ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಫಲಿತಾಂಶ: ಹುಬ್ಬಳ್ಳಿ ಸಾನಿಕಾ ರಾಜ್ಯಕ್ಕೆ ಮೂರನೇ ಟಾಪರ್

Last Updated 18 ಜೂನ್ 2022, 7:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಇಲ್ಲಿನ ಜೆಸಿ ನಗರದ ಮಹಿಳಾ ಮಹಾವಿದ್ಯಾಲಯದ ಸಾನಿಕಾ ರವಿಶಂಕರ ಗುಂಡೂರಾವ್ 593 ಅಂಕಗಳನ್ನು ದಾಖಲಿಸಿ ರಾಜ್ಯ ಮಟ್ಟದಲ್ಲಿ ಮೂರನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಗೆ ಸಹಪಾಠಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಲೇಜು ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು, ಸಂಭ್ರಮಾಚರಣೆ ನಡೆಯಿತು.ಸಾನಿಕಾಗೆ ಪುಷ್ಟ ನೀಡಿ, ಸ್ವಾಗತಿಸಲಾಯಿತು.

ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ.‌ಕಾಲೇಜಿನ‌ ಶಿಕ್ಷಕರ ಎಲ್ಲರ ಸಹಕಾರಕ್ಕೆ ಈ ಫಲ ಸಿಕ್ಕಿದೆ. ಕಾನೂನು ವ್ಯಾಸಂಗ ಮಾಡುವ ಉದ್ದೇಶದಿಂದ ಕಲಾ ವಿಭಾಗ ಆಯ್ಕೆ ಮಾಡಿಕೊಂಡೆ. ಈ‌ ಸಾಧನೆಯಲ್ಲಿ ಪಾಲಕರ ಸಹಕಾರ ಸಾಕಷ್ಟು ಇದೆ ಎಂದು‌ ಟಾಪರ್ ಸಾನಿಕಾ ಹೇಳಿದರು.

ನನ್ನ ಮಗಳು ಅಪ್ಪಂದಿರ ದಿನಕ್ಕೆ ಒಳ್ಳೆಯ ಉಡುಗೊರೆ ‌ನೀಡಿದ್ದಾಳೆ. ಮೊದಲಿನಿಂದಲು ಅವಳು ಓದಿನಲ್ಲಿ ಮುಂದೆ ಇದ್ದಳು ಎಂದು ಸಾನಿಕಾ‌ ತಾಯಿ ರಾಜೇಶ್ವರಿ ಹೇಳಿದರು.

ಹಲವು ವರ್ಷಗಳ ಶ್ರಮಕ್ಕೆ ಇವತ್ತು ಫಲ‌ ಸಿಕ್ಕಿದೆ. ಸಾನಿಕಾ ಪರೀಕ್ಷೆ ಬರೆದಾಗಲೇ ಟಾಪರ್ ಆಗುವ ವಿಶ್ವಾಸ‌ ಇತ್ತು. ಇಂಗ್ಲಿಷ್ ಮಾಧ್ಯಮದಿಂದ ಬಂದರು ಅವಳು ಕಲಾ‌ ವಿಭಾಗ ಆಯ್ಕೆ ಮಾಡಿಕೊಂಡು ರಾಜ್ಯ ಕ್ಕೆಟಾಪರ್ ಆಗಿರುವುದು ಕಾಲೇಜಿಗೆ ಹೆಮ್ಮೆ ತಂದಿದೆ ಎಂದು ಪ್ರಾಚಾರ್ಯೆ ಅನುರಾಧಾ ಹೊಸಕೋಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT