ಬುಧವಾರ, ನವೆಂಬರ್ 20, 2019
20 °C

ಕ್ರಿಕೆಟ್‌: ಎಚ್‌ಎಸ್‌ಸಿ ‘ಎ’ ಜಯಭೇರಿ

Published:
Updated:
Prajavani

ಹುಬ್ಬಳ್ಳಿ: ಕಿಶೋರ ಕಾಮತ್‌ (71) ಹಾಗೂ ನಿಲೇಶ ಖಿಲಾರಿ (52) ಅರ್ಧಶತಕಗಳ ಬಲದಿಂದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡ (ಎಚ್‌ಎಸ್‌ಸಿ), ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ 110 ರನ್‌ಗಳ ಸುಲಭ ಗೆಲುವು ಪಡೆಯಿತು.

ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಚ್‌ಎಸ್‌ಸಿ ಕ್ಲಬ್‌ 27 ಓವರ್‌ಗಳಲ್ಲಿ 9 ವಿಕೆಟ್‌ಗೆ 205 ರನ್‌ ಕಲೆಹಾಕಿತು. ಎದುರಾಳಿ ಬೆಳಗಾವಿಯ ಆನಂದ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡ 21.1 ಓವರ್‌ಗಳಲ್ಲಿ 95 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ಬೆಳಗಾವಿಯ ತಂಡದ ರೋಹಿತ್ ಪಾಟೀಲ ಐದು ಓವರ್‌ ಬೌಲಿಂಗ್ ಮಾಡಿ ಪ್ರಮುಖ ಐದು ವಿಕೆಟ್‌ಗಳನ್ನು ಉರುಳಿಸಿದರು. ಹುಬ್ಬಳ್ಳಿ ತಂಡದ ರಜತ್ ಹೆಗ್ಡೆ ಐದು ವಿಕೆಟ್‌ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌ ‘ಎ’ ತಂಡ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡವನ್ನು 73 ರನ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಬೆಳಗಾವಿ ತಂಡ 36.4 ಓವರ್‌ಗಳಲ್ಲಿ 168 ರನ್‌ ಗಳಿಸಿತು. ಎಂ. ಶಿವಂ (37), ಪಾರ್ಥ ಪಾಟೀಲ (27) ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಹುಬ್ಬಳ್ಳಿ ತಂಡದ ವಿನ್ಸೆಂಟ್‌ ಬಾಬುರಾವ್ 16 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಸಾಧಾರಣ ಗುರಿ ಬೆನ್ನು ಹತ್ತಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ 26.5 ಓವರ್‌ಗಳಲ್ಲಿ 95 ರನ್‌ ಕಲೆಹಾಕಿ ಆಲೌಟ್‌ ಆಯಿತು. ಓಂಕಾರ ವೆರ್ಣೆಕರ್‌ ಮತ್ತು ಎಸ್‌. ವಸಂತ್ ತಲಾ ಮೂರು ವಿಕೆಟ್‌ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರತಿಕ್ರಿಯಿಸಿ (+)