ಸೋಮವಾರ, ನವೆಂಬರ್ 18, 2019
24 °C

ಹುಬ್ಬಳ್ಳಿ: ಕೆಲ ರೈಲುಗಳ ಸಂಚಾರ ರದ್ದು

Published:
Updated:

ಹುಬ್ಬಳ್ಳಿ: ಸುಳೇಬಾವಿ–ಸುಲಧಾಳ್‌ ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾರ್ಯ ನಡೆಯಲಿರುವ ಕಾರಣ ಅ. 21ರಿಂದ ಡಿ. 31ರ ತನಕ ಮೀರಜ್‌–ಬೆಳಗಾವಿ ಪ್ಯಾಸೆಂಜರ್‌ ರೈಲಿನ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಇದೇ ಅವಧಿಯಲ್ಲಿ ಬೆಳಗಾವಿ–ಮೀರಜ್‌ ನಡುವಿನ ಸಂಚಾರ ಕೂಡ ಇರುವುದಿಲ್ಲ.

ತಾತ್ಕಾಲಿಕ ನಿಲುಗಡೆ: ಹಬ್ಬದ ರಜೆಗಳ ವೇಳೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಅ. 19ರಿಂದ 25ರ ತನಕ ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌ ಟರ್ಮಿನಸ್‌ ಎಕ್ಸ್‌ಪ್ರೆಸ್‌ ರೈಲು ರಾಯಬಾಗ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆಯಾಗಲಿದೆ. ಈ ರೈಲು ಸಂಜೆ 7.53ಕ್ಕೆ ರಾಯಬಾಗಕ್ಕೆ ಬರಲಿದೆ.

ಲೋಕಮಾನ್ಯ ತಿಲಕ್‌ ಟರ್ಮಿನಸ್‌–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲು ಅ. 24ರ ತನಕ ರಾಯಬಾಗದಲ್ಲಿ ಒಂದು ನಿಮಿಷ ನಿಲ್ಲಲಿದೆ. ಈ ನಿಲ್ದಾಣಕ್ಕೆ ಸಂಜೆ 6.15ಕ್ಕೆ ಬರುತ್ತದೆ.

ಪ್ರತಿಕ್ರಿಯಿಸಿ (+)