ಮಂಗಳವಾರ, ಡಿಸೆಂಬರ್ 1, 2020
22 °C

ಹುಬ್ಬಳ್ಳಿ–ಕಥಿಹಾರ್‌ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನೈರುತ್ಯ ರೈಲ್ವೆ ನ. 6ರಂದು ಹುಬ್ಬಳ್ಳಿ–ಬಿಹಾರದ ಕಥಿಹಾರ್‌ ನಡುವೆ ವಿಶೇಷ ದರದಲ್ಲಿ ಸೂಪರ್‌ಫಾಸ್ಟ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ವ್ಯವಸ್ಥೆ ಮಾಡಿದೆ.

ಅಂದು ರಾತ್ರಿ 9.30ಕ್ಕೆ ಇಲ್ಲಿಂದ ಹೊರಡುವ ರೈಲು 8ರಂದು ರಾತ್ರಿ 9.30ಕ್ಕೆ ಕತಿಹಾರ್‌ ತಲುಪಲಿದೆ. ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್‌, ಧೋನೆ, ಕರ್ನೂಲ್‌ ಸಿಟಿ, ಮೆಹಬೂಬನಗರ, ಕಾಚೀಗೂಡ ಮಾರ್ಗದಲ್ಲಿ ಸಂಚರಿಸಲಿದೆ.

ನ. 7ರಂದು ವಾಸ್ಕೋಡಗಾಮ–ಬಿಹಾರದ ಸರ್ಹಾಸ ನಡುವೆ ವಿಶೇಷ ರೈಲು ವಿಶೇಷ ದರದಲ್ಲಿ ಸಂಚರಿಸಲಿದೆ. ಸಂಜೆ 6 ಗಂಟೆಗೆ ವಾಸ್ಕೋಡಗಾಮದಿಂದ ಹೊರಟು 9ರಂದು ಸಂಜೆ 4 ಗಂಟೆಗೆ ಸರ್ಹಾಸ ಮುಟ್ಟಲಿದೆ. ಮಡಗಾಂವ್‌, ಥಿವಿಮ್‌, ರತ್ನಗಿರಿ, ಚಿಪ್ಲುನ್‌, ಕಲ್ಯಾಣ ಮಾರ್ಗದಲ್ಲಿ ತೆರಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.