ಶುಕ್ರವಾರ, ಅಕ್ಟೋಬರ್ 7, 2022
23 °C

ರಾಷ್ಟ್ರ ಜಾಗೃತಿ ಅಭಿಯಾನ: ಸಂತೋಷ ಲಾಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಗತಿಸಿದ ಪ್ರಯುಕ್ತ ಎಸ್. ಲಾಡ್ ಫೌಂಡೇಷನ್ ವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಹೇಳಿದರು.

ಪಟ್ಟಣದಲ್ಲಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸಣ್ಣ ರೈತರಿಗೆ ಹೆಲ್ತ್‌ ಕಾರ್ಡ್‌, ಆನ್‌ಲೈನ್ ಬೆಟ್ಟಿಂಗ್ ಸ್ಥಗಿತ ಹಾಗೂ ದೇಶದಲ್ಲಿ ಮಾದಕ ವಸ್ತು ಮಾಫಿಯಾ ಸಂಪೂರ್ಣ ನಿಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ಕಾಂಗ್ರೆಸ್ ಸೇರ್ಪಡೆ: ದೇವರ ಹುಬ್ಬಳ್ಳಿ ಗ್ರಾಮದ ಬಿಜೆಪಿ ಮುಖಂಡರಾದ ಅರ್ಜುನ್‌ ಪಾಟೀಲ, ಮಂಜುನಾಥ ಮುದಕವಿ ಅವರು ಕಾಂಗ್ರೆಸ್‌ ಸೇರ್ಪಡೆಯಾದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಕರಿಗೌಡರ, ಮಲ್ಲನಗೌಡ ಪಾಟೀಲ, ಹಸನಲಿ ಶೇಖ, ಸುವರ್ಣ ಕಡಕೋಳ, ರಮೇಶ ಕುನ್ನೂರಕರ, ನಿಂಗಪ್ಪ ಬೇಕ್ವಾಡಕರ, ಮಧು ಬಡಸ್ಕರ್, ಭಾಗ್ಯವತಿ ಕುರುಬರ, ಸುಮಿತ್ರಾ ಮಾಂಗಜಿ, ಬೆರೆಟ್ಟೊ, ಶ್ರೀಕಾಂತ ಗಾಯಕವಾಡ, ರಾಯಪ್ಪ ಹುಡೇದ, ಅನ್ವರಖಾನ ಬಾಗೇವಾಡಿ, ಸತ್ತಾರ ಬಾತಖಂಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು