ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ವ್ಯಾಪ್ತಿ ಹೆಚ್ಚಿಸುವ ಪ್ರಕ್ರಿಯೆಗೆ ಕಳೆದ ವಾರ ಚಾಲನೆ ಸಿಕ್ಕಿದೆ. ಈಗಿರುವ ತನ್ನ ವ್ಯಾಪ್ತಿಯ ಗಡಿಗೆ ಹೊಂದಿಕೊಂಡಿರುವ 46 ಗ್ರಾಮಗಳನ್ನು ಸಂಪೂರ್ಣವಾಗಿ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುವ ಪ್ರಸ್ತಾವವನ್ನು ‘ಹುಡಾ’ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದೆ.

ಪ್ರಸ್ತಾವಕ್ಕೆ ಅನುಮೋದನೆ ದೊರೆತಲ್ಲಿ, ಅವಳಿ ನಗರದ ವ್ಯವಸ್ಥಿತ ಅಭಿವೃದ್ಧಿಗೆ ನೆರವಾಗಲಿದೆ. ನಿವೇಶನ ಅಭಿವೃದ್ಧಿಪಡಿಸಲು, ಭೂಮಿ ದರ ನಿಯಂತ್ರಿಸಲು ಹಾಗೂ ಭೂ ಮಾರಾಟದಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಲು ಇದರಿಂದ ಸಹಾಯವಾಗಲಿದೆ.

ಪ್ರಸ್ತುತ ಹುಡಾ 408 ಚದರ ಕಿ.ಮೀ ವ್ಯಾಪ್ತಿ ಹೊಂದಿದೆ. 46 ಗ್ರಾಮಗಳ ಸೇರ್ಪಡೆ ಬಳಿಕ ಇದರ ವ್ಯಾಪ್ತಿ 712 ಚದರ ಕಿ.ಮೀ ಆಗಲಿದೆ. ಹುಬ್ಬಳ್ಳಿ ತಾಲ್ಲೂಕಿನ 13, ಧಾರವಾಡ ತಾಲ್ಲೂಕಿನ 27 ಹಾಗೂ ಕಲಘಟಗಿ ತಾಲ್ಲೂಕಿನ 6 ಹಳ್ಳಿಗಳು ಹೊಸದಾಗಿ ಹುಡಾ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿವೆ. ವಿಶೇಷವಾಗಿ ಧಾರವಾಡ ತಾಲ್ಲೂಕಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇದಕ್ಕೂ ಮೊದಲು 21 ಗ್ರಾಮಗಳಿದ್ದವು.

ಹಾಲಿ ಹುಡಾ ವ್ಯಾಪ್ತಿ 40,208 ಹೆಕ್ಟೇರ್ ಪ್ರದೇಶವಿದೆ. ಹೊಸದಾಗಿ 35,546 ಹೆಕ್ಟೇರ್ ಪ್ರದೇಶ ಸೇರ್ಪಡೆ ಮಾಡುವ ಪ್ರಸ್ತಾವ ಇದೆ. ಸರ್ಕಾರದಿಂದ ಅನುಮೋದನೆ ದೊರೆತರೆ ಆಗ ಹುಡಾ ವ್ಯಾಪ್ತಿ ಪ್ರದೇಶ 75,754 ಹೆಕ್ಟೇರ್ ಪ್ರದೇಶವಾಗಲಿದೆ. ಇದಲ್ಲದೇ, ಹೊಸ ವ್ಯಾಪ್ತಿಯಲ್ಲಿ 17 ಲಕ್ಷ ಜನಸಂಖ್ಯೆ ಸೇರಲಿದೆ.

4 ದಶಕಗಳ ಬಳಿಕ

ಹುಡಾ ಪ್ರದೇಶ ವ್ಯಾಪ್ತಿಯನ್ನು 1980ರ ದಶಕದಲ್ಲಿ ಹಿಗ್ಗಿಸಲಾಗಿತ್ತು. ಆಗ ಹು–ಧಾ ಮಹಾನಗರ ಪಾಲಿಕೆಯ 67 ವಾರ್ಡ್ ಹಾಗೂ ಅದಕ್ಕೆ ಹೊಂದಿಕೊಂಡ ಗ್ರಾಮ ಪಂಚಾಯಿತಿಯ ಕೆಲ ಭಾಗಗಳನ್ನು ಮಾತ್ರ ಸೇರಿಸಲಾಗಿತ್ತು.

‘ಹೊಸ ಹಳ್ಳಿಗಳು ಹುಡಾ ವ್ಯಾಪ್ತಿಗೆ ಸೇರುವುದರಿಂದ ಅಕ್ರಮ ಬಡಾವಣೆಗಳ ಹಾವಳಿ ನಿಯಂತ್ರಿಸಬಹುದು. ನಿಶ್ಚಿಂತೆಯಿಂದ ನಿವೇಶನ ಅಥವಾ ಮನೆ ಕೊಳ್ಳಬಹುದು. ರಿಯಲ್ ಎಸ್ಟೇಟ್ ಚೇತರಿಕೆ ಆಗುತ್ತದೆ. ಭೂಮಿಯ ಮಾಲೀಕರಿಗೆ ಒಳ್ಳೆಯ ದರ ಸಿಗುತ್ತದೆ. ಗ್ರಾಹಕರಿಗೆ ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ ಸೇರಿ ಎಲ್ಲ ವ್ಯವಸ್ಥೆ ಒಳಗೊಂಡ ಸುಸಜ್ಜಿತ ಬಡಾವಣೆ ಸಿಗುತ್ತದೆ’ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ತಿಳಿಸಿದರು.

4 ದಶಕಗಳ ನಂತರ ಹುಡಾ ವ್ಯಾಪ್ತಿ ವಿಸ್ತರಣೆಗೆ ಪ್ರಸ್ತಾವ ಅತಿ ಹೆಚ್ಚು ಧಾರವಾಡ ತಾಲ್ಲೂಕಿನ 27ಹಳ್ಳಿಗಳು ಸೇರ್ಪಡೆ 712 ಚದರ ಕಿ.ಮೀ.ಗೆ ಹಿಗ್ಗಲಿದೆ ಹುಡಾ ವ್ಯಾಪ್ತಿ

ಹುಡಾ ವ್ಯಾಪ್ತಿಗೆ ಹೊಸ ಗ್ರಾಮಗಳನ್ನು ಸೇರಿಸುವುದರಿಂದ ಅಲ್ಲಿ ರಸ್ತೆ ಬೀದಿ ದೀಪ ಚರಂಡಿ ಒಳಗೊಂಡ ಮೂಲಸೌಕರ್ಯ ಒದಗಿಸಲು ನೆರವಾಗುತ್ತದೆ. ಸುಸಜ್ಜಿತ ಬಡಾವಣೆಗಳು ನಿರ್ಮಾಣವಾಗುತ್ತವೆ
ಶಾಕೀರ ಸನದಿ ಹುಡಾ ಅಧ್ಯಕ್ಷ

ಹುಡಾ ಸೇರಲಿರುವ ಹೊಸ ಗ್ರಾಮಗಳು

ಹುಬ್ಬಳ್ಳಿ ತಾಲ್ಲೂಕು: ರೇವಡಿಹಾಳ, ದೇವರಗುಡಿಹಾಳ, ಪರಸಾಪುರ, ಬಡನಾಳ, ಮಾವನೂರ, ಬುಡರಸಿಂಗಿ, ಸಿದ್ದಾಪುರ, ಮುರಾರಿಹಳ್ಳಿ, ಅದರಗುಂಚಿ, ಹಲ್ಯಾಳ, ಶಹರವೀರಾಪುರ, ಕುಸುಗಲ್ಲ, ಸುಳ್ಳ

ಕಲಘಟಗಿ ತಾಲ್ಲೂಕು: ದೇವಲಿಂಗಿಕೊಪ್ಪ, ದಾಸನೂರ, ಧುಮ್ಮವಾಡ, ಕುರನಕೊಪ್ಪ, ಕಡನಕೊಪ್ಪ, ಚಲಮತ್ತಿ

ಧಾರವಾಡ ತಾಲ್ಲೂಕು: ಕೊಟೂರ, ಅಗಸನಹಳ್ಳಿ, ಶಿಂಗನಹಳ್ಳಿ, ಹೆಗ್ಗೇರಿ, ವರವನಗಲವಿ, ಚಿಕ್ಕಮಲ್ಲಿಗವಾಡ, ದಡ್ಡಿಕಮಲಾಪುರ, ಮಂಡಿಹಾಳ, ಮುಗದ, ಕ್ಯಾರಕೊಪ್ಪ, ಜುಂಜಲಕಟ್ಟಿ, ಬಾಡ, ಬೆನಕನಕಟ್ಟಿ, ಮನಗುಂಡಿ, ನಾಯಿಕನಹುಳಿಕಟ್ಟೆ, ಶಿವಳ್ಳಿ, ಮಾರಡಗಿ, ನವಲೂರ ಥಡಧಬೀಲಾ, ಅಲ್ಲಾಪುರ (ಸೋಮಾಪುರ), ಘೋಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಕಮಲಾಪುರ, ದಾಸನಕೊಪ್ಪ, ದೇವಗಿರಿ ಎಂ. ನರೇಂದ್ರ, ಗೋವನಕೊಪ್ಪ ಎಂ. ನರೇಂದ್ರ, ನೀರಲಕಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.