ರದ್ದುಪಡಿಸಲಾಗಿತ್ತು.

ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ‘ಜಗತ್ತಿಗೆ ರಾಮಾಯಣವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಮಕ್ಕಳಿಗೆ ಪರಿಚಯ ಮಾಡಿಕೊಡಬೇಕು. ಇಂತಹ ಮಹಾನ್ ವ್ಯಕ್ತಿ ಎಲ್ಲರಿಗೂ ಮಾದರಿಯಾಗಬೇಕು. ಶೇ.7.5ರಷ್ಟು ಮೀಸಲಾತಿ ಸಂಬಂಧ ನವೆಂಬರ್ 10ರ ನಂತರ ಪ್ರಸನ್ನಾನಂದಪುರಿ ಸ್ವಾಮೀಜಿಗಳು ನಿರ್ಧಾರ ಕೈಗೊಳ್ಳಲಿದ್ದು, ಈ ನಿರ್ಧಾರಕ್ಕೆ ಬದ್ಧ’ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ, ವಾಲ್ಮೀಕಿ ಯುವ ಘಟಕದ ಅಧ್ಯಕ್ಷ ವಿನಾಯಕ ಪೈಲ್ವಾನ್, ಹೂವಿನಮಡು ಚಂದ್ರಪ್ಪ, ವಕೀಲ ಮಂಜುನಾಥ, ಶ್ಯಾಗಲೆ ಮಂಜುನಾಥ, ಕೆಟಿಜೆ ನಗರ ಲಕ್ಷ್ಮಣ, ಶಾಮನೂರು ಪ್ರವೀಣ್, ಐಗೂರು ಹನುಮಂತಪ್ಪ, ಆಲೂರು ಹನುಮಂತಪ್ಪ, ಅಣಜಿ ಅಂಜಿನಪ್ಪ ಇದ್ದರು.

ಯುವ ಘಟಕದಿಂದ ಆಚರಣೆ

ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದಿಂದ ನಗರದ ಹೊಂಡದ ಸರ್ಕಲ್‌ನಲ್ಲಿರುವ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ ಮಾಡಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ‘ಸಮಾಜಕ್ಕೆ ದೊರಕಬೇಕಾಗಿರುವ 7.5ರಷ್ಟು ಮೀಸಲಾತಿ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಜೊತೆಗೆ ಮಹರ್ಷಿ ವಾಲ್ಮೀಕಿ ಮಂದಿರವನ್ನು ಆದಷ್ಟು ಬೇಗ ನಿರ್ಮಾಣವಾಗಲಿ’ ಎಂದು ಆಶಿಸಿದರು.

ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದ ಅಧ್ಯಕ್ಷ ವಿನಾಯಕ ಪೈಲ್ವಾನ್, ಶ್ರೀನಿವಾಸ ದಾಸಕರಿಯಪ್ಪ, ಮಂಜುನಾಥ್ ಡಿ.ಜೆ., ಎನ್.ಎಚ್. ಹಾಲೇಶ್, ಶ್ಯಾಮನೂರು ಪ್ರವೀಣ್, ಅಳಗೋಡಿ ನಾಗರಾಜ್, ವಿರುಪಾಕ್ಷಿ 6ನೇ ಕಲ್ಲು, ಟಿ.ಎಸ್. ಕರಿಯಪ್ಪ, ನಿಟುವಳ್ಳಿ ಹನುಮಂತಪ್ಪ, ಅಂಜುಕುಮಾರ್, ಗೋಶಾಲೆ ಸುರೇಶ್, ಸತೀಶ್, ಅನಿಲ್ ಕುಮಾರ್, ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ವಿಜಯಶ್ರೀ, ರತ್ನಮ್ಮ ಇದ್ದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜು:ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ತೂ.ಕ. ಶಂಕರಯ್ಯ ಮಾತನಾಡಿ,‘ರಾಮಾಯಣದಂತಹ ಮಹಾನ್ ಗ್ರಂಥವನ್ನು ರಚಿಸಿ ಜಗತ್ತಿಗೆ ಪರಿಯಿಸಿದ ಕೀರ್ತಿ ವಾಲ್ಮೀಕಿ ಮಹರ್ಷಿಗೆ ಸಲ್ಲುತ್ತದೆ’ ಎಂದರು.

ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಭೀಮಣ್ಣ ಸುಣಗಾರ್, ವೀರೇಶ್, ಗಿರಿಸ್ವಾಮಿ, ದಾದಾಪೀರ್, ದಿನೇಶ್, ತಿಪ್ಪಾರೆಡ್ಡಿ, ಮಂಜಣ್ಣ, ಪ್ರಕಾಶ್. ಕೊರಮರ, ಪ್ರಕಾಶ್. ಹಲಗೇರಿ, ರಾಜಮೋಹನ್, ಚನ್ನಬಸಪ್ಪ, ಜೆ.ಎಂ. ಮಂಜುನಾಥ್, ಮನೋಹರ್, ಜಯಣ್ಣ,ನಿಂಗಪ್ಪ, ಮರಳುಸಿದ್ದಪ್ಪ, ಧರ್ಮಾನಾಯ್ಕ್, ಹನುಮಂತಯ್ಯ, ಚಂದಮ್ಮ, ಗೀತಾದೇವಿ, ಮಂಜುಳಮ್ಮ, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT