ಮಂಗಳವಾರ, ಮೇ 24, 2022
27 °C

ಮೂರುಸಾವಿರ ಮಠದ ಶ್ರೀಗಳಿಗೆ ಗುರು ನಮನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರ 63ನೇ ಜನ್ಮದಿನದ ಅಂಗವಾಗಿ, ಫೆ. 18ರಂದು ಡಾ. ವಿಷ್ಣು ಸೇನಾ ಸಮಿತಿಯ ಜಿಲ್ಲಾ ಘಟಕದಿಂದ ಶ್ರೀಗಳಿಗೆ ‘ಗುರುಭ್ಯೋ ನಮಃ’ ಗುರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಶ್ರೀಗಳ ಸಾನ್ನಿಧ್ಯದಲ್ಲಿ ಬೆಳಿಗ್ಗೆ 10.30ಕ್ಕೆ ಮಠದ ಮೂಜಗಂ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ವಹಿಸಲಿದ್ದಾರೆ. ಸಿನಿಮಾ ನಿರ್ದೇಶಕ ನಾಗೇಂದ್ರ ಮಾಗಡಿ (ಪಾಂಡು) ವಿಶೇಷ ಆಹ್ವಾನಿತರಾಗಿ ಭಾವಹಿಸಲಿದ್ದಾರೆ’ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮೃತ್ಯುಂಜಯ ಹಿರೇಮಠ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ:

‘ಸಮಾಜ ಸೇವಕ ಅಕ್ರಂ ಹುಸೇನ್ (ಮುನ್ನ) ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಸ್ಕಿಪ್ಪಿಂಗ್ ಕ್ರೀಡಾಪಟು ಐಶ್ವರ್ಯ ಹುಬ್ಬಳ್ಳಿಮಠ ಅವರಿಗೆ ಜಿಲ್ಲಾ ಮಟ್ಟದ ಕರುನಾಡ ಸಂಪತ್ತು ಪ್ರಶಸ್ತಿ, ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಮಲ್ಲೇಶಪ್ಪ ಬಿಸಿರೊಟ್ಟಿ, ಪಾರ್ವತಿ ದಂಡಿನ, ಈಶ್ವರ ಸಂಗಟಿ, ಗುರುನಗೌಡ ಪಾಟೀಲ ಹಾಗೂ ಈಶ್ವರ ಮಾಲ್ಲನ್ನವರ ಅವರಿಗೆ ಆದರ್ಶ ರೈತರು ಪ್ರಶಸ್ತಿ ನೀಡಲಾಗುವುದು’ ಎಂದರು.

‘ಸೈನಿಕರಾದ ನಾಗರಾಜ ಗವಳಿ, ಮಹಾಂತೇಶ ಸಿದ್ಧಾಪುರ, ಫರ್ವಿಜ ಹವಾಲ್ದಾರ, ಉಳವಪ್ಪ ಡೊನ್ನಿ, ರಂಗಪ್ಪ ಆಲೂರ, ಶಿಕ್ಷಕರಾದ ಸರ್ವಮಂಗಳಾ ಮಠಪತಿ, ಚಂದ್ರಮತಿ ಹುಟಗಿ, ಭಾಗ್ಯಜ್ಯೋತಿ ಕೋಟಿಮಠ, ಪ್ರಭಾಕರ ಜಿ., ಎಸ್‌.ಎಚ್. ಕೊಳ್ಳಿ, ಸಾಧಕರಾದ ಮಲ್ಲಪ್ಪ ಪೂಜಾರಿ, ಸ್ತುತಿ ಕುಲಕರ್ಣಿ, ಅಶೋಕ ನಾಡಿಗೇರ, ಮಾರುತಿ ಬಡಿಗೇರ, ಪ್ರಕಾಶ ಹೂಗಾರ, ವಿಷ್ಣುವರ್ಧನ್ ಅಭಿಮಾನಿಗಳಾದ ರಾಮಚಂದ್ರ ಕುಲಕರ್ಣಿ, ಎಂ.ಎಂ. ಮೋರಖ, ಅರವಿಂದ ಮುಳಗುಂದ, ಮೋಹನ ಸಿಂಗ್ ಭವಾನಿ, ಚಂದ್ರಶೇಖರ ಹೂಣ್ಣನ್ನವರ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಯ ಗಳಿಸಿದ ಸಮಿತಿಯ ಸಿದ್ಧಯ್ಯ ಬಳಗಲಿ ಮತ್ತು ಗುರುನಾಥ ಚಲವಾದಿ  ಅವರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

ಸಮಿತಿಯ ದೇವರಾಜ ಗೌಡರ, ಶಂಕರ ಸಿದ್ದಾಪುರ ಹಾಗೂ ದಾವಲಸಾಬ ನದಾಫ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.