ಡಾ. ಪಾಪುಗೆ ಅನಕೃ ಪ್ರಶಸ್ತಿ

7

ಡಾ. ಪಾಪುಗೆ ಅನಕೃ ಪ್ರಶಸ್ತಿ

Published:
Updated:

ಧಾರವಾಡ: ‘ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ಅವರು ಅ.ನ.ಕೃ. ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ’ ಎಂದು ಪ್ರತಿಷ್ಠಾನದ ಟ್ರಸ್ಟಿ ಶಾ.ಮಂ. ಕೃಷ್ಣರಾಯ ಹೇಳಿದರು.

‘ಅ.ನ.ಕೃ. ಅವರ 200 ಪುಸ್ತಕಗಳ ಮುದ್ರಣ, ವಿಚಾರಗೋಷ್ಠಿ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಜತೆಗೆ ಕನ್ನಡ ನಾಡು–ನುಡಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪುಸ್ತಕ ಪ್ರಶಸ್ತಿ ನೀಡಲಾಗುತ್ತಿತ್ತು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘1971 ರಲ್ಲಿ ಸಾಹಿತಿ, ವಾಗ್ಮಿ ಅ.ನ. ಕೃಷ್ಣರಾಯರು ಅಗಲಿದರು. 1993 ರಲ್ಲಿ ಅವರ ಪುತ್ರ ರವೀಂದ್ರನಾಥ ಮತ್ತಿತರರು ಸೇರಿ ಪ್ರತಿಷ್ಠಾನ ಆರಂಭಿಸಿದರು. ನಿರ್ಮಾಣ ಶೆಲ್ಟರ್ಸ್‌ನ ಸ್ಥಾಪಕ ವಿ.ಲಕ್ಷ್ಮೀನಾರಾಯಣ ಅವರು ಪ್ರತಿಷ್ಠಾನಕ್ಕೆ ಸೇರಿದ ಬಳಿಕ ಪ್ರಶಸ್ತಿ ನಗದು ಪುರಸ್ಕಾರ, ಫಲಕ ನೀಡಲಾಗುತ್ತ ಬರಲಾಯಿತು. ಅನಕೃ ನಿರ್ಮಾಣ ಪ್ರಶಸ್ತಿಯನ್ನು ಡಾ.ಎಂ.ಚಿದಾನಂದ ಮೂರ್ತಿ, ವ್ಯಾಸರಾಯ ಬಲ್ಲಾಳ ಮತ್ತಿತರರಿಗೆ ನೀಡಲಾಗಿದೆ’ ಎಂದರು.

‘ಈಗ ನಿರ್ಮಾಣ ಶೆಲ್ಟರ್ಸ್‌ನ ಹೊರತಪಡಿಸಿ ಪ್ರತಿಷ್ಠಾನ ಮಾತ್ರ ಅನಕೃ ಪ್ರಶಸ್ತಿ ನೀಡಲಾಗುತ್ತಿದ್ದು, ಇದು ಪ್ರತಿಷ್ಠಾನದ ಮೊದಲ ಪ್ರಶಸ್ತಿಯಾಗಿದೆ. ಪಾಟೀಲ ಪುಟ್ಟಪ್ಪ ಅವರು ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ₹50 ಸಾವಿರ ನಗದು, ಫಲಕ ಒಳಗೊಂಡಿದ್ದು, ಆ.12 ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಂಜೆ 4.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತಿ ಡಾ.ಗುರುಲಿಂಗ ಕಾಪಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪ್ರಮೋದ ಗಾಯಿ ಅತಿಥಿಯಾಗಿ ಆಗಮಿಸುವರು. ಡಾ.ಶಾಂತಿನಾಥ ದಿಬ್ಬದ ಅಭಿನಂದನಾ ಭಾಷಣ ಮತ್ತು ಪ್ರೊ. ಜಿ.ಅಶ್ವತ್ಥನಾರಾಯಣ ಅವರು ಅನಕೃ ಕುರಿತು ಮಾತನಡುವರು’ ಎಂದು ಕೃಷ್ಣರಾಯ ಹೇಳಿದರು.

ಬಸಲಿಂಗಯ್ಯ ಹಿರೇಮಠ, ವಿಶ್ವೇಶ್ವರಿ ಹಿರೇಮಠ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !