ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿತೀಶ್‌ ಕುಮಾರ್‌ ವಿರುದ್ಧ ಬಿಜೆಪಿ ವೈಯಕ್ತಿಕ ಟೀಕೆ ಮಾಡಿಲ್ಲ: ಪ್ರಹ್ಲಾದ ಜೋಶಿ

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಹಾರದ ಮುಖ್ಯಮಂತ್ರಿಯಾಗಿದ್ದ ನಿತೀಶ್‌ ಕುಮಾರ್‌ ವಿರುದ್ಧ ಬಿಜೆಪಿ ನಾಯಕರು ಎಂದೂ ವೈಯಕ್ತಿಕ ಟೀಕೆ ಮಾಡಿಲ್ಲ. ಭ್ರಷ್ಟ ಪರಿವಾರದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದನ್ನು ಮಾತ್ರ ಟೀಕಿಸಿದ್ದೇವೆ’ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಲಾಲು‍ ಪ್ರಸಾದ್‌ ಹಾಗೂ ಪರಿವಾರದವರು ತೊಂದರೆ ಕೊಟ್ಟಿರುವುದು ನಿತೀಶ್‌ ಅವರು ರಾಜೀನಾಮೆ ನೀಡುವುದಕ್ಕೆ ಕಾರಣ ಇರಬಹುದು. ‘ಇಂಡಿಯಾ’ ಒಕ್ಕೂಟದ ನಾಯಕತ್ವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟಿರುವುದು ಇದಕ್ಕೆ ಕಾರಣ ಇರಲಿಕ್ಕಿಲ್ಲ’ ಎಂದು ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್‌ನಿಂದ ಅಹಿಂದ ಸಮಾವೇಶ ಆಯೋಜಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದ್ದು, ಮುಸಲ್ಮಾನರನ್ನು ತುಷ್ಟೀಕರಣ ಮಾಡುವ ವ್ಯಕ್ತಿಯಾಗಿದ್ದಾರೆ. ‘ಅಹಿಂದ’ ಸಮಾವೇಶದ ಬದಲು ‘ಅ’ಸಮಾವೇಶ (ಅಲ್ಪಸಂಖ್ಯಾತರ) ಮಾಡಿಕೊಳ್ಳಬೇಕಿತ್ತು. ‘ಹಿಂದ’ ಅವರಿಗೆ ಸಂಬಂಧವಿಲ್ಲ‘ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT