ನಿರ್ಲಕ್ಷ್ಯಕ್ಕೆ ಒಳಗಾದ ಕಿಮ್ಸ್‌ ಶೌಚಾಲಯ

7
ನಿತ್ಯ ಎರಡು ಸಾವಿರ ಮಂದಿ ಹೊರರೋಗಿಗಳ ವಿಭಾಗದಲ್ಲಿ ನೋಂದಣಿ

ನಿರ್ಲಕ್ಷ್ಯಕ್ಕೆ ಒಳಗಾದ ಕಿಮ್ಸ್‌ ಶೌಚಾಲಯ

Published:
Updated:
Prajavani

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್‌)ಯ ಆವರಣದಲ್ಲಿರುವ ಶೌಚಾಲಯಗಳು ಸ್ವಚ್ಛತೆ ಇಲ್ಲದೇ ಗಬ್ಬೆದ್ದು ನಾರುತ್ತಿವೆ. ಇದರಿಂದ ರೋಗಿಗಳು, ಸಂಬಂಧಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದ್ದಾರೆ.

ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೆ ಹಾಗೂ ನಿರ್ವಹಣೆಯೂ ಕಾಣದ ಶೌಚಾಲಯಗಳು ಗುಟ್ಕಾ ಉಗುಳುವ, ಖಾಲಿ ಬಾಟಲಿಗಳನ್ನು ಹಾಕುವ ಕಸದ ತೊಟ್ಟಿಯಂತಾಗಿವೆ.

ಶೌಚಾಲಯಕ್ಕೆ ಚಾವಣಿಯೂ ಬಟಾಬಯಲಾಗಿವೆ. ಸೊಳ್ಳೆ, ರೋಗಾಣುಗಳಿಗೆ ಆಶ್ರಯ ತಾಣವಾಗಿವೆ.

ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿರುವ ಶೌಚಾಲಯ ಅವ್ಯವಸ್ಥೆಯಿಂದ ಕೂಡಿರುವುದರಿಂದ ರೋಗ ಹರಡುವ ಕೇಂದ್ರವಾಗಿದೆ. ಅಗತ್ಯ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಜನರು ಆಸ್ಪತ್ರೆ ಆವರಣದ ಖಾಲಿ ಜಾಗವನ್ನು ಅವಲಂಬಿಸುವಂತಾಗಿದೆ.

ಇರುವ ಶೌಚಾಲಯಗಳ ನಿರ್ವಹಣೆಯೂ ಸರಿಯಾಗಿಲ್ಲದ ಕಾರಣ ರೋಗಿಗಳು, ಅವರ ಸಂಬಂಧಿಕರು ಸಮಸ್ಯೆ ಅನುಭವಿಸುವಂತಾಗಿದೆ. ಆಸ್ಪತ್ರೆಗೆ ಬರುವ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು ಎಂದು ಶಿವಲಿಂಗ ಆಗ್ರಹಿಸಿದರು. ‌

ಆಸ್ಪತ್ರೆಯ ಶೌಚಾಲಯಕ್ಕೂ, ಚರಂಡಿಗಳಿಗೂ ವ್ಯತ್ಯಾಸವಿಲ್ಲದಾಗಿದೆ. ಬಾಗಿಲೂ ಇಲ್ಲದ ಶೌಚಾಲಯಗಳಿಂದ ಕೆಟ್ಟ ವಾಸನೆ ಆಸ್ಪತ್ರೆ ಒಳಗೂ ಬರುತ್ತದೆ. ಜನ ಮೂಗುಮುಚ್ಚಿ ಓಡಾಡಬೇಕಾದ ಸ್ಥಿತಿ ಇದೆ ಎಂದು ಪ್ರವೀಣ ಬೆಂಟೂರು ದೂರಿದರು.

‘ಆಸ್ಪತ್ರೆ ಆವರಣದಲ್ಲಿರುವ ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಸುಲಭ ಶೌಚಾಲಯ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಕಿಮ್ಸ್‌ ನಿರ್ದೇಶಕ ಡಾ. ಡಿ.ಡಿ.ಬಂಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

*
ಆಸ್ಪತ್ರೆಯ ಶೌಚಾಲಯಕ್ಕೆ ಹೋಗಲು ಆತಂಕವಾಗುತ್ತದೆ. ಅಷ್ಟೊಂದು ಗಬ್ಬೆದ್ದು ನಾರುತ್ತಿವೆ. ಆಸ್ಪತ್ರೆಯ ಸಮೀಪ ಯಾವ ವ್ಯವಸ್ಥೆಯೂ ಇಲ್ಲ. ಅನಿವಾರ್ಯವಾಗಿ ಈ ಶೌಚಾಲಯ ಬಳಸುವಂತಾಗಿದೆ.
-ಅನಸೂಯ ಹೊಸಮನಿ, ಅಂಚಟಗೇರಿ

*
ನಿತ್ಯ ಎರಡು ಸಾವಿರ ಮಂದಿ ಹೊರರೋಗಿಗಳ ವಿಭಾಗದಲ್ಲಿ ನೋಂದಣಿಯಗುತ್ತಾರೆ. ಸಹಜವಾಗಿಯೇ ಶೌಚಾಲಯದ ಅಗತ್ಯ ಹೆಚ್ಚಿದೆ. ಆದಷ್ಟು ಬೇಗ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು.
-ಮಂಜುಳಾ ದೇವಿ, ಎಸ್ಟೇಟ್‌ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !