ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಹಿಂಬಾಲಿಸಿದ ಯುವಕ; ಪ್ರಕರಣ ದಾಖಲು

Published 26 ಮೇ 2024, 16:24 IST
Last Updated 26 ಮೇ 2024, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಿಳೆಯನ್ನು ಪದೇಪದೇ ಹಿಂಬಾಲಿಸುತ್ತಿದ್ದ ವ್ಯಕ್ತಿಯ ವಿರುದ್ಧ ಇಲ್ಲಿನ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶ ಮೂಲದ, ಇಲ್ಲಿನ ಉಣಕಲ್‌ ನಿವಾಸಿ ರಾಮಜಾಸ್‌ ಯಾದವ್‌ ವಿರುದ್ಧ ಸ್ಥಳೀಯ 32 ವರ್ಷದ ಮಹಿಳೆ ದೂರು ನೀಡಿದ್ದಾರೆ. ಬೈರಿದೇವರಕೊಪ್ಪದ ದರ್ಗಾದ ಬಳಿಯ ಬಸ್‌ ಸ್ಟಾಪ್‌ ಬಳಿ ನಿಂತಿದ್ದಾಗ, ಮುಜುಗರ ಆಗುವ ರೀತಿಯಲ್ಲಿ ರಾಮಜಾಸ್‌ ಹಿಂಬಾಲಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೂಡಿಕೆ ನೆಪದಲ್ಲಿ ವಂಚನೆ: ಗೋಲ್ಡ್‌ ಮ್ಯಾನ್‌ ಸಚ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ವಿಕಾಸ ನಗರದ ಗಿರಿಶ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹8.99 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಗಿರೀಶ ಅವರಿಗೆ ಸಂದೇಶ ಕಳುಹಿಸಿದ ವಂಚಕ, ಅವರ ಫೋನ್‌ ನಂಬರ್‌ ಅನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿದ್ದಾನೆ. ಅದನ್ನು ನಂಬಿದ ಅವರು ಹಣ ವರ್ಗಾಯಿಸಿದ್ದಾರೆ.

ಅದೇ ರೀತಿ ಹಳೇಹುಬ್ಬಳ್ಳಿಯ ಉಸ್ಮಾನ್‌ ಜಮಾದಾರ್‌ ಅವರಿಗೂ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ ವಂಚಕರು, ಅವರಿಂದ ₹10.03 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣದ ದಾಖಲಾಗಿದೆ.

ಗಾಂಜಾ ಮಾರಾಟ, ಆರೋಪಿ ಬಂಧನ: ಇಲ್ಲಿನ ಗದಗ ರಸ್ತೆಯ ಚೆಲ್ಲಿ ಮೈದಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿ, ₹74 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕೇಶ್ವಾಪುರದ ಬಾಜಿಲ್‌ ಅಂಥೋನಿ ಬಂಧಿತ ಆರೋಪಿ. ಇನ್‌ಸ್ಪೆಕ್ಟರ್‌ ಬಿ.ಕೆ. ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಪ್ರಕರಣ ದಾಖಲಾಗಿದೆ.

ಇಬ್ಬರ ಬಂಧನ: ಇಲ್ಲಿನ ದೇಶಪಾಂಡೆನಗರ ಹಾಗೂ ಜನತಾ ಬಜಾರ್‌ ಬಳಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇಶಪಾಂಡೆ ನಗರದಲ್ಲಿ ಅನುಮಾನಸ್ಪದವಾಗಿ ತಿರುಗುತ್ತಿದ್ದ ಜ್ಯೋತಿಬಾ ಗಟ್ಟಿ (24) ಹಾಗೂ ಜನತಾ ಬಜಾರ್‌ನಲ್ಲಿ ತಿರುಗಾಡುತ್ತಿದ್ದ ಮುಂಡಗೋಡದ ಶೆಟ್ಟೆಪ್ಪ ಬೋವಿವಡ್ಡರ (37) ವಿರುದ್ಧ ಪ್ರಕರಣ ದಾಖಲಾಗಿದೆ.

ಲ್ಯಾಪ್‌ಟಾಪ್ ಕಳವು: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಲ್ಲಿಯ ಹಳೇಹುಬ್ಬಳ್ಳಿಯ ಜುಬೇರಲಿ ಸವಣೂರ ಅವರ ₹45 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವು ಆಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT