ಮಂಗಳವಾರ, ಸೆಪ್ಟೆಂಬರ್ 28, 2021
21 °C
ಧೂಡಾದಿಂದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತ

ಸಕ್ರಮಕ್ಕೆ ವಾರದ ಕಾಲವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಧೂಡಾದಿಂದ ಇಲ್ಲಿನ ಬೂದಿಹಾಳು ರಸ್ತೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಕ್ರಮಗೊಳಿಸಿಕೊಳ್ಳಲು ಜಮೀನು ಮಾಲೀಕರಿಗೆ ಒಂದು ವಾರದವರೆಗೆ ಗಡುವು ನೀಡಲಾಯಿತು.

100 ಎಕರೆಗೂ ಹೆಚ್ಚು ಭೂಮಿ ಅನಧಿಕೃತವಾಗಿದ್ದು, ಸಕ್ರಮಗೊಳಿಸಿ
ಕೊಳ್ಳುವಂತೆ 6 ತಿಂಗಳಿನಿಂದ ನೋಟಿಸ್ ನೀಡಿದರೂ ತೆರವು ಮಾಡದ ಕಾರಣ ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಮಂಗಳವಾರ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಸ್ಥಳೀಯರು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರಿಂದ ಕಾರ್ಯಾಚರಣೆ
ಸ್ಥಗಿತಗೊಳಿಸಲಾಯಿತು.

ಬಳಿಕ ಮಾತನಾಡಿದ ಶಿವಕುಮಾರ್, ‘ಇಲ್ಲಿನ ಕೃಷಿ ಜಮೀನಿನಲ್ಲಿ ಯಾವುದೇ ರೀತಿಯ ಭೂ ಪರಿವರ್ತನೆ ನಡೆಸಿಲ್ಲ. ನಿಯಮಾನುಸಾರವಾಗಿ ಉದ್ಯಾನ, ರಸ್ತೆ, ಚರಂಡಿಗೆ ಜಾಗ ಬಿಡದೇ ಖಾಸಗಿ ಬಡಾವಣೆ ನಿರ್ಮಿಸಲಾಗಿದೆ. ಇಲ್ಲಿ ರಿಂಗ್ ರಸ್ತೆ ಬಂದರೆ ನಿವೇಶನಗಳ ಮಾಲೀಕರಿಗೆ ಪರಿಹಾರ ಸಿಗುವುದಿಲ್ಲ. ಬಡವರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ. ರಿಯಲ್ ಎಸ್ಟೇಟ್ ಮಾಲೀಕರು ಕಾನೂನು ಪ್ರಕಾರ ಮೂಲ ಸೌಲಭ್ಯ ಕಲ್ಪಿಸಿ ಅವುಗಳನ್ನು ಹಸ್ತಾಂತರಿಸಬೇಕು’ ಎಂದು ಹೇಳಿದರು. 

‘ಮಹಾನಗರ ಪಾಲಿಕೆಯಲ್ಲಿ ಜಮೀನು ನೋಂದಣಿ ಮಾಡಿಕೊಳ್ಳ
ದಂತೆ ಈಗಾಗಲೇ ಉಪ ನೋಂದಣಿ ಇಲಾಖೆ ಸೂಚಿಸಿದ್ದೇನೆ. ಇದೀಗ ಭೂ ಮಾಲೀಕರು ತಾವಾಗಿಯೇ ಎಲ್ಲವನ್ನು ತೆರವುಗೊಳಿಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.  ಈ ಬಗ್ಗೆ ಆಗಸ್ಟ್ 23 ರಂದು ಧೂಡಾ ಕಚೇರಿಯಲ್ಲಿ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಅಧಿಕಾರದಿಂದ ಕೆಳಗಿಳಿದರೂ ಆಸ್ತಿ ಉಳಿಸುತ್ತೇನೆ: ‘ನಾನು ಇನ್ನೂ ಕೆಲವೇ ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯುತ್ತೇನೆ. ನಂತರ ಅನಧಿಕೃತ ಬಡಾವಣೆ ಮಾಡಬಹುದು. ಅಕ್ರಮ ನಡೆಸಬಹುದು ಎಂದು ಕೆಲವರು ಕನಸು ಕಾಣುತ್ತಿರಬಹುದು. ನಾನು ಅಧಿಕಾರದಿಂದ ಕೆಳಗಿಳಿದರೂ ನ್ಯಾಯಾಲಯದ ಮೊರೆ ಹೋಗಿ
ಯಾದರೂ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುತ್ತೇನೆ’ ಎಂದು ರಾಜನಹಳ್ಳಿ ಶಿವಕುಮಾರ್ ಅಕ್ರಮ ದಂಧೆಕೋರರಿಗೆ ಎಚ್ಚರಿಸಿದರು. ಪಾಲಿಕೆ ಸದಸ್ಯರಾದ ಚಮನ್‌ಸಾಬ್, ಕಬೀರ್, ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು