ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ 2ರಂದು ನಡೆಯುವ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಗೆ 37 ಕೇಂದ್ರಗಳು

Last Updated 29 ಮೇ 2019, 13:08 IST
ಅಕ್ಷರ ಗಾತ್ರ

ಧಾರವಾಡ: ಇದೇ ಜೂನ್ 2ರಂದು ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ನಗರದ 37 ಕೇಂದ್ರಗಳಲ್ಲಿ ಸಿದ್ಧತೆ ಸರ್ಮಪಕವಾಗಿರುವಂತೆ ಜಿಲ್ಲಾಧಿಕಾರಿ ದೀಪಾ ಚೊಳನ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೋಳನ್, ‘ಈ ಬಾರಿ ಒಟ್ಟು 13,384 ವಿದ್ಯಾರ್ಥಿಗಳು ಪರೀಕ್ಷೆಗೆ ಎದುರಿಸಲಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಹಾಜರಿರಬೇಕು. ಪರೀಕ್ಷಾ ಮೇಲ್ವಿಚಾರಕರು, ಸೂಪರಿಂಟೆಂಡೆಂಟ್ ಹಾಗೂ ಅಭ್ಯರ್ಥಿಗಳು ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ’ ಎಂದರು.

‘ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲ ಮಾರ್ಗ ಅಧಿಕಾರಿಗಳು, ಮುಖ್ಯ ಅಧೀಕ್ಷಕರು ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಲು ಯುಪಿಎಸ್‌ಸಿ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಶ್ನೆ ಪತ್ರಿಕೆಗಳ ಸಾಗಣೆ, ವಿತರಣೆ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಸೂಚಿಸಿದ ಸಮಯಕ್ಕೇ ತೆಗೆಯಬೇಕು. ಆಸನ ವ್ಯವಸ್ಥೆ ಹಾಗೂ ಕೊಠಡಿಗಳ ಮಾರ್ಗಗಳನ್ನು ಸೂಚಿಸುವ ಫಲಕಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲರಿಗೂ ಕಾಣುವಂತೆ ಅಳವಡಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್‌ಗಳನ್ನು ಹಾಕಲಾಗುವುದು. ಪರೀಕ್ಷೆಗೆ ಸಂಬಂಧಿಸಿದ ಯುಪಿಎಸ್‌ಸಿಯ ಎಲ್ಲಾ ಅನುಬಂಧಗಳನ್ನು ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ಭರ್ತಿ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮಾತನಾಡಿ, ‘ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಡೆಸ್ಕ್‌, ಗಾಳಿ, ಬೆಳಕು, ಕುಡಿಯುವ ನೀರು, ಶೌಚಾಲಯಗಳಂತಹ ಕನಿಷ್ಟ ಮೂಲಸೌಕರ್ಯಗಳ ಕಡೆಗೂ ಅಧಿಕಾರಿಗಳು ಗಮನ ಹರಿಸಬೇಕು’ ಎಂದರು.

ಪರೀಕ್ಷೆಯ ನೋಡಲ್ ಅಧಿಕಾರಿಯಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎಂ.ಎಲ್. ಹಂಚಾಟೆ ಅವರು ಪರೀಕ್ಷೆ ನಡೆಸುವ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು.

ಎಸಿಪಿ ಎಂ.ಎನ್.ರುದ್ರಪ್ಪ ಮತ್ತು 37 ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು ಸಭೆಯಲ್ಲಿದ್ದರು.

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷಾ ಕೇಂದ್ರಗಳ ವಿವರ

ನೋಂದಣಿ ಸಂಖ್ಯೆ; ಪರೀಕ್ಷಾ ಕೇಂದ್ರ

3900001ರಿಂದ 3900384; ಜೆಎಸ್ಎಸ್‌ ಕೆ.ಎಚ್‌.ಕಬ್ಬೂರ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌, ವಿದ್ಯಾಗಿರಿ

3900385ರಿಂದ 3900960; ಜೆಎಸ್‌ಎಸ್ ಶ್ರೀಮಂಜುನಾಥೇಶ್ವರ ಪಿ.ಯು.ವಿಜ್ಞಾನ ಕಾಲೇಜು, ವಿದ್ಯಾಗಿರಿ

3900961ರಿಂದ 3901536; ಜೆಎಸ್‌ಎಸ್ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ,ವಿದ್ಯಾಗಿರಿ

3901537ರಿಂದ 3901728; ಕೆಪಿಇಎಸ್ ಡಾ.ಜಿ.ಎಂ.ಪಾಟೀಲ ಕಾನೂನು ಕಾಲೇಜು, ಡಿ.ಸಿ.ಕಾಂಪೌಂಡ್

3901729ರಿಂದ 3901920; ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯ, ಜ್ಯುಬಿಲಿ ಸರ್ಕಲ್

3901921ರಿಂದ 3902496; ಪವನ್ ಆಂಗ್ಲ ಮಾಧ್ಯಮ ಶಾಲೆ, ಬಾರಾಕೋಟ್ರಿ

3902497ರಿಂದ 3902880; ಅಂಜುಮನ್ ಪದವಿ ಪೂರ್ವ ಕಾಲೇಜು

3902881ರಿಂದ 3903456; ಕರ್ನಾಟಕ ವಿಜ್ಞಾನ ಕಾಲೇಜು

3903457ರಿಂದ 3903744; ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಕಾಲೇಜು, ದುರ್ಗಾದೇವಿ ಗುಡಿ ಬಳಿ

3904745ರಿಂದ 3904128; ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು, ಹೆಬ್ಬಳ್ಳಿ ಅಗಸಿ

3904129ರಿಂದ 3904512; ಕೆ.ಇ.ಬೋರ್ಡ್‌ ಇಂಗ್ಲಿಷ್ ಮಾಧ್ಯಮ ಶಾಲೆ,ಮಾಳಮಡ್ಡಿ

3904513ರಿಂದ 3904896; ಬಾಸೆಲ್‌ಮಿಷನ್ ಸಂಯುಕ್ತ ಪದವಿಪೂರ್ವ ಕಾಲೇಜು, ಕಿಟೆಲ್ ಕಾಲೇಜು ಆವರಣ

3904897ರಿಂದ 3905280; ಯೂನಿರ್ವಸಿಟಿ ಪಬ್ಲಿಕ್ ಶಾಲೆ (ಯುಪಿಎಸ್‌), ಕಾಲೇಜು ರಸ್ತೆ

3905281ರಿಂದ 3905568; ಪ್ರೆಸೆಂಟೇಷನ್ ಬಾಲಕಿಯರ ಪ್ರೌಢಶಾಲೆ, ಕೆ.ಸಿ.ಪಾರ್ಕ ಎದುರು

3905569ರಿಂದ 3906144; ಕರ್ನಾಟಕ ಕಲಾ ಕಾಲೇಜು

3906145ರಿಂದ 3906720; ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು,ಕಲಘಟಗಿ ರಸ್ತೆ

3906721ರಿಂದ 3907296; ಕಿಟೆಲ್ ವಿಜ್ಞಾನ ಕಾಲೇಜು

3907297ರಿಂದ 3907776; ಅಂಜುಮನ್ ಪ್ರೌಢಶಾಲೆ, ಹಳೆ ಬಸ್‌ನಿಲ್ದಾಣ ಹತ್ತಿರ

3907777ರಿಂದ 3908064; ಬಸವರೆಡ್ಡಿ ಶಿಕ್ಷಣ ಸಂಸ್ಥೆ,ಕೆಲಗೇರಿ ರಸ್ತೆ,ಸಂಪಿಗೆ ನಗರ

3908065ರಿಂದ 3908352; ಕರ್ನಾಟಕ ಪ್ರೌಢಶಾಲೆ, ಕಿಲ್ಲಾ

3908353ರಿಂದ 3908736; ಬಾಸೆಲ್‌ಮಿಷನ್ ಬಾಲಕಿಯರ ಪ್ರೌಢಶಾಲೆ, ಮುಖ್ಯ ಅಂಚೆ ಕಚೇರಿ ಹತ್ತಿರ

3908737ರಿಂದ 3909216; ಕೃಷಿ ವಿಶ್ವವಿದ್ಯಾಲಯ ಎತ್ತಿನಗುಡ್ಡ

3909217ರಿಂದ 3909504; ಕೆ.ಇ.ಬೋರ್ಡ್‌ ಸಂಯುಕ್ತ ಪ.ಪೂ.ಕಾಲೇಜು, ಮಾಳಮಡ್ಡಿ

3909505ರಿಂದ 3909792; ಬಾಸೆಲ್‌ಮಿಷನ್ ಸಂಯುಕ್ತ ಪದವಿಪೂರ್ವ ಕಾಲೇಜು ಕಿಟೆಲ್ ಕಾಲೇಜು ಆವರಣ

3909793ರಿಂದ 3910080; ಕೇಂದ್ರೀಯ ವಿದ್ಯಾಲಯ, ಸೋಮೇಶ್ವರ ದೇವಸ್ಥಾನ ಬಳಿ

3910081ರಿಂದ 3910272; ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು, ಹೆಬ್ಬಳ್ಳಿ ಅಗಸಿ

3910273ರಿಂದ 3910656; ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆ, ಮುಖ್ಯ ಅಂಚೆ ಕಚೇರಿ ಬಳಿ

3910657ರಿಂದ 3911136; ವಿದ್ಯಾ ಹಂಚಿನಮನಿ ಪದವಿ ಪೂರ್ವ ಕಾಲೇಜು, ಕಲಘಟಗಿ ರಸ್ತೆ

3911137ರಿಂದ 3911520; ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸ ಬಸ್ ನಿಲ್ದಾಣ ಬಳಿ

3911521ರಿಂದ 3911904; ಜೆಎಸ್‌ಎಸ್ ಕನ್ನಡ ಮಾಧ್ಯಮ ಶಾಲೆ ,ವಿದ್ಯಾಗಿರಿ

3911905ರಿಂದ 3912096; ಹುರಕಡ್ಲಿ ಅಜ್ಜ ಕಾನೂನು ಕಾಲೇಜು

3912097ರಿಂದ 3912288; ಕೆ.ಇ.ಬೋರ್ಡ್‌ ಸಂಯುಕ್ತ ಪದವಿಪೂರ್ವ ಕಾಲೇಜು, ಮಾಳಮಡ್ಡಿ

3912289ರಿಂದ 3912576; ಹಿರೇಮಲ್ಲೂರು ಈಶ್ವರನ್‌ ಪದವಿಪೂರ್ವ ಕಾಲೇಜು, ಕಲ್ಯಾಣ ನಗರ

3912577ರಿಂದ 3912864; ಐಸಿಎಸ್ ಮಹೇಶ ಪಿ.ಯು.ಕಾಲೇಜು ಹಳಿಯಾಳ ರಸ್ತೆ

3912865ರಿಂದ 3913152; ಮದೀನಾ ಪಿ.ಯು.ಕಾಲೇಜು, ರಾಣಿ ಚನ್ನಮ್ಮ ನಗರ

3913153ರಿಂದ 3913323; ವಿಶ್ವವಿದ್ಯಾಲಯದ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು,ಕೆಸಿಡಿ ರಸ್ತೆ

3913324ರಿಂದ 3913384; ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ, ಕಲಾಭವನ ಎದುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT