ದಾವಣಗೆರೆ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಸ್ಪರ ಸಹಕಾರ ಮನೋಭಾವದಿಂದ ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ. ಜನ ಸ್ಪಂದನದಂತಹ ಕಾರ್ಯಕ್ರಮದಿಂದಾಗಿ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಬಂದಿರುತ್ತಾರೆ. ಅದರ ಸದುಪಯೋಗವನ್ನು ಎಲ್ಲಾ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಶಾಸಕ ಎಂ. ಬಸವರಾಜ ನಾಯ್ಕ ಹೇಳಿದರು.

ತ್ಲ್ಲಾಲೂಕಿನ ಆನಗೋಡು ಹೋಬಳಿಯ ಐಗೂರು ಗ್ರಾಮದಲ್ಲಿ ಸೋಮವಾರ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಯಕೊಂಡ ಕ್ಷೇತ್ರದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಯಶಸ್ವಿ ಅನುಷ್ಠಾನದಿಂದಾಗಿ ಸರ್ಕಾರೇತರ ಸಂಸ್ಥೆಯಿಂದ ಪ್ರಶಂಸೆ ಲಭಿಸಿದೆ. ಕ್ಷೇತ್ರವು ಶಿಕ್ಷಣ ಪ್ರಗತಿಯಲ್ಲಿಯೂ ಕೂಡ ಮುಂಚೂಣಿಯಲ್ಲಿದೆ. ಸುಮಾರು 3.50 ಕೋಟಿಯಷ್ಟು ಹಣವನ್ನು ತಮ್ಮ ಅವಧಿಯಲ್ಲಿ ಐಗೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಇಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು 6 ಲಕ್ಷದಷ್ಟು ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತದೆ. ಇಂಥ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನತೆಯ ಹಲವಾರು ಸಮಸ್ಯೆಗಳು ಬಗೆಹರಿದಿವೆ. ಆದರೆ, ಭೂ ಮಾಪನಾ ಇಲಾಖೆಗೆ ಸಂಬಂಧಿಸಿದ ಕೆಲಸಗಳಲ್ಲಿ ಅಲ್ಪ ಹಿನ್ನಡೆಯಾಗಿರುವುದು ನಿಜ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಮೆಳ್ಳೆಕಟ್ಟೆ ಚಿದಾನಂದಪ್ಪ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಒಟ್ಟು 28 ವಿವಿಧ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪಡೆಯಲಾಯಿತು. ಕಂದಾಯ ಇಲಾಖೆಯುಂದ 5, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 19 ಭಾಗ್ಯಲಕ್ಷ್ಮೀ ಬಾಂಡುಗಳು, ಆರೋಗ್ಯ ಇಲಾಖೆಯಿಂದ 6 ಮಡಿಲು ಕಿಟ್‌ಗಳು, ಪಶುವೈದ್ಯ ಇಲಾಖೆುಂದ 15 ಫಲಾನುಭವಿಗಳಿಗೆ ಮೇವಿನ ಬೀಜ ವಿತರಣೆ, ಕೃಷಿ ಇಲಾಖೆ ವತಿಯಿಂದ 6 ಸೌಲಭ್ಯಗಳಿಗೆ ಒಟ್ಟಾರೆ ಸುಮಾರು 6 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಪ್ರಭುದೇವ್ ಸ್ವಾಗತಿಸಿದರು. ತಾ.ಪಂ. ಉಪಾಧ್ಯಕ್ಷ ಶಿವರುದ್ರಪ್ಪ, ಗ್ರಾ.ಪಂ. ಅಧ್ಯಕ್ಷ ಗೋಪಾಲಪ್ಪ ಉಪಸ್ಥಿತರಿದ್ದರು.

ಇಂದು ಹಂದರ ಕಂಬದ ಪೂಜೆ
ನಗರದೇವತೆ ಶ್ರೀದುರ್ಗಾಂಬಿಕಾ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಜ. 24ರಂದು ಹಂದರ ಕಂಬದ ಪೂಜೆ ನಡೆಯಲಿದೆ.

ಬೆಳಿಗ್ಗೆ 9ರಿಂದ ದೇವಸ್ಥಾನದ ಮುಂಭಾಗದಲ್ಲಿ ಪೂಜೆ ಆರಂಭವಾಗಲಿದೆ ಸಮಸ್ತ ಭಕ್ತರು ಆಗಮಿಸಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.