ಭಾರತ್ ಗೌರವ್: ಮುಜರಾಯಿ ಇಲಾಖೆಯಿಂದ ನೋಂದಣಿ
ಹುಬ್ಬಳ್ಳಿ: ರೈಲ್ವೆ ಇಲಾಖೆಯು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಪರಿಚಯಿಸಿರುವ ‘ಭಾರತ್ ಗೌರವ್’ ಯೋಜನೆಗೆ ಮುಜರಾಯಿ ಇಲಾಖೆಯು ₹1 ಲಕ್ಷ ನೀಡಿ ನೋಂದಣಿ ಮಾಡಿಕೊಂಡಿದೆ. ಮುಂದಿನ ಹಂತದ ಹಣಕಾಸು ವ್ಯವಹಾರಕ್ಕೆ ರಾಜ್ಯ ಸರ್ಕಾರವು ಅನುಮತಿ ನೀಡಿದೆ.
ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆಯು 2020ರಲ್ಲಿ ‘ಭಾರತ್ ಗೌರವ್’ ಯೋಜನೆಯನ್ನು ಪರಿಚಯಿಸಿ, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲರಿಗೂ ಈ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿತ್ತು. ಇದೀಗ ಮುಜರಾಯಿ ಇಲಾಖೆ ನೋಂದಣಿ ಮಾಡಿಕೊಂಡಿದೆ.
ಯೋಜನೆಯಡಿ ನೋಂದಣಿ ಮತ್ತು ನಿರ್ವಹಣೆಗೆ ನಿರ್ದಿಷ್ಟ ಮೊತ್ತವನ್ನು ಪಡೆದು ಎರಡು ವರ್ಷದವರೆಗೆ ರೈಲನ್ನು ನೀಡಲಾಗುತ್ತದೆ. ಖಾಸಗಿ ಬಸ್ಗಳು ಪ್ರವಾಸೋದ್ಯಮ ಪ್ಯಾಕೇಜ್ ನೀಡುವ ರೀತಿಯಲ್ಲೇ ರೈಲು ನೋಂದಣಿ ಮಾಡಿಕೊಳ್ಳುವವರು ಪ್ರವಾಸಿಗರಿಗೆ ಪ್ಯಾಕೇಜ್ ಮತ್ತು ಶುಲ್ಕ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ನಿರ್ವಹಣೆಯನ್ನು ಅವರೇ ಮಾಡಬೇಕಾಗುತ್ತದೆ. ಸದ್ಯ ಮುಜರಾಯಿ ಇಲಾಖೆ ನೋಂದಣಿ ಮಾಡಿಕೊಂಡಿದ್ದು, ಯಾವ ರೈಲು ಮತ್ತು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಲಿದೆ ಎನ್ನುವುದು ಸೇರಿದಂತೆ ವಿವಿಧ ಹಂತದ ಒಪ್ಪಂದಗಳು ಇನ್ನಷ್ಟೇ ಅಂತಿವಾಗಬೇಕಿದೆ ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.