ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಮೃತ ನೌಕರನ ಪತ್ನಿಗೆ ಉಚಿತ ಬಸ್ ಪಾಸ್

Last Updated 11 ಸೆಪ್ಟೆಂಬರ್ 2020, 16:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ಮೃತ ನೌಕರನ ಪತ್ನಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಪಾಸ್‌ ನೀಡಲಾಗಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಪಾಸ್‌ ವಿತರಣೆ ಮಾಡಿದರು.

ಪಾಟೀಲ ಮಾತನಾಡಿ ‘ಮೃತಪಟ್ಟ ಸಂಸ್ಥೆಯ ಸಿಬ್ಬಂದಿಯ ಕುಟುಂಬದವರ ಬಹುದಿನಗಳ ಬೇಡಿಕೆ ಈಗ ಈಡೇರಿದೆ. ಅವರು ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು’ ಎಂದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಕಲ್ಯಾಣ ಸಂಸ್ಥೆ ಅಧ್ಯಕ್ಷ ಅಶೋಕ ಆರ್‌. ಪಾಟೀಲ ಮಾತನಾಡಿ ‘ಸಂಸ್ಥೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಮೃತಪಟ್ಟರೆ ಆ ನೌಕರನ ಪತ್ನಿಗೂ ಉಚಿತವಾಗಿ ಪಾಸ್‌ ಕೊಡಬೇಕು. ಜಿಲ್ಲೆಯಲ್ಲಿ ಕೋವಿಡ್‌ನಿಂದ ಬಹಳಷ್ಟು ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವಾರು ನೌಕರರಿಗೂ ಸೋಂಕು ತಗುಲಿದೆ. ಆದ್ದರಿಂದ ₹50 ಲಕ್ಷ ಜೀವವಿಮೆ ಮಾಡಿಸಬೇಕು, ಮೃತ ವ್ಯಕ್ತಿಯ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡಬೇಕು’ ಎಂದು ಮನವಿ ಮಾಡಿದರು.

ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ವೈ. ನಾಯಕ, ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ, ಲೆಕ್ಕಾಧಿಕಾರಿ ಸಂಜಯ ಮಾಸುಮಳಿ, ಉಗ್ರಾಣಾಧಿಕಾರಿ ಎನ್‌.ಎಫ್‌. ಹೊಸಮನಿ, ಆಡಳಿತಾಧಿಕಾರಿ ನಾಗಮಣಿ ಭೋವಿ, ಹುಬ್ಬಳ್ಳಿ–ಧಾರವಾಡ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಎಂ.ಎಲ್‌. ಮುಂಡರಗಿ, ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕ ಜಿ.ಬಿ. ಹುಯಿಲಗೋಳ ಮತ್ತು ಸಂಸ್ಥೆ ನಿರ್ದೇಶಕ ಅಶೋಕ ಮಳಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT